ಅಂಧ್ರ ವಿದ್ಯಾರ್ಥಿನಿ ಕೊಲೆ ಪ್ರಕರಣ: ಭಾರತೀಯನ ವಿಚಾರಣೆ |
ಪ್ರಕಟಿಸಿದ ದಿನಾಂಕ : 2008-05-10
ಲಂಡನ್: ಇಲ್ಲಿನ ವೊಲ್ವರ್ಹಾಂಪ್ಟನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಆಂಧ್ರಪ್ರದೇಶದ ಸಮ್ರಾಜ್ಯೋ ಜೋತಿರ್ಮಯಿ ವೆಂಪಾಲಾ ಎಂಬ ವಿದ್ಯಾರ್ಥಿನಿಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ24 ವರ್ಷದ ಭಾರತೀಯನನ್ನು ಬರ್ಮಿಂಗ್‌ಹ್ಯಾಮ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶುಕ್ರವಾರ ಹಾಜರುಪಡಿಸಲಾಗಿದೆ.
ವಿಜಯವಾಡಾ ಮೂಲದ ಜೋತೀರ್ಮಯಿ (23) ಎಂಬ ಯುವತಿ ಮಂಗಳವಾರ ತೀವ್ರವಾದ ತೆಲೆ ಗಾಯಗಳಿಂದ ಮೃತಪಟ್ಟಿದ್ದರೆ, ಶಂಕಿತ ನಾಗರಾಜ್ ಕುಮಾರ್ ನಲ್ಲೂರಿ ಎಂಬಾತ ಅದೇ ಖಾಸಗಿ ನಿವಾಸದಲ್ಲಿ ತೀವ್ರವಾಗಿ ಗಾಯಗೊಂಡಿರುವುದು ಪತ್ತೆಯಾಗಿತ್ತು. ಬರ್ಮಿಂಗ್‌ಹ್ಯಾಮ್‌ನ ಉಪನಗರದ ಹ್ಯಾಂಡ್ಸವರ್ತ್‌ನಲ್ಲಿ ಜೋತಿರ್ಮಯಿ ವಾಸಿಸುತ್ತಿದ್ದಳು.
ಬರ್ಮಿಂಗ್‌ಹ್ಯಾಮ್‌ನ ಸಿಟಿ ಆಸ್ಪತ್ರೆಯಲ್ಲಿ ನಲ್ಲೂರಿ ದಾಖಲಾಗಿದ್ದು ಮತ್ತು ಗುರುವಾರ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ತಕ್ಷಣ ಬಂಧಿಸಲಾಗಿದೆ.
ಕೊಲೆ ಪ್ರಕರಣದ ಕುರಿತು ವಿಚಾರಣೆಯಲ್ಲಿ ಆತನನ್ನು ಬಂಧಿಸಿದಾಗಿನಿಂದ ಸಹಕಾರ ನೀಡುತ್ತಿದ್ದಾನೆ. ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ಪ್ರಸ್ತಾಪಿಸಿದಾಗ ಜೋತಿರ್ಮಯಿ ಕೊಲೆಗೆ ಕಾರಣ ಬಹಿರಂಗವಾಗಲಿದೆ ವೆಸ್ಟ್ ಮಿಡ್‌ಲ್ಯಾಂಡ್‌ನ ಪೊಲೀಸರು ತಿಳಿಸಿದ್ದಾರೆ.
ಹ್ಯಾಂಡ್ಸವಂರ್ತ್‌ನಿಂದ ಇಲ್ಲಿಗೆ 11 ಕಿ.ಮಿ. ದೂರ ಇರುವ ವೊಲ್ವರ್ಹಾಂಪ್ಟನ್ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿಗೆ ಜೋತಿರ್ಮಯಿ ಸೇರಿಕೊಂಡಿದ್ದರು
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-05-10
|
|
|