ಮಸ್ಕತ್: ಒಮಾನ್ ವಿದೇಶಾಂಗ ಕಾರ್ಯದರ್ಶಿ ಹಾಗೂ ಭಾರತೀಯ ವಿಧೇಶಾಂಗ ಸಚಿವರ ಭೇಟಿ |
ಪ್ರಕಟಿಸಿದ ದಿನಾಂಕ : 2008-05-09
ಸಯ್ಯಿದ್ ಬದ್ರ್ ಹಾಗೂ ಪ್ರಣವ್ ಮುಖರ್ಜಿ ಮಾತುಕತೆ : ಉಭಯ ರಾಷ್ಟ್ರಗಳ ಅಭಿವೃಧಿಗೆ ಪೂರಕ ವಿಷಯಗಳ ಚರ್ಚೆ
ನವದೆಹಲಿ, ಮೇ 9: ಒಮಾನ್ ವಿದೇಶಾಂಗ ಕಾರ್ಯದರ್ಶಿ ಸಯ್ಯಿದ್ ಬದರ್ ಬಿನ್ ಹಮದ್ ಬಿನ್ ಹಮೂದ್ ಅಲ್ ಬುಸೈದಿ ಯವರು ನವದೆಯಲಿಯಲ್ಲಿ ಭಾರತೀಯ ವಿಧೇಶಾಂಗ ಸಚಿವರಾದ ಪ್ರಣವ್ ಮುಖರ್ಜಿಯವರನ್ನು ಭೇಟಿಯಾಗಿ ಉಭಯ ರಾಷ್ಟ್ರಗಳ ಸಹಕಾರಗಳ ಪೂರಕ ವಿಷಯಗಳ ಬಗ್ಗೆ ವಿಚಾರ ವಿಮರ್ಶೆ ನಡೆಸಿದರು.
ಉಭಯ ದೇಶಗಳ ನಡುವಿನ ಉತ್ತಮ ಸಂಬಂಧ, ಸಹಕಾರ ಹಾಗೂ ಸಂಪರ್ಕಗಳ ಬಗ್ಗೆ ವಿಚಾರ ವಿಮರ್ಶೆ ನಡೆಯಿತು.
ನವದೆಹಲಿಯಲ್ಲಿರುವ ವಿದೇಶಾಂಗ ವ್ಯವಹಾರ ವಿಭಾಗದ ಮುಖ್ಯ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಆರನೆಯ ಒಮಾನಿ-ಇಂಡಿಯನ್ ಸ್ಟ್ರಾಟಿಜಿಕ್ ಮೀಟಿಂಗ್ ಎಂಬ ಹೆಸರಿನಲ್ಲಿ ನಡೆದ ಸಭೆಯಲ್ಲಿ ಸಯ್ಯಿದ್ ಬದ್ರ್ ಹಾಗೂ ಅವರ ಬಳಗ ನವದೆಹಲಿಗೆ ಆಗಮಿಸಿದೆ. ಭಾರತ ಸರ್ಕಾರದ ಉನ್ನತ ಅಧಿಕಾರಿಗಳಾದ ರಾಷ್ಟ್ರೀಯ ರಕ್ಷಣಾ ಸಲಹಾಗಾರ ಎಮ್.ಕೆ. ನಾರಾಯಣನ್, ವಿದೇಶಾಂದ ಸಚಿವ ಇ.ಅಹ್ಮದ್ ಹಾಗೂ ವಾಣಿಜ್ಯ ಸಚಿವರಾದ ಜಯರಾಂ ರಮೇಶ್ ಉಪಸ್ಥಿತರಿದ್ದರು. ಭಾರತದ ಅಧಿಕಾರಿಗಳ ನೇತೃತ್ವವನ್ನು ವಿದೇಶಾಂಗ ಸಚಿವಾಲಯದ ಪೂರ್ವ ವಿಭಾಗದ ಪ್ರಧಾನ ಕಾರ್ಯದರ್ಶಿ ಅಣ್ಣಾ ರವಿ ವಹಿಸಿದ್ದರು.
ವರದಿಯ ವಿವರಗಳು |
 |
ಕೃಪೆ : ಟೈಮ್ಸ್ ಆಫ್ ಒಮಾನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-05-09
|
|
|