ಅಪಘಾತಕ್ಕೊಳಗಾಗಿ ಸ್ಮರಣಶಕ್ತಿ ಕಳೆದುಕೊಂಡಿರುವ ತುಳು ಬಾಂಧವನ ಮನೆಯವರ ಪತ್ತೆಗಾಗಿ ಕರೆ |
ಪ್ರಕಟಿಸಿದ ದಿನಾಂಕ : 2008-04-24
ದೋಹಾ, ಕತರ್, ಏಪ್ರಿಲ್ 24: ಸುಮಾರು ಎರೆಡು ತಿಂಗಳ ಹಿಂದೆ ರಸ್ತೆ ಅಪಫಾತಕ್ಕೊಳಗಾಗಿ ಸ್ಮರಣಾಶಕ್ತಿಯನ್ನು ಕಳೆದುಕೊಂಡಿದ್ದ ತುಳು ಬಾಂಧವನನ್ನು ಗುರುತಿಸಲು ದೋಹಾ ನಿವಾಸಿ ಕನ್ನಡಿಗರಾದ ರವಿಶೆಟ್ಟಿ ಹಾಗೂ ವಾಮನ್ ಮರೋಳಿಯವರು ಕೆಲ ಸ್ನೇಹಿತರೊಂದಿಗೆ ಆಸ್ಪತ್ರೆಯನ್ನು ಸಂದರ್ಶಿಸಿ ವ್ಯಕ್ತಿಯನ್ನು ಸಂಪರ್ಕಿಸಿದ್ದರು. ಆ ಬಳಿಕ ರವಿಶೆಟ್ಟಿಯವರು ತುಳು ಕೂಟದ ಸದಸ್ಯರನ್ನು ಸಂಪರ್ಕಿಸಿ ವ್ಯಕ್ತಿಯ ವಿವರಗಳನ್ನು ಕೋರಿದ್ದರು.
ದೋಹಾದ ರುಮೈಲಾ ಆಸ್ಪತ್ರೆಯಲ್ಲಿ ಅನಾಮಧೇಯ ರೋಗಿಯಾಗಿ ದಾಖಲಾಗಿರುವ ಈ ವ್ಯಕ್ತಿಯನ್ನು ಕೆಲವರು ಗುರುತಿಸಿ ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ್ದಾರೆ. ಅವರ ವಿವರಗಳು ಇಂತಿವೆ:
ಹೆಸರು: ಉದಯ ಗಿಳಿಯಾರ್ ತಂದೆಯ ಹೆಸರು: ಚಂದ್ರ ದೇವಾಡಿಗ ತಾಯಿಯ ಹೆಸರು: ಅಕ್ಕಮ್ಮ ದೇವಾಡಿಗ ಊರು : ಬಡವಾಲಿ, ಕಾರ್ಕಡ, ಸಾಲಿಗ್ರಾಮ, ಉಡುಪಿ ೫೭೬೨೨೫
ಮೇಲಿನ ವ್ಯಕ್ತಿ ಹಾಗೂ ಅವರ ಕುಟುಂಬದವರ ವಿವರಗಳನ್ನು ತಿಳಿದವರು ತುಳುಕೂಟದ ರವಿಶೆಟ್ಟಿ ಅಥವಾ ವಾಮನ್ ಮರೋಳಿಯವರನ್ನು ಸಂಪರ್ಕಿಸಲು ಕೋರಲಾಗಿದೆ.
ವರದಿಯ ವಿವರಗಳು |
 |
ಕೃಪೆ : ವಾಮನ್ ಮರೋಳಿ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-04-24
|
|
|