ದೋಹಾ: ಲುಲು ಅಡುಗೆ ಸ್ಪರ್ಧೆ : ನಾಲ್ಕು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳ ಮಹಾಪೂರ |
ಪ್ರಕಟಿಸಿದ ದಿನಾಂಕ : 2008-05-12
ನಾಲ್ಕು ಸಾವಿರ ಅಡುಗೆಗಳನ್ನು ಆಸ್ವಾದಿಸಿ ತೀರ್ಪು ನೀಡಲು ತೀರ್ಪುಗಾರರ ಹೆಣಗಾಟ: ನಾಲ್ಕನೆಯ ಫುಡ್ ಫೆಸ್ಟಿವಲ್ ಕಂಡ ಯಶಸ್ವೀ ಸ್ಪರ್ಧೆ
ದೋಹಾ, ಮೇ 12 : ಇಲ್ಲಿನ ಪ್ರಖ್ಯಾತ ಲುಲು ಹೈಪರ್ ಮಾರ್ಕೆಟ್ ಆಯೋಜಿಸಿರುವ ಫುಡ್ ಫೆಸ್ಟಿವಲ್ ಉತ್ಸವದ ಅಂಗವಾಗಿ ನಡೆದಿದ್ದ ಅಡುಗೆ ಸ್ಪರ್ಧೆಯಲ್ಲಿ 4,039 ಸ್ಪರ್ಧಿಗಳು ತಮ್ಮ ಅತ್ಯುತ್ಕೃಷ್ಟ ಅಡುಗೆಗಳೊಂದಿಗೆ ಹಾಜರಾಗಿದ್ದು ಹೊಸ ದಾಖಲೆಯಾಗಿದೆ.
ಸತತ ನಾಲ್ಕು ವರ್ಷಗಳಿಂದ ನಡೆದುಬರುತ್ತಿರುವ ಈ ಸ್ಪರ್ಧೆಯಲ್ಲಿ ಈ ವರ್ಶದ ಮಹಾಪೂರವೇ ನಿರ್ಣಾಯಕರ ಪಾಲಿಗೆ ದೊಡ್ಡ ತೊಡಕಾಗಿದೆ.
ಶುಕ್ರವಾರ ಮೇ ಹತ್ತರಂದು ಪ್ರಾರಂಭವಾದ ಈ ಉತ್ಸವವನ್ನು ಲುಲು ಹೈಪರ್ ಮಾರ್ಕೆಟ್ ಪ್ರಾಂತೀಯ ನಿರ್ದೇಶಕರಾದ ಮೊಹಮ್ಮದ್ ಅಲ್ತಾಫ್ ಹಾಗೂ ಮೋನಾ ಸುಲೈತಿಯವರಿಂದ ಉದ್ಘಾಟನೆ ಕಂಡಿತ್ತು.
ಸ್ಪರ್ಧಿಗಳ ಮಹಾಪೂರದಲ್ಲಿ ಬಿಡುವುದು ಯಾವುದನ್ನು ಎಂಬುದೇ ಅತ್ಯಂತ ಕಷ್ಟಕರ ನಿರ್ಣಯವಾಗಿದೆ ಎಂದು ನಿರ್ಣಾಯಕರು ತಮ್ಮ ಗೋಳು ತೋಡಿಕೊಂಡಿದ್ದಾರೆ. ಮೋನಾ ಸುಲೈತಿ, ಉಶಾ ರವಿಶಂಕರ್, ವೇಣಿ ಮಲ್ರೋಯ್, ನಾಗ ಚಿಟೋಯಿ, ಮುನೀರ್ ಓ ತಬ್ಬಾಹ್, ಡೇವಿಡ್ ಕೋಯಿಂಗ್ ಹಾಗೂ ಕೀಥ್ ಸ್ಮಿತ್ ನಿರ್ಣಾಯಕರಾಗಿದ್ದರು.
ಮೇ ಹದಿನೈದರವರೆಗೆ ನಡೆಯಲಿರುವ ಉತ್ಸವದಲ್ಲಿ ಅಂದೇ ವಿಜೇತರನ್ನು ಪ್ರಕಟಿಸಲಾಗುವುದು.
ವರದಿಯ ವಿವರಗಳು |
 |
ಕೃಪೆ : ದ ಪೆನಿನ್ಸುಲಾ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-05-12
|
|
|