|
|
|
ಕುವೈಟ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ. |
ಪ್ರಕಟಿಸಿದ ದಿನಾಂಕ : 2007-12-02
ಕುವೈಟ್, ನವೆಂಬರ್ ೩೦. ಅತ್ಯಂತ ಕುತೂಹಲದಿಂದ ನಿರೀಕ್ಷಿಸಿದ್ದ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ಸಂಭ್ರಮದ ಉದ್ಘಾಟನೆ ಕಂಡಿತು. ರಾಷ್ಟ್ರಕವಿ ಶ್ರೀ ಜಿ.ಎಸ್. ಶಿವರುದ್ರಪ್ಪನವರು ಅಧ್ಯಕ್ಷತೆ ವಹಿದ್ದ ಸಮ್ಮೇಳನವು ನವೆಂಬರ್ ೩೦ರಂದು ಅಮೇರಿಕನ್ ಇಂಟರ್ ನ್ಯಾಷನಲ್ ಶಾಲೆಯ ಡಾ. ಕಾಮೆಲ್ ಅಲ್-ರಈಸ್ ಆಡಿಟೋರಿಯಂ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಶ್ರೀ ಸುಧಾಕರ ಶೆಟ್ಟಿಯವರು ಅಧ್ಯಕ್ಷರಾಗಿರುವ ಕುವೈಟ್ ಕನ್ನಡ ಕೂಟ ಮತ್ತು ಕರ್ನಾಟಕದ ಪ್ರಖ್ಯಾತ ಹೃದಯವಾಹಿನಿ ಸಂಸ್ಥೆಗಳು ಜಂಟಿಯಾಗಿ ಆಯೋಜಿಸುತ್ತಿವೆ.
ಐತಿಹಾಸಿಕ ವರ್ಣರಂಜಿತ ಕಾರ್ಯಕ್ರಮವು ದೀಪಬೆಳಗುವ ಪರಂಪರೆಯಿಂದ ತೊಡಗಿತು. ನಂತರ ಗಣೇಶ ಪುಷ್ಪಾಂಜಲಿ, ಕನ್ನಡ ನಾಡಗೀತೆ ಮತ್ತು ಕುವೈಟ್ ಕನ್ನಡ ಕೂಟದ ಅಧ್ಯಕ್ಷರಾಗಿರುವ ಸುಧಾಕರ ಶೆಟ್ಟಿಯವರಿಂದ ಸ್ವಾಗತ ಭಾಷಣಗಳೊಂದಿಗೆ ಮುಂದುವರೆಯಿತು. ರಾಷ್ಟ್ರಕವಿ ಶ್ರೀ ಜಿ.ಎಸ್. ಶಿವರುದ್ರಪ್ಪನವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಾರತದ ಕುವೈಟ್ ರಾಯಭಾರಿ ಶ್ರೀ ಎಮ್. ಗಣಪತಿ, ಕೆ.ಸಿ.ಎಸ್. ಕುವೈಟ್ ಸಂಸ್ಥೆಯ ಅಧ್ಯಕ್ಷಾರಾದ ಅಹ್ಮದ್ ಅಲ್ ಸಾಲೆಹ್, ಅಬುಧಾಬಿಯ ಪ್ರಮುಖ ವಾಣಿಜ್ಯೋದ್ಯಮಿಯಾಗಿರುವ ಶ್ರೀ ಬಿ.ಆರ್.ಶೆಟ್ಟಿ, ವಿಧಾನಸಭಾ ಸದಸ್ಯರಾದ ಶ್ರೀ ಸಿ.ಟಿ.ರವಿ, ಡಾ. ಕೆ.ಎ. ಅಶೋಕ್ ಪೈ, ಮತ್ತು ಮಹೇಷ್ ಜೋಷಿಯವರು ವೇದಿಕೆಯನ್ನು ಅಲಂಕರಿಸಿದ್ದರು. ಸಾಂಸ್ಕೃತಿಕ ವಿಭಾಗದ ಅಧ್ಯಕ್ಷರಾದ ಶ್ರೀ ಕೆ.ಪಿ.ಮಂಜುನಾಥ ಸಾಗರ್ ಅವರು ಅತಿಥಿಗಳನ್ನು ಸಭಿಕರಿಗೆ ಪರಿಚಯಿಸಿದರು.
ರಾಷ್ಟ್ರಕವಿ ಶ್ರೀ ಜಿ.ಎಸ್. ಶಿವರುದ್ರಪ್ಪನವರ ಹಾಗೂ ಅತಿಥಿಗಳ ಭಾಷಣದ ನಂತರ ಕರ್ನಾಟಕದ ಹಲವು ಗಣ್ಯರನ್ನು ಅವರ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಶ್ರೀ ಸಿ.ಆರ್ ಸಿಂಹ (ಕನ್ನಡ ಚಿತ್ರ ನಟ), ಶ್ರೀಮತಿ ಸಂಧ್ಯಾ ಪೈ (ತರಂಗ ವಾರಪತ್ರಿಕೆ ಸಂಪಾದಕಿ), ಮಾನಸಿ ಪ್ರಸಾದ್ (ಕರ್ನಾಟಕ ಸಂಗೀತ ಮತ್ತು ಶಾಸ್ತ್ರ್‍ಈಯ ನೃತ್ಯ) ಹೆಚ್. ರಂಗಯ್ಯ (ಸಮಾಜಸೇವೆ),ಯು.ಎ.ಇ.ಯ ಪ್ರಕಾಶ್ ರಾವ್ ಪಯ್ಯಾರ್ (ಕನ್ನಡ ಸಾಹಿತ್ಯ ಸೇವೆ), ರಂಗಶ್ರೀ(ನೃತ್ಯ), ಸಹನಾ ಭಟ್(ಭರತನಾಟ್ಯ), ಮತ್ತು ಚಾಮುಂಡಿ ರಾಮಚಂದ್ರ (ಡೊಳ್ಳು ಕುಣಿತ) ಇವರೆಲ್ಲರನ್ನೂ ಶಾಲು, ಹೂಗುಚ್ಛ ಮತ್ತು ಫಲಕಗಳೊಂದಿಗೆ ಸನ್ಮಾನಿಸಲಾಯಿತು. ಬೆಂಗಳೂರಿನ ಬಿ.ಗಣೇಶ್ ರಾವ್ ವಂದನಾರ್ಪಣೆ ಸಲ್ಲಿಸಿದರು.
ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಕರ್ನಾಟಕದಿಂದ ಆಗಮಿಸಿದ್ದ ತಂಡಗಳಾದ ಬೆಂಗಳೂರಿನ ಗುರು, ಶ್ರೀಮತಿ ರಂಗಶ್ರೀ, ಕಿಂಕಿಣಿ ತಂಡ, ಶಿರಸಿಯ ನಾಟ್ಯಾಂಜಲಿ ಭರತನಾಟ್ಯಂ ಶಾಲೆ, ಕತಾರಿನಿಂದ ಭಾವ ಗಾನ ಗಾಯಕರ ತಂಡ, ಬಳ್ಳಾರಿಯ ದೊಡ್ಡಾಟ ತಂಡ, ಶಿರಸಿಯ ಮುಂಜುಶ್ರೀ ಬಳಗ, ಕೋಲರದ ಜಯಾ ನಾಟ್ಯಕಲಾ ಅಕಾಡೆಮೆ, ನಾಟಕ ಪ್ರಸ್ತುತಪಡಿಸಿದೆ ಕತರ್ ಕನ್ನಡ ಸಂಘ, ಸೋಲೋ ನೃತ್ಯ, ದೊಡ್ಡಾಟಗಳು ದಿನವಿಡೀ ನೆರೆದಿದ್ದ ಕನ್ನಡಿಗರನ್ನು ರಂಜಿಸಿದವು. ಹಲವಾರು ಸ್ಥಳೀಯ ಸಂಘಗಳ ಕಲಾಕಾರರು ತಮ್ಮ ಪ್ರತಿಭೆಯನ್ನು ಮೆರೆದರು.
ಮನರಂಜನಾ ಕಾರ್ಯಕ್ರಮದ ಅಂಗವಾಗಿ ಚಪ್ಪಾಳೆ ಚಪ್ಪಾಳೆ, ಕಾವೇರಿ, ಈ ನಾಡು ನಮ್ಮ ನಾಡು, ಗಾಳಿಪಟ, ಉತ್ತರ ಕರ್ನಾಟಕದ ಇತಿಹಾಸ, ನೃತ್ಯ ನಾಟಕ, ಭಾರತ ದರ್ಶನ, ನೃತ್ಯ ವೈಭವ, ದಶಾವತಾರ, ಜಾನಪದ ನೃತ್ಯ, ವಿನೋದ ಪ್ರದರ್ಶನ, ವಿನೋದ ನಾಟಕ, ದೊಡ್ಡಾಟ, ಡೊಳ್ಳು ಕುಣಿತ ಇತ್ಯಾದಿಗಳು ಪ್ರದರ್ಶಿತಗೊಂಡು ಕರ್ನಾಟದ ಪರಂಪರೆಯನ್ನು ಮೆರೆಸಿದವು.
ಮನರಂಜನಾ ಕಾರ್ಯಕ್ರಮದ ಅಂಗವಾಗಿ ಚಪ್ಪಾಳೆ ಚಪ್ಪಾಳೆ, ಕಾವೇರಿ, ಈ ನಾಡು ನಮ್ಮ ನಾಡು, ಗಾಳಿಪಟ, ಉತ್ತರ ಕರ್ನಾಟಕದ ಇತಿಹಾಸ, ನೃತ್ಯ ನಾಟಕ, ಭಾರತ ದರ್ಶನ, ನೃತ್ಯ ವೈಭವ, ದಶಾವತಾರ, ಜಾನಪದ ನೃತ್ಯ, ವಿನೋದ ಪ್ರದರ್ಶನ, ವಿನೋದ ನಾಟಕ, ದೊಡ್ಡಾಟ, ಡೊಳ್ಳು ಕುಣಿತ ಇತ್ಯಾದಿಗಳು ಪ್ರದರ್ಶಿತಗೊಂಡು ಕರ್ನಾಟದ ಪರಂಪರೆಯನ್ನು ಮೆರೆಸಿದವು.
ಕಾರ್ಯಕ್ರಮದಲ್ಲಿ ಕವನ/ಆರೋಗ್ಯ/ಮಾಧ್ಯಮ/ಉದ್ಯಮ ವಿಷಯಾಧಾರಿತ ವಿಚಾರಗೋಷ್ಠಿಗಳಿದ್ದವು. ಕನ್ನಡ್ ಹಾಸ್ಯ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಶ್ರೀ ಮಾನು ಬಾಳಿಗಾರ್, ಮಾಧ್ಯಮ ಗೋಷ್ಟಿಯ ಅಧ್ಯಕ್ಷತೆಯನ್ನು ಇ.ವಿ. ಸತ್ಯನಾರಾಯಣ, ವೈದ್ಯಕೀಯ ಗೋಷ್ಟಿಯ ಅಧ್ಯಕ್ಷತೆಯನ್ನು ಡಾ. ಪದ್ಮಿನಿ ಪ್ರಕಾಶ್, ಹಾಸ್ಯ ಗೋಷ್ಟಿಯನ್ನು ಪುತ್ತೂರಿನ ಡಾ. ಪುಟ್ಟೂರಾಯರು, ಹಾಗೂ ಉದ್ಯಮ ಗೋಷ್ಟಿಯ ಅಧ್ಯಕ್ಷತೆಯನ್ನು ಶ್ರೀ ಎಮ್.ಬಿ.ಜಯರಾಮ್ ವಹಿಸಿದ್ದರು.
ಸಭಿಕರಿಗೆ ಭವ್ಯ ಕರ್ನಾಟಕದ ಸಸ್ಯಾಹಾರಿ ರಸದೌತಣ ಮದ್ಯಾಃಹ್ನ ಮತ್ತು ರಾತ್ರಿ ಬಡಿಸಲಾಯಿತು. ಈ ಪರಿಯ ಕಾರ್ಯಕ್ರಮ ಕುವೈಟಿನಲಿ ಮೊದಲ ಬಾರಿ ಆಗಿದ್ದು ಸುಮಾರು ೧೬೫ ವಿಶೇಷ ಅತಿಥಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದು ದಾಖಲೆಯಾಗಿದೆ.
ವರದಿಯ ವಿವರಗಳು |
 |
ಕೃಪೆ : ದೈಜಿವರ್ಲ್ಡ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-02
|
|
|
|
|