ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ದಾನಿಗಳಿಗೆ ಸನ್ಮಾನ:(THE Indian Community Benevolent Fund (ICBF)

ದೋಹಾ, ಡಿಸೆಂಬರ್ ೪.  ಕಳೆದ ಶನಿವಾರ ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ) ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಐಸಿಬಿಎಫ್ ಸಂಸ್ಥೆಗೆ ವರ್ಷವಿಡೀ ಅನುದಾನ ನೀಡಿದ ಸಂಸ್ಥೆಗಳು, ಶಾಲೆಗಳು ಮತ್ತು ವ್ಯಯಕ್ತಿಕವಾಗಿ ದಾನ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು

ಈ ವರ್ಷ ಸಂಸ್ಥೆಯು ೧೦೮ ವ್ಯಕ್ತಿಗಳನ್ನೂ, ೧೭೯ ವಿದ್ಯಾರ್ಥಿಗಳನ್ನೂ, ೧೫ ವೈದ್ಯರನ್ನೂ, ೧೯ ಸಮಾಜ-ಸಾಂಸ್ಕೃತಿಕ ಸಂಸ್ಥೆಗಳನ್ನೂ, ನಾಲ್ವರು ವೃತ್ತಿಪರ ಸಂಘಟನೆಗಳನ್ನೂ ಮತ್ತು ಐದು ಕಂಪನಿಗಳನ್ನೂ ಸನ್ಮಾನಿಸಲಾಯಿತು.

ಕತರ್ ನಲ್ಲಿ ಭಾರತೀಯ ರಾಯಭಾರಿಯಾದ ಡಾ. ಜಾರ್ಜ್ ಜೋಸೆಫ್ ದಾನಿಗಳ ಸಮರ್ಪಣಾ ಭಾವನೆ ಹಾಗೂ ಐಸಿಬಿಎಫ್ ಸಂಸ್ಥೆಗೆ ನೀಡುತ್ತಾ ಬಂದಿರುವ ಅವಿರತ ಸಹಾಯಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಐಸಿಬಿಎಫ್ ವೇದಿಕೆಯು ಅವಶ್ಯವಿರುವ ಭಾರತೀಯರಿಗೆ ಆರ್ಥಿಕ, ವೈದ್ಯಕೀಯ, ನ್ಯಾಯಾಂಗ ಹಾಗೂ ಇತರ ಸಹಾಯಗಳನ್ನು ನೀಡುತ್ತಾ ಬಂದಿದೆ.

ರಾಯಭಾರಿಗಳು  ಭಾರತದ ವಿಮಾನ ನಿಲ್ದಾಣಗಳಲ್ಲಿ ಸಹಾಯ ವೇದಿಕೆಯನ್ನು ಸ್ಥಾಪಿಸುವತ್ತ ಹಾಗೂ ಪ್ರಾಂತದೊಳಕ್ಕೆ ಬರುವ ಪ್ರಯಾಣಿಕರೊಂದಿಗೆ ನಡೆಯಬಹುದಾದ ವಂಚನೆಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವ ಬಗ್ಗೆ ಒತ್ತು ನೀಡಿದರು. ಬಳಿಕ ಮಾನತಾಡಿದ ಐಸಿಬಿಎಫ್ ಸಂಸ್ಥೆಯ ಮುಖ್ಯಸ್ಥರಾದ ನೀಲಾಂಗ್ಷು ಡೇಯವರು ತಮಗೆ ಸಹಾಯ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದರು. ಈ ಸಹಾಯಗಳನ್ನು ದೇಶದಿಂದ ಹೊರಕಳಿಸಲಾಗುತ್ತಿರುವ ಅಕ್ರಮ ವಾಸಿಗಳಿಗೆ ದೇಶಕ್ಕೆ ಹಿಂತಿರುಗಲು ಉಚಿತ ವಿಮಾನದ ಟಿಕೆಟ್, ಆಸ್ಪತ್ರೆಗೆ ಸೇರಿಸಲಾಗಿರುವವರಿಗೆ ಆಸ್ಪತ್ರೆ ವೆಚ್ಚ ಭರಿಸಲು ಆರ್ಥಿಕ ಸಹಾಯ, ನ್ಯಾಯಾಂಗ ಸಹಾಯ, ವೈದ್ಯಕೀಯ ನೆರವು, ಮರುವಸತಿ ಕೇಂದ್ರದಲ್ಲಿ ಮತ್ತು ಜೈಲುಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ದೈನಂದಿನ ಅಗತ್ಯಗಳು ಹಾಗೂ ವಂಚನೆಗೊಳಗಾಗಿ ದೇಶಕ್ಕೆ ಹಿಂತಿರುಗಲಾರದೇ ಸಿಕ್ಕಿಹಾಕಿಕೊಂಡಿರುವವರಿಗೆ ಅಗತ್ಯವಾದ ನೆರವನ್ನು ನೀಡುವಲ್ಲಿ ಉಪಯೋಗಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವರ್ಷ ಹಿಂದಿನ ವರ್ಷಗಳಿಗಿಂತಲೂ ಹೆಚ್ಚಿನ ಸಹಾಯ ದೊರಕಿದೆ ಎಂದೂ ಅವರು ತಿಳಿಸಿದರು.

ಸನ್ಮಾನಿತರಾದವರಲ್ಲಿ  ಎಮ್.ಇ.ಎಸ್. ಭಾರತೀಯ ಶಾಲೆ, ಐಡಿಯಲ್ ಇಂಡಿಯನ್ ಶಾಲೆ, ಬಿರ್ಲಾ ಸಾರ್ವಜನಿಕ ಶಾಲೆ, ಡಿಪಿಎಸ್ ಮಾಡರ್ನ್ ಭಾರತೀಯ ಶಾಲೆ, ದೋಹಾ ಮಾಡರ್ನ್ ಭಾರತೀಯ ಶಾಲೆ, ಶಾಂತಿನಿಕೇತನ ಭಾರತೀಯ ಶಾಲೆ ಮತ್ತು ಅಲ್ ಖೋರ್ ಅಂತರ್ರಾಷ್ಟ್ರ್‍ಈಯ ಶಾಲೆಯ ಭಾರತೀಯ ವಿಭಾಗಗಳಿಗೆ ಸೇರಿದ  ೧೭೯ ಮಕ್ಕಳು ಸೇರಿದ್ದಾರೆ.  ಈ ಮಕ್ಕಳನ್ನು  ಐಸಿಬಿಎಫ್ ಏರ್ಪಡಿಸಿದ್ದ ಶುಭಾಶಯ ಪತ್ರ ಬಿಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ದೇಣಿಗೆ ಸಂಗ್ರಹಿಸುವಲ್ಲಿ ವಹಿಸಿದ ಮಹತ್ತರ ಪಾತ್ರಕ್ಕಾಗಿ ಸನ್ಮಾನಿಸಲಾಗಿದೆ.  

ಸಂಸ್ಥೆಗಳಲ್ಲಿ ತೆಲುಗು ಕಲಾ ಸಮಿತಿ, ಭಾರತೀಯ ಮಹಿಳೆಯರ ಸಂಘ-ಭಾರತಿ, ಕರ್ನಾಟಕ ಸಂಘ, ಕೇರಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ, ಪಲಕಾಡೆನ್ ನಟ್ಟರಂಗು, ಬಂಗಿಯ ಪರಿಶದ್, ಪಾಲಕ್ಕಾಡ್ ಎನ್ ಎಸ್ ಎಸ್ ಕಾಲೇಜ್ ಅಲುಮ್ನಿ ಅಸೋಸಿಯೇಶರ್, ಜಾಕ್ಸ್ ದೋಹಾ, ಮಹಾರಾಷ್ಟ್ರ ಮಂಡಲ, ಪ್ರೊಬಾಹೋ, ದುಖಾನ್ ಭಾರತೀಯ ಸಮಾಜ, ಆರ್ಟ್ ಆಫ್ ಲಿವಿಂ ಫೌಂಡೇಶನ್, ಸರ್ವ್ ಅಂಡ್ ಇನ್ಸ್ಪೈರ್, ಎಸ್ ಒ ಎಸ್., ಅಮೃತಾ ಸೇವಾ, ತೆಲುಗು ಕ್ರಿಶ್ಚಿಯನ್ ಫ್ರೆಂಡ್ ಶಿಪ್, ತುಳು ಕೂಟ ಮತ್ತು ಸೈರೋ ಮಲಬಾರ್ ಕಲ್ಚರಲ್ ಅಸೋಸಿಯೇಶನ್.

ಇತರ ಸಂಸ್ಥೆಗಳಲ್ಲಿ ಇನ್ಸಿಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ), ಇಂಜಿನಿಯರ್ಸ್ ಫೋರಮ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸೇರಿವೆ. ಅಕ್ರಮವಾಸಿಗಳಿಗೆ ಸ್ವದೇಶಕ್ಕೆ ವಾಪಸಾಗಲು ಸಹಕರಿಸಿದ ಏರ್ ಇಂಡಿಯಾ, ಇಂಡಿಯನ್ ಏರ್ ಲೈನ್ಸ್, ಅಲ್ ಮುಫ್ತಾ ರೆಂಟ್ ಎ ಕಾರ್, ಸಿಟಿ ಟ್ರವೆಲ್ಸ್ ಮತ್ತು ಫ್ಯಾಮಿಲಿ ಫುಡ್ ಸೆಂಟರ್ ಸಂಸ್ಥೆಗಳನ್ನು ಅಭಿನಂದಿಸಲಾಯಿತು.

ಐಸಿಬಿಎಫ್ ಕಾರ್ಯದರ್ಶಿ ಸಿಬಿ ಜೋಸೆಫ್ ಸ್ವಾಗತ ಭಾಷಣ ಹಾಗೂ ವೇಣಿ ಮಾರೋಲಿ ವಂದನಾರ್ಪಣೆ ಸಲ್ಲಿಸಿದರು.  ಕಾರ್ಯಕ್ರಮದ ನಿರೂಪಣೆ ವಿಜೀತಾ ಮ್ಯಾಥ್ಯೂ ರವರದ್ದಾಗಿತ್ತು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : gulf times
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-05


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಏಷ್ಯನ್ ಒಳಾಂಗಣ ಕ್ರೀಡಾಕೂಟಕ್ಕೆ ೩೨ ಸದಸ್ಯರ ದಂಡು; ಭಾರತ ತಂಡಕ್ಕೆ ಅಂಜು ಬಾಬಿ ಜಾರ್ಜ್ ನೇತೃತ್ವ
»ಗಿನ್ನೆಸ್ ದಾಖಲೆ ಸೇರಿದ ಕತರ್ ಕೆ.ಎಫ್.ಸಿ.
»ತುಂಡಾದ ಕೇಬಲ್ : ಅಸ್ತವ್ಯಸ್ತವಾದ ಕತರ್ ಟೆಲಿಫೋನ್ ವ್ಯವಸ್ಥೆ
»ಅನಿವಾಸಿಗಳಿಂದ ಆಚರಿಸಲ್ಪಟ್ಟ ಗಣತಂತ್ರ ದಿವಸ : ಹಬ್ಬದ ವಾತಾವರಣ
»ಇನ್ನಷ್ಟು ದುಬಾರಿಯಾಗಲಿರುವ ಭಾರತದ ಅಕ್ಕಿ.
»ತಿಜೋರಿ ಕದ್ದು ಒಡೆಯಲನುವಾಗುತ್ತಿರುವಾಗಲೇ ಪೋಲೀಸರಿಗೆ ಸಿಕ್ಕಿಬಿದ್ದ ಕಳ್ಳರು
»ಜೆಟ್ ಏರ್ ವೇಸ್ ಪ್ರಾರಂಭಿಸಿರುವ ದೋಹಾ-ಮುಂಬೈ,ಕಲ್ಲಿಕೋಟೆ ನೇರ ವಿಮಾನಯಾನ
»ಉದ್ಯೋಗಕ್ಕಾಗಿ ಬಂದವರು ಒಂಟೆಕಾವಲಿಗೆ: ಭಾರತೀಯದ ಅಳಲು
»ದೋಹ: ಕರ್ನಾಟಕ ಶಾಸ್ತ್ರೀಯ ಸಂಗೀತಪ್ರಿಯರಿಗೆ ಅಪರೂಪದ ಉಪಚಾರ
»ಸಾರಿಗೆ ಕಾನೂನುಗಳ ಅನುವಾದ ಅಗತ್ಯ: ಏಶಿಯಾ ಮೂಲದ ಅನಿವಾಸಿಗಳ ಬೇಡಿಕೆ
»ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಬಂದರೆ ದಂಡ: ಕತರ್ ಸಾರಿಗೆ ಸಚಿವಾಲಯ
»ಏರುತ್ತಿರುವ ಮೊಟ್ಟೆ ಬೆಲೆ, ಆತಂಕದಲ್ಲಿ ಬೇಕರಿಗಳು.
»ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ವಿದೇಶಿಯರ ಸಂಖ್ಯೆ ೭೦ ಮಿಲಿಯನ್!
»ಡಾಲರ್ ಮೇಲಿನ ಅವಲಂಬನೆಯಲ್ಲಿ ಬದಲಾವಣೆ ಇಲ್ಲ, ಜಿಸಿಸಿ.
»ದಾನಿಗಳಿಗೆ ಸನ್ಮಾನ:(THE Indian Community Benevolent Fund (ICBF)
»ಐಸಿಸಿ ಉತ್ಸವದಲ್ಲಿ ಮನಸೆಳೆದ ಮಕ್ಕಳ ನೃತ್ಯ
»ಆಯಾಗಳ ನೇಮಕಕ್ಕೆ ತಾತ್ಕಾಲಿಕ ತಡೆಯಾಜ್ಞೆ ಇನ್ನೂ ಪ್ರಸ್ತುತ
»ಐಡಿಯಲ್ ಇಂಡಿಯನ್ ಸ್ಕೂಲ್ ವಿಧ್ಯಾರ್ಥಿ ಅಕಾಲಿಕ ಮ್ರತ್ಯು
»೧೫ ವರ್ಷ ಒಳಗಿನವರ ಕ್ರಿಕೆಟ್-ನಾಯಕತ್ವ ವಹಿಸಿದ ಮಂಗಳೂರಿನ ಬಾಲಕ
»500ಕ್ಕೂ ಹೆಚ್ಚು ಮಕ್ಕಳ ಉಚಿತ ನೇತ್ರ ತಪಾಸಣೆ
»2016ರ ಒಲಿಂಪಿಕ್ಸ್ ಕ್ರೀಡೆಗಳ ಪ್ರಯೋಜಕತೆಗೆ ಕತಾರ್ ಯತ್ನ
»೨೦ನೆ ಮಾಂಟ್ರಿಯಲ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಕತಾರ್
»ಇಪ್ಪತ್ತು ವರ್ಷ ಪೂರೈಸಿದ ಮೊಬೈಲ್ ಟೆಲಿಕಾಂ ಕಂಪನಿ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri