ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕುವೈಟ್ ಮೊಬೈಲ್ ಸಂಸ್ಥೆಯ ೨೬% ಪಾಲುದಾರಿಕೆ ಸೌದಿ ಟೆಲಿಕಾಂ ಪಾಲು.

ಕುವೈಟ್, ನವೆಂಬರ್ ೨೯. ಕುವೈಟಿನ ಮೂರನೆಯ ಮೊಬೈಲ್ ಕಂಪನಿಯ ೨೬% ಶೇರುಗಳನ್ನು ಸೌದಿ ಅರೇಬಿಯಾದ ಸೌದಿ ಟೆಲಿಕಾಂ ಕಂಪನಿ (ಎಸ್.ಟಿ.ಸಿ) ಇತರ ಒಂಭತ್ತು ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸಿ ಗೆದ್ದುಕೊಂಡಿದೆ. ಈ ವಿಷಯವನ್ನು ಕುವೈಟ್ ಇನ್ವೆಸ್ಟ್ ಮೆಂಟ್ ಆಥಾರಿಟಿ ಪ್ರಕಟಿಸಿದೆ. ಹೊಸ ಮೊಬೈಲ್ ಸೇವೆ ಬರುವ ವರ್ಷದ ಆದಿಯಿಂದ ಪ್ರಾರಂಭವಾಗಲಿದೆ.

ಎಸ್.ಟಿ.ಸಿ. ಟೆಂಡರ್ ಕರೆದ ಹರಾಜಿನಲ್ಲಿ ಪ್ರಸ್ತಾವಿಸಿದ ೨೪೮.೫ ಕುವೈತಿ ದಿನಾರ್ (೯೦೭.೬ ಮಿಲಿಯನ್ ಡಾಲರುಗಳು)ನ ಮೊತ್ತ ಅತೀ ಹೆಚ್ಚಿನದ್ದಾಗಿದ್ದು ಇನ್ನೂ ಕುವೈಟ್ ಸರ್ಕಾರದ ಮಂತ್ರಿಗಳ ಅನುಮೋದನೆ ಪಡೆಯಬೇಕಾಗಿದೆ. ಕುವೈಟ್ ರೂಪಿಸಿರುವ ಕಾನೂನಿನ ಪ್ರಕಾರ ೨೪% ಪಾಲು ಹೊಸ ರಾಷ್ಟ್ರೀಯ ಸಂಸ್ಥೆಗಳಿಗೂ, ೫೦% ಕುವೈಟಿ ನಾಗರಿಕರಿಗೆ ಸಾರ್ವಜನಿಕ ಸಂಸ್ಥೆಗಳ ಮೂಲಕವೂ ಹಾಗೂ ಉಳಿದ ಪಾಲು ಏಕಮಾತ್ರ ಹೂಡಿಕೆದಾರರಿಗೆ ಹಂಚಿಕೆಯಾಗಿದೆ. ಎರಡನೆಯ ಅತಿ ಹೆಚ್ಚು ಪ್ರಸ್ತಾವನೆ ಕುವೈಟಿನ ಅತಿದೊಡ್ಡ ಇಸ್ಲಾಮಿಕ್ ಬ್ಯಾಂಕಿಂಗ್ ಸಂಸ್ಥೆಯಾದ ಕುವೈಟಿ ಫೈನಾನ್ಸ್ ಹೌಸಿನಿಂದ ಬಂದಿದ್ದು ಮೊತ್ತವು ೧೯೫.೧ ಮಿಲಿಯನ್ ಕುವೈಟಿ ದಿನಾರ್ (೭೧೨ ಯು.ಎಸ್. ಡಾಲರು)ಗಳಾಗಿದೆ. ಯು.ಎ.ಇ.ಯ ಎತಿಸಲಾತ್ ಸಂಸ್ಥೆಯು ೧೮೦ ಮಿಲಿಯನ್ ದಿನಾರ್ (೬೫೬.೯ ಮಿಲಿಯನ್ ಯು.ಎಸ್.ಡಾಲರ್) ಮೂರನೆಯ ಅತಿಹೆಚ್ಚು ಪ್ರಸ್ತಾವನೆಯಗಿತ್ತು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಸೌದಿ ಗೆಜೆಟ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-11-29


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri