ಶಿಕಾಗೊ 'ಅಕ್ಕ' ವಿಶ್ವಕನ್ನಡ ಸಮ್ಮೇಳನದ ವಿಶೇಷಗಳು |
ಪ್ರಕಟಿಸಿದ ದಿನಾಂಕ : 2008-05-05
ಶಿಕಾಗೊ, ಮೇ. ೪ : ಬರುವ ಆಗಸ್ಟ್ ಕೊನೆಯ ವಾರದಲ್ಲಿ ಇಲ್ಲಿ ಜರುಗಲಿರುವ 5ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ರಿಯಾಯಿತಿ ದರಗಳಲ್ಲಿ ಪ್ರತಿನಿಧಿಗಳಾಗಿ ನೊಂದಾಯಿಸಿಕೊಳ್ಳುವವರ ಪ್ರಯೋಜನಕ್ಕಾಗಿ ಕಡೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
ಇದೇ ಭಾನುವಾರ ಮೇ 4ಕ್ಕೆ ರಿಯಾಯಿತಿ ದರಗಳ ನೊಂದಾವಣಿ ಸೌಲಭ್ಯ ಕೊನೆಗೊಳ್ಳುತ್ತದೆ. ಆಸಕ್ತರು ವಯಸ್ಕರಿಗೆ $ 200 ಮತ್ತು ಮಕ್ಕಳಿಗೆ $ 150 ಶುಲ್ಕ ಪಾವತಿಮಾಡಿ ನೊಂದಾಯಿಸಿಕೊಳ್ಳಬೇಕೆಂದು ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುತ್ತಿರುವ ಶಿಕಾಗೊದ ವಿದ್ಯಾರಣ್ಯ ಕನ್ನಡ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ ಸಮ್ಮೇಳನಕ್ಕೆ 2000ಕ್ಕೂ ಹೆಚ್ಚು ಪ್ರತಿನಿಧಿಗಳು ತಮ್ಮ ಹೆಸರುಗಳನ್ನು ನೊಂದಾವಣಿ ಮಾಡಿದ್ದಾರೆ. ಸುಮಾರು 4000 ಕನ್ನಡ ಕುಟುಂಬಗಳ ಭಾಗವಹಿಸುವಿಕೆಯನ್ನು ವಿದ್ಯಾರಣ್ಯ ಎದುರುನೋಡುತ್ತಿದೆ.
ಸಮ್ಮೇಳನದಲ್ಲಿ ವ್ಯವಸ್ಥೆಯಾಗಿರುವ ಕೆಲವು ಆಕರ್ಷಕ ಕಾರ್ಯಕ್ರಮಗಳು ಕೆಳಕಂಡಂತಿವೆ :
* ಹೊನ್ನಾರು ಜಾನಪದ ಗಾಯಕರು ತಂಡದಿಂದ "ಸಂಗೀತ ಸೌರಭ". ತಂಡದ ನೇತೃತ್ವ : ಜಾನಪದ ವಿದ್ವಾಂಸ ಪ್ರೊ. ಪಿ.ಕೆ. ರಾಜಶೇಖರ.
* ಸೂರ್ಯ ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ ಸಂಗೀತ ನೃತ್ಯ ರೂಪಕ "ಗೋಕುಲ ನಿರ್ಗಮನ". ನೇತೃತ್ವ : ಗುರು ಪ್ರಸನ್ನ ಕಸ್ತೂರಿ.
* ಹಿನ್ನೆಲೆ ಗಾಯಕರು ಮತ್ತು ಚಿತ್ರ ತಾರೆಯರ ತಂಡದಿಂದ "ಸ್ಟಾರ್ ನೈಟ್ ". ನೇತೃತ್ವ : ಸಂಗೀತ ನಿರ್ದೇಶಕ ಗುರುಕಿರಣ್.
* ಹನ್ನೆರಡು ಕಲಾವಿದರ ತಂಡ ಸಾದರಪಡಿಸುವ ವಾದ್ಯ ಸಂಗೀತ "ಕನ್ನಡವೇ ಸತ್ಯ" : ನೇತೃತ್ವ ರೇರೇರೆರೆರಾರಾ ಸಿ. ಅಶ್ವಥ್.
* ಗಣೇಶ್ ಕುದ್ರೋಳಿ ತಂಡದಿಂದ ಮ್ಯಾಜಿಕ್ ಷೋ.
* ಕೃಷ್ಣೇಗೌಡ, ಗುಂಡೂ ರಾವ್ ಮತ್ತು 'ಬೀಚಿ' ಪ್ರಾಣೇಶ್ ತ್ರಿಮೂರ್ತಿಗಳಿಂದ "ಹಾಸ್ಯಲೋಕ".
* ಟಿ.ಎಸ್. ನಾಗಾಭರಣ ಮತ್ತು ರಂಗಧ್ವನಿ (ದಕ್ಷಿಣ ಕ್ಯಾಲಿಫೋರ್ನಿಯ) ತಂಡಗಳಿಂದ ಜೋಕುಮಾರಸ್ವಾಮಿ ನಾಟಕ ಪ್ರದರ್ಶನ.
ವರದಿಯ ವಿವರಗಳು |
 |
ಕೃಪೆ : ದಟ್ಸ್‌ಕನ್ನಡ ವಾರ್ತಾ ಸಂಚಯ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-05-05
|
|
|