ಇಬ್ಬರು ಅಪ್ರಾಪ್ತ ಮಕ್ಕಳ ಶವ ಕಾರಿನಲ್ಲಿ ಪತ್ತೆ |
ಪ್ರಕಟಿಸಿದ ದಿನಾಂಕ : 2008-05-08
ವದೆಹಲಿ, ಬುಧವಾರ, 7 ಮೇ 2008 ಭಾರತೀಯ ಮೂಲದ ವ್ಯಕ್ತಿಯೊಬ್ಬನ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳು ಸುಟ್ಟ ಕಾರೊಂದರಲ್ಲಿ ರಕ್ತದ ಮಡುವಿನಲ್ಲಿ ಸತ್ತುಬಿದ್ದಿರುವ ಘಟನೆ ಗ್ಲಾಸ್ಗೊನಿಂದ ವರದಿಯಾಗಿದ್ದು, ಬ್ರಿಟನ್ ಪೊಲೀಸರು ತಂದೆಯನ್ನು ಬಂಧಿಸಿ ತೀವ್ರ ತನಿಖೆ ನಡೆಸಿದ್ದಾರೆ. ಅಶೋಕ್ ಕಲ್ಯಾಣಜಿ ಮಕ್ಕಳಾದ 6 ವರ್ಷ ಪ್ರಾಯದ ಪಾಲ್ ಮತ್ತು 2 ವರ್ಷ ಪ್ರಾಯದ ಜಯ್ ಶವಗಳು ರಕ್ತಸಿಂಚಿತ ಕಾರಿನಲ್ಲಿ ಪತ್ತೆಯಾಗಿದ್ದವು.
ಅಶೋಕ್ ವಾಹನಕ್ಕೆ ಬೆಂಕಿ ಹಚ್ಚುವ ಯತ್ನದಲ್ಲಿ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದಾನೆಂದು ಆರೋಪಿಸಲಾಗಿದೆ. ಇಬ್ಬರು ಮಕ್ಕಳ ಸಾವನ್ನು ಹತ್ಯೆಯೆಂದು ಪರಿಗಣಿಸಿದ್ದಾಗಿ ಪೊಲೀಸರು ದೃಢಪಡಿಸಿದ್ದಾರೆ.
ಮಕ್ಕಳ ಸಾವಿಗೆ ನೊಂದಿರುವ ಅವರ ತಾಯಿ ಗಿಸೆಲೆ ರೋಸ್ ಸಂಕ್ಷಿಪ್ತ ಹೇಳಿಕೆಯಲ್ಲಿ "ಪಾಲ್ ಮತ್ತು ಜಯ್ ಸುಂದರ ಬಾಲಕರಾಗಿದ್ದು, ಇಡೀ ಕುಟುಂಬಕ್ಕೆ ಪ್ರೀತಿಪಾತ್ರರಾಗಿದ್ದರು" ಎಂದು ತಿಳಿಸಿದ್ದಾರೆ.
ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಮತ್ತು ಮಾಜಿ ಅಂಚೆಕಚೇರಿ ನೌಕರನಾದ ಕಲ್ಯಾಣಜಿ ತನ್ನ ಮಕ್ಕಳನ್ನು ವಾರಾಂತ್ಯದಲ್ಲಿ ಕಾಣುವ ಹಕ್ಕುಪಡೆದಿದ್ದನೆಂದು ಗಾರ್ಡಿಯನ್ ಸುದ್ದಿಪತ್ರಿಕೆ ವರದಿ ಮಾಡಿದೆ.
ವರದಿಯ ವಿವರಗಳು |
 |
ಕೃಪೆ : ಮೂಲ - ವೆಬ್‌ದುನಿಯಾ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-05-08
|
|
|