ಕುವೈಟ್: ಬಂಟೋತ್ಸವ 08 : ವಿಶೇಷ ಕಾರ್ಯಕ್ರಮ -ಕೋಟಿ ಚೆನ್ನಯ- ಯಕ್ಷಗಾನ ಹಾಗೂ ಕೋಲ |
ಪ್ರಕಟಿಸಿದ ದಿನಾಂಕ : 2008-05-18
ಕುವೈಟ್ ಇತಿಹಾಸದಲ್ಲಿಯೇ ಪ್ರಥಮ ಪ್ರದರ್ಶನ : ಅಪರೂಪದ ಅವಕಾಶ
ಕುವೈಟ್, ಮೇ 18: ಬರುವ ಮೇ 30 ರ ಶುಕ್ರವಾರದಂದು ಬಂಟರ ಸಂಘ ಕುವೈಟ್ ತನ್ನ ಏಳನೆಯ ವಾರ್ಷಿಕೋತ್ಸವವವಾದ ಬಂಟೋಸ್ತವ -2008 ಕಾರ್ಯಕ್ರವಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದೆ. ತುಳುನಾಡಿನ ಯಕ್ಷಗಾನವನ್ನು ಕುವೈಟಿನಲ್ಲಿ ಇದೇ ಪ್ರಥಮ ಬಾರಿಗೆ ಪ್ರದರ್ಶಿಸಲು ಸಂಘ ಸಕಲ ಸಿದ್ಧತೆಗಳನ್ನು ನಡೆಸಿದೆ.
ಕಳೆದ ಐವತ್ತು ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಪುಂಡು ವೇಷದ ಗಂಡುಗಲಿ, ದಿಗಿಣದ ರಾಜ, ಪುತ್ತೂರ್ದ ಮುತ್ತು, ಯಕ್ಷ ನಾಟ್ಯ ಚತುರ ಎಂಬ ಖ್ಯಾತಿ ಗಳಿಸಿರುವ ಖ್ಯಾತ ಕಲಾವಿದ ಪುತ್ತೂರು ಶ್ರೀಧರ್ ಭಂಡಾರಿಯವರು ಈ ಪ್ರದರ್ಶನದಲ್ಲಿ ಮುಖ್ಯ ಪಾತ್ರ ವಹಿಸಲಿದ್ದಾರೆ.
ಇವರೊಂದಿಗೆ -ಭಾವರಸ ಗಾಂಭೀರ್ಯ- ಕೀರ್ತಿಯ ಭಾಗವತರಾದ -ಪದ್ಯನ ಗಣಗತಿ ಭಟ್ ಹಾಗೂ ಹಾಸ್ಯ ಕಲಾವಿದ ಬಂಟ್ವಾಳ ಜಯರಾಂ ಆಚಾರ್ಯ ಜನತೆಯನ್ನು ರಂಜಿಸಲಿದ್ದಾರೆ.
ಇವರ ಪಾತ್ರಸಜ್ಜಿಕೆಯಲ್ಲಿ ತುಳುನಾಡ ಅಮರ-ಬೊಳ್ಳಿಲು- ಕೋಟಿ ಚೆನ್ನಯ - ಎಂಬ ಯಕ್ಷಗಾನವನ್ನು ಬರುವ 30ನೇ ಏಪ್ರಿಲ್ ಶುಕ್ರವಾರದಂದು ಕುವೈಟ್ ದಾಯಾ ಬಡಾವಣೆಯ ಕುವೈಟ್ ಫೆನ್ಸಿಂಗ್ ಸೊಸೈಟಿ ಹಾಲ್ ಸಭಾಂಗಣದಲ್ಲಿ(ಎರಡನೆಯ ರಿಂಗ್ ರೋಡ್, ಇಸ್ತಿಖ್ಲಾಲ್ / ಫಹಹೀಲ್ ಎಕ್ಸ್ ಪ್ರೆಸ್ ವೇ ಬಳಿ) ಮಧ್ಯಾಹ್ನ ಎರೆಡು ಘಂಟೆಯಿಂದ ಪ್ರಾರಂಭವಾಗುವಂತೆ ಆಯೋಜಿಸಲಾಗಿದೆ.
ಪ್ರದರ್ಶನವು ಉಚಿತವಾಗಿದ್ದು ಅಪರೂಪದ ಈ ಸದವಕಾಶವನ್ನು ಉಪಯೋಗಿಸಿಕೊಳ್ಳಲು ಎಲ್ಲಾ ಅಭಿಮಾನಿಗಳಿಗೆ ಕರೆ ನೀಡಲಾಗಿದೆ. ನಿಗದಿತ ಸ್ಥಳಾವಕಾಶವಿದ್ದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
ಅಷ್ಟೇ ಅಲ್ಲದೆ ವಿವಿಧ ವಿನೋದಾವಳಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಯಕ್ಷಗಾನ ಪ್ರದರ್ಶನದ ಪೂರ್ವದಲ್ಲಿ ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ -ಕೋಲ- ವನ್ನೂ ಪ್ರದರ್ಶಿಸಲಾಗುವುದು.
ಹೆಚ್ಚಿನ ಮಾಹಿತಿ ಹಾಗೂ ಸ್ಥಳ ನೋಂದಾವಣೆಗಾಗಿ ಸಂಘದ ಕಾರ್ಯಕರ್ತರಲ್ಲಿ ಕೆಳಗಿನ ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ: 7269160/9044765
ಅಥವಾ ಕೆಳಗಿನ ಈ ಮೇಲ್ ವಿಳಾಸಕ್ಕೆ ಬರೆಯಬಹುದಾಗಿದೆ. E-mail: KuwaitBunts@yahoo.com/hotmail.com
ಈ ಕಾರ್ಯಕ್ರಮಕ್ಕೆ ಸರ್ವರಿಗೂ ಬಂಟರ ಸಂಘದ ಅಧ್ಯಕ್ಷ ಹಾಗೂ ಸದಸ್ಯರ ಬಳಗ ಹಾರ್ದಿಕ ಸ್ವಾಗತ ಬಯಸುತ್ತದೆ.
President & Committee members, Buntara Sangha - Kuwait Mob: +965 7269160 www.BuntsKuwait.com
ವರದಿಯ ವಿವರಗಳು |
 |
ಕೃಪೆ : ಬಂಟರ ಸಂಟ ಕುವೈಟ್ ಪ್ರಕಟಣೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-05-18
|
|
|