ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕೆಲಸಕ್ಕೆಂದು ಮಸ್ಕತ್‌ಗೆ ಹೋದವಳ ಮಾರಾಟ!

ಪಿಟಿ‌ಐ, ಕೊಚ್ಚಿ, ಮಾ.೩೦.ಉದ್ಯೋಗ ಅರಸಿ ಓಮನ್ ರಾಷ್ಟ್ರಕ್ಕೆ ತೆರಳಿದ ಮಹಿಳೆಯೊಬ್ಬರು ವೇಶ್ಯಾವಾಟಿಕೆ ಜಾಲಕ್ಕೆ ನೂಕಲ್ಪಟ್ಟಿದ್ದಾಳೆ. ಆಕೆಯನ್ನು ಪ್ರಾಣಿಗಳಂತೆ ಒಬ್ಬರಿಂದ ಒಬ್ಬರಿಗೆ ಮಾರಲಾಗಿದೆ. ದಿನಕ್ಕೆ 30 ಜನರ ಕಾಮದಾಸೆ ತಣಿಸುವ ಕೆಲಸ ವಹಿಸಲಾಗಿದೆ. ಆ ಮಹಿಳೆಯನ್ನು ಆಕೆಯ ಗಂಡನೇ ರಕ್ಷಿಸಿದ್ದು, ಈಗ ಗಂಡ- ಹೆಂಡತಿ ಇಬ್ಬರನ್ನೂ ಓಮನ್ ಸರ್ಕಾರ ರಹಸ್ಯ ಸ್ಥಳವೊಂದರಲ್ಲಿ ಇಟ್ಟಿದೆ. ಇವರಿಬ್ಬರೂ ನಕಲಿ ವೀಸಾ ಮೇಲೆ ಓಮನ್‌ಗೆ ಹೋಗಿದ್ದ ಹಿನ್ನೆಲೆಯಲ್ಲಿ ಈ ಪತಿ- ಪತ್ನಿಗೆ ಮತ್ತೊಂದು ಅಪಾಯ ಎದುರಾಗಿದೆ.

ಈ ಕತೆ ಆರಂಭವಾಗಿದ್ದು ಹೀಗೆ... ಉತ್ತರ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿದ್ದ ವ್ಯಕ್ತಿಯೊಬ್ಬನಿಗೆ ಉದ್ಯಮದಲ್ಲಿ ನಷ್ಟವಾಯಿತು. ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಆಗ ಆ ವ್ಯಕ್ತಿ ಹಾಗೂ ಆತನ ಪತ್ನಿ ಓಮನ್‌ಗೆ ತೆರಳಲು ನಿರ್ಧರಿಸಿದರು. ಇಬ್ಬರೂ ವೀಸಾಗೆ ಅರ್ಜಿ ಸಲ್ಲಿಸಿದರು. ಆದರೆ, ಅವರು ಸಂಪರ್ಕಿಸಿದ್ದು ನಕಲಿ ವೀಸಾ ಜಾಲವನ್ನು. ಆದರೂ, ಪತ್ನಿಗೆ ವೀಸಾ ದೊರೆಯಿತು. ಆಕೆ ಜ. ೨೧ ರಂದು ಮಸ್ಕತ್ ವಿಮಾನ ಏರಿದಳು.

ಆದರೆ, ಮಸ್ಕತ್‌ನಲ್ಲಿ ಇಳಿಯುತ್ತಿದ್ದಂತೆ ಆಕೆ ನೇರವಾಗಿ ವೇಶ್ಯಾವಾಟಿಕೆ ಜಾಲಕ್ಕೆ ಬಿದ್ದಿದ್ದಳು. ಹಲವರು ಆಕೆಯನ್ನು ಒಬ್ಬರಿಂದ ಒಬ್ಬರಿಗೆ ಮಾರಿದರು. ದಿನಕ್ಕೆ ೩೦ ಮಂದಿಯ ಕಾಮತೃಷೆ ತಣಿಸಬೇಕಾಗಿತ್ತು. ಒಂದು ದಿನ ಆಕೆ ಕೇರಳದಲ್ಲಿರುವ ತನ್ನ ಪತಿಗೆ ದೂರವಾಣಿ ಕರೆ ಮಾಡಿ ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡಳು. ಕೂಡಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದಳು. ಪತಿ ಸಮಾಧಾನ ಮಾಡಿದ. ಕೂಡಲೇ ನಕಲಿ ವೀಸಾ ಜಾಲದ ಮೂಲಕವೇ ವೀಸಾ ಪಡೆದು ಮಸ್ಕತ್‌ಗೆ ತೆರಳಿದ. ಅಲ್ಲಿದ್ದ ಪಿಂಪ್ ಒಬ್ಬನನ್ನು ಸಂಪರ್ಕಿಸಿ ಪತ್ನಿಯ ಬಗ್ಗೆ ಕೇಳತೊಡಗಿದ. ಆ ಪಿಂಪ್ ಆಕೆ ನಿಮಗೆ ಹೇಗೆ ಗೊತ್ತು? ಎಂದು ಕೇಳಿದಾಗ, ನನ್ನ ಸ್ನೇಹಿತನ ಹೆಂಡತಿ ಎಂದು ಪತಿ ಸುಳ್ಳು ಉತ್ತರ ಕೊಟ್ಟ.

3500 ರು. ಹಣ ಪಡೆದ ಪಿಂಪ್, ಪತ್ನಿ ಬಳಿಗೆ ಆಕೆಯ ಪತಿಯನ್ನು ಕರೆದೊಯ್ದ. ಕೇರಳದ ಮಹಿಳೆಯೊಬ್ಬಳು ನಡೆಸುತ್ತಿದ್ದ ವೇಶ್ಯಾವಾಟಿಕೆ ಜಾಲದಲ್ಲಿದ್ದಳು ಪತ್ನಿ. ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿದ ಪತಿ. ಮಸ್ಕತ್ ಅಧಿಕಾರಿಗಳು ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ ನಡೆಸಿ ಆ ವ್ಯಕ್ತಿಯ ಪತ್ನಿಯನ್ನು ರಕ್ಷಿಸಿದರು.

ಇದೀಗ ಪತಿ- ಪತ್ನಿಯನ್ನು ರಹಸ್ಯ ಸ್ಥಳವೊಂದಕ್ಕೆ ಕರೆದೊಯ್ಯಲಾಗಿದೆ. ನಕಲಿ ವೀಸಾ ಮೇಲೆ ಓಮನ್‌ಗೆ ಬಂದಿದ್ದ ಹಿನ್ನೆಲೆಯಲ್ಲಿ ಓಮನ್ ಸರ್ಕಾರ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡ ಪ್ರಭ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-03-31


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri