ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕುವೈಟ್ ವಿಶ್ವ ಕನ್ನಡ ಸಮ್ಮೇಳನ: ಸಂಭ್ರಮದ ಮುಕ್ತಾಯ

ಕುವೈಟ್ ಡಿಸೆಂಬರ್ ೩.  ರಾಷ್ಟ್ರಕವಿ ಶ್ರೀ ಜಿ.ಎಸ್. ಶಿವರುದ್ರಪ್ಪರವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಯಾಗಿದ್ದ ಪ್ರತಿಷ್ಠಿತ ಕುವೈಟ್ ವಿಶ್ವ ಕನ್ನಡ ಸಮ್ಮೇಳನವು ಇಂದು ಸಂಭ್ರದ ಮುಕ್ತಾಯ ಕಂಡಿತು. ಕುವೈಟಿನ ಅಮೇರಿಕರ್ ಇಂಟರ್ ನ್ಯಾಷನಲ್ ಶಾಲೆಯ ಅಲ್ ರಯೀಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮ್ಮೇಳವು ಕುವೈಟ್ ಕನ್ನಡ ಸಂಘ ಮತ್ತು ಕರ್ನಾಟಕದ ಹೃದಯವಾಹಿನಿ ಸಂಸ್ಥೆಗಳು ಒಗ್ಗೂಡಿ ಯಶಸ್ವಿಯಾಗಿ ನಡೆಸಿಕೊಟ್ಟವು.

ಇಂದಿನ ಕಾರ್ಯಕ್ರಮವು ಮಾನಸಿ ಪ್ರಸಾದ್ ಅವರ ಭಕ್ತಿಗೀತೆಯೊಂದಿಗೆ ತೊಡಗಿ ಎನ್ನಾರೈ ಕನ್ನಡಿಗರ ಗೋಷ್ಠಿಯೊಂದಿಗೆ ಮುಂದುವರೆಯಿತು.  ಇದನ್ನು ಬಿ.ವಿ.ನಾಗರಾಜ್, ಸರ್ವೋತ್ತಮ ಶೆಟ್ಟಿ ಹಾಗೂ ಅರವಿಂದ ಪಾಟೀಲ್ ನಡೆಸಿಕೊಟ್ಟರು. ನಂತರ ಕವಿಗೋಷ್ಟಿಯಲ್ಲಿ ಅನೇಕ ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು. ಸರ್ವೋತ್ತಮ ಶೆಟ್ಟರ ಅನಿವಾಸಿ ಕನ್ನಡಿಗರ ಸಮಸ್ಯೆಗಳ ಕುರಿತು ಮಾಡಿದ  ಭಾಷಣಕ್ಕೆ ಸಭಿಕರು ಚಪ್ಪಾಳೆಗಳೊಂದಿಗೆ ತಮ್ಮ ಸಂತಸ ವ್ಯಕ್ತಪಡಿಸಿದರು.

ಕರ್ನಾಟಕದ ಪ್ರಮುಖ ವ್ಯಕ್ತಿಗಳಿಗೆ ವಿಶ್ವಮಾನವ ಪ್ರಶಸ್ತಿ ನೀಡಲಾಯಿತು. ಕುವೈಟಿನಲ್ಲಿ ಭಾರತದ ರಾಯಭಾರಿಯಗಿರುವ ಶ್ರೀ ಎಂ. ಗಣಪತಿ ಹಾಗೂ ಮಾಜಿ ಭಾರತದ ಕುವೈಟ್ ರಾಯಭಾರಿಯಾದ ಶ್ರೀ ಇಶಾ ಅಲ್ ಇಶಾ ಉಪಸ್ಥಿತರಿದ್ದರು.

ಸಮ್ಮೇಳನದ್ದುದ್ದಕೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು. ಕುವೈಟ್ ಕನ್ನಡ ಕೂಟದ ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು. ಶ್ರಿರಸಿಯ ಮಂಜುಶ್ರೀ , ಮೇಘನಾ ರವರಿಂದ ಕೂಚಿಪುಡಿ, ಕಲಾನಿಕೇತನ ಭರತನಾಟ್ಯಂ ಶಾಲೆ, ಮಾಲೂರು ಇವರಿಂದ ನೃತ್ಯ, ಮಾನಸಿ ಪ್ರಸಾದ್ ಅವರಿಂದ ನೃತ್ಯರೂಪಕ, ಶಿರಸಿಯ ನಾಟ್ಯಾಂಜಲಿ ಕಲಾಶಾಲೆ ಹಾಗೂ  ಬೆಂಗಳೂರಿನ   ಕಿಂಕಿಣಿ ತಂಡದವರಿಂದ ನೃತ್ಯಗಳು, ಮಕ್ಕಳಿಂದ ಯಕ್ಷಗಾನ, ಮತ್ತು ಕುವೈಟ್ ಕನ್ನಡ ಕೂಟದ ಸದಸ್ಯರಿಂದ ಶ್ರೀನವಾಸ ಕಲ್ಯಾಣ ನಾಟಕ ಪ್ರದರ್ಶಿತಗೊಂಡವು. ಮಕ್ಕಳ ಯಕ್ಷಗಾನ ಆಕರ್ಶಕವಾಗಿತ್ತು.

ಶ್ರೀ ವೀರೇಂದ್ರ ಬಾಬು ಅವರು ವಂದನಾರ್ಪಣೆ ಅರ್ಪಿಸಿದರು. ಸ್ವಾದಿಷ್ಟ ರಸದೌತಣದೊಂದಿಗೆ ಸಂಭ್ರಮದ ಮುಕ್ತಾಯ ಹಾಡಲಾಯಿತು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : daijiworld.com
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-03

ಇತರ ಸಂಭಂದಪಟ್ಟ ವರದಿಗಳು
»ಕುವೈಟ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ.
»ಕುವೈತ್ ನಲ್ಲಿ ನ.30ರಿ೦ದ ಕನ್ನಡ ಸ೦ಸ್ಕ್ರತಿ ಸಮ್ಮೇಳನ

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri