|
|
|
ದಿನದ ಹದಿನೇಳು ಘಂಟೆ ತೆರೆದಿರುವ ವೈದ್ಯಕೀಯ ಚಿಕಿತ್ಸಾಲಯಗಳು |
ಪ್ರಕಟಿಸಿದ ದಿನಾಂಕ : 2007-12-05
ಕುವೈಟ್, ಡಿಸೆಂಬರ್ ೫. ಬರುವ ಜನವರಿ ೧ ರಿಂದ ಕುವೈಟಿನಲ್ಲಿರುವ ಎಲ್ಲಾ ಚಿಕಿತ್ಸಾಲಯಗಳೂ, ಪಾಲಿಕ್ಲಿನಿಕ್ ಗಳೂ ಪ್ರತಿದಿನ ಬೆಳಿಗ್ಗೆ ೭ರಿಂದ ಮಧ್ಯರಾತ್ರಿಯವರೆಗೆ ತೆರೆದಿರುತ್ತವೆ ಎಂದು ಆರೋಗ್ಯ ಸಚಿವಾಲಯದ ವೈದ್ಯಕೀಯ ವ್ಯವಹಾರಗಳ ವಿಭಾಗದಲ್ಲಿ ಸಹಾಯಕ ಕಾರ್ಯದರ್ಶಿಯಾಗಿರುವ ಡಾ. ಕೈಸ್ ಅಲ್ ದುವೈರಿಯವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ವೈದ್ಯರು, ವೈದ್ಯಕೀಯ ತಂತ್ರಜ್ಞರು ಮತ್ತು ನರ್ಸಿಂಗ್ ಸೇವೆ ಸಿಬ್ಬಂದಿವರ್ಗಕ್ಕೆ ಹೆಚ್ಚಿನ ಸಮಯದ ಕೆಲಸಕ್ಕಾಗಿ ಹೆಚ್ಚುವರಿ ವೇತನವನ್ನೂ ನೀಡಲಾಗುವುದು, ಸಮಯಾವಧಿಯಲ್ಲಿ ಹೆಚ್ಚಳವು ಜನನಿಬಿಡ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದೂ ಅವರು ಹೇಳಿದ್ದಾರೆ. ದಿನದ ೨೪ ಘಂಟೆ ಕೆಲಸ ನಿರ್ವಹಿಸಲು ಸಧ್ಯಕ್ಕೆ ಎರಡರಷ್ಟು ಸಿಬ್ಬಂದಿಯ ಅಗತ್ಯವಿದ್ದು ಸಧ್ಯಕ್ಕೆ ಇದರ ಸಂಭವ ಕಡಿಮೆ ಎಂದು ಅವರು ತಿಳಿಸಿದ್ದಾರೆ
ವರದಿಯ ವಿವರಗಳು |
 |
ಕೃಪೆ : ಕುವೈಟ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-05
|
|
|
|
|