ಡಾಲರ್ ಮೇಲಿನ ಅವಲಂಬನೆಯಲ್ಲಿ ಬದಲಾವಣೆ ಇಲ್ಲ, ಜಿಸಿಸಿ. |
ಪ್ರಕಟಿಸಿದ ದಿನಾಂಕ : 2007-12-05
ದೋಹಾ, ಡಿಸೆಂಬರ್ ೫. ಗಲ್ಫ್ ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಜಿಸಿಸಿ ಹಣದ ಡಾಲರ್ ಮೇಲಿನ ಅವಲಂಬನೆಯನ್ನು ಮುಂದುವರೆಸುವುದಾಗಿ ಅಂತಿಮ ತೀರ್ಮಾನಕ್ಕೆ ಬರಲಾಗಿದೆ. ಬರುವ ಜನವರಿಯಲ್ಲಿ ಪ್ಯಾನ್-ಗಲ್ಫ್ ಸಾಮಾನ್ಯ ಮಾರುಕಟ್ಟೆಯನ್ನು ಉಪಕ್ರಮಿಸಲಿದೆ. ಎರೆಡು ದಿನ ನಡೆದ ಈ ಶೃಂಗಸಭೆಯಲ್ಲಿ ಇರಾನ್ ಅಧ್ಯಕ್ಷರಾದ ಮಹ್ಮೂದ್ ಅಹ್ಮದೆನಿಜಾದ್ ಅವರು ಇರಾನಿನಿಂದ ಭಾಗವಹಿಸುತ್ತಿರುವ ಪ್ರಥಮ ರಾಷ್ಟ್ರಪತಿಯಾಗಿರುವು ವಿಶೇಷವಾಗಿದೆ.
ಅಹ್ಮದೆನಿಜಾದ್ ಅವರು ತಮ್ಮ ರಾಷ್ಟ್ರದ ೧೨ ಸೂತ್ರಗಳ ಸಹಕಾರ ಒಪ್ಪಂದವನ್ನು ಸಭೆಯಲ್ಲಿ ಮಂಡಿಸಿದರು. ಅದರಲ್ಲಿ ಜಿಸಿಸಿ ಹಾಗೂ ಇರಾನ್ ನಡುವೆ ಮುಕ್ತ ಮಾರುಕಟ್ಟೆ ಹಾಗೂ ತೈಲ ಮತ್ತು ಅನಿಲ ಸ್ಥಾವರಗಳಲ್ಲಿ ಹಣ ಹೂಡಿಕೆ ಮುಖ್ಯ ಪ್ರಸ್ತಾವನೆಯಾಗಿದೆ..
ತಮ್ಮ ದೇಶದ ಅಣುಶಕ್ತಿ ಕಾರ್ಯಕ್ರಮದಲ್ಲಿ ಚಿಂತೆಮಾಡಬೇಕಾದ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಉಭಯ ದೇಶಗಳ ಸೌಹಾರ್ದಕ್ಕೆ ಈ ಸೂತ್ರಗಳು ಪರಿಣಾಮಕಾರಿಯಾಗಿವೆ ಎಂದು ಅವರು ವಿವರಿಸಿದ್ದಾರೆ. ಆದರೆ ಜಿಸಿಸಿ ನಾಯಕರು ಈ ಪ್ರಸ್ತಾವನೆಗಳನ್ನು ಸತ್ಯಕ್ಕೆ ದೂರವಾದುದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಳಿಕ ಜಿಸಿಸಿ ನಾಯಕರು ಜಿಸಿಸಿ ರಾಷ್ಟ್ರಗಳಲ್ಲಿ ಏಕಪ್ರಕಾರ ಹಣದ ಚಲಾವಣೆಗೆ ೨೦೧೦ರವರೆಗೆ ನೀಡಿದ್ದ ಗಡುವನ್ನು ಮುಂದುವರೆಸದೇ ತಮ್ಮ ಸಂಕಲ್ಪವನ್ನು ಧೃಡೀಕರಿಸಿದ್ದಾರೆ. ಸಧ್ಯಕ್ಕೆ ಡಾಲರ್ ಬೆಲೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕುಸಿಯುತ್ತಿದ್ದರೂ ಜಿಸಿಸಿ ಒಕ್ಕೂಟ ಏಕಮುಖ ತೀರ್ಮಾನದಲ್ಲಿ ಡಾಲರ್ ಬೆಲೆಗೆ ಅಂಟಿಕೊಂಡಿರುವ ತೀರ್ಮಾನ ಪ್ರಕಟಿಸಿದೆ. ಕುವೈಟ್ ಮಾತ್ರ ಈ ಮೊದಲೇ ಡಾಲರ್ ಅವಲಂಬನೆಯಿಂದ ಮುಕ್ತಿಪಡೆದಿದೆ.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ಡೇಲಿ ನ್ಯೂಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-05
|
|
|