ರವಿಶಾಸ್ತ್ರಿ ಕೈಯಲ್ಲಿ ಒಲಿಂಪಿಕ್ ಜ್ಯೋತಿ ಮಸ್ಕತ್‌ನಲ್ಲಿ ಕ್ರಿಕೆಟಿಗನ ಮೋಡಿ! |
ಪ್ರಕಟಿಸಿದ ದಿನಾಂಕ : 2008-04-16
ಮಸ್ಕತ್, ಎ. ೧೫: ಭಾರತದಲ್ಲಿ ಒಲಿಂಪಿಕ್ ಜ್ಯೋತಿ ಹಿಡಿ ಯುವವರು ಯಾರು, ಒಲಿಂಪಿಕ್ ಟಾರ್ಚ್ ರಿಲೇಯ ಮಾರ್ಗ ಯಾವುದು ಎಂಬುದೆಲ್ಲ ಇನ್ನೂ ರಹಸ್ಯ ವಾಗಿಯೇ ಉಳಿದಿರುವಾಗ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ದೂರದ ಮಸ್ಕತ್‌ನಲ್ಲಿ ಒಲಿಂಪಿಕ್ಸ್ ಜ್ಯೋತಿ ಹಿಡಿದು ಸುದ್ದಿಯಾಗಿದ್ದಾರೆ!
ಸೋಮವಾರ ಜ್ಯೋತಿ ರಿಲೇಯಲ್ಲಿ ಪಾಲ್ಗೊಂಡ ರವಿಶಾಸ್ತ್ರಿ ಕೊನೆಯ ಸುತ್ತಿನಲ್ಲಿ ಕಾಣಿಸಿಕೊಂಡಾಗ ಕ್ರೀಡಾ ಭಿಮಾನಿಗಳು ಭಾರೀ ಕರತಾಡನದೊಂದಿಗೆ ಸಂಭ್ರಮಿಸಿ ದರು ಎಂಬುದಾಗಿ ಭಾರತೀಯ ಮೂಲದ ಪತ್ರಕರ್ತ ಸುನಿಲ್ ವೈದ್ಯ ತಿಳಿಸಿದ್ದಾರೆ. ಬಳಿಕ ರವಿಶಾಸ್ತ್ರಿ ಗಲ್ಫ್ ನ್ಯೂಸ್ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತ, ಇದೊಂದು ನಂಬಲಸಾಧ್ಯವಾದ ಅನುಭವ. ನಾನು ನಿಜಕ್ಕೂ ರೋಮಾಂಚನಗೊಂಡೆ ಎಂಬುದಾಗಿ ನುಡಿದರು.
ನಿಜಕ್ಕಾದರೆ ರವಿಶಾಸ್ತ್ರಿ ಜ್ಯೋತಿ ಹಿಡಿದು ಬಸ್‌ನಲ್ಲಿ ಸಾಗಬೇಕಿತ್ತು. ಆದರೆ ಮಾರ್ಗದ ಇಕ್ಕೆಲದಲ್ಲಿ ಕಿಕ್ಕಿರಿದು ನೆರೆದ ಕ್ರೀಡಾಭಿಮಾನಿಗಳನ್ನು ಕಂಡು ಪುಳಕಿತರಾದ ಅವರು . ದೂರವನ್ನು ಓಡುತ್ತಲೇ ಕ್ರಮಿಸಿದರು.
ಮಸ್ಕತ್‌ನಲ್ಲಿ ಒಲಿಂಪಿಕ್ ಜ್ಯೋತಿ ರಿಲೇ ಒಟ್ಟು 20 ಕಿ.ಮೀ. ದೂರ ಕ್ರಮಿಸಿತು.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-04-16
|
|
|