ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಶುವೈಖ್ ತೀರದಲ್ಲಿ -ಆಮೆ ಕಾರ್ಯಾಚರಣೆ-

ಕುವೈಟ್, ನವೆಂಬರ್ ೨೮. ಜಪಾನ್ ಹಾಗೂ ಕುವೈಟ್ ಜನತೆಯನ್ನು ಬಳಿತರುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಏಳನೆಯ ತೀರ ಸ್ವಚ್ಚ ಅಭಿಯಾನ  ಅಥವಾ -ಆಮೆ ಕಾರ್ಯಾಚರಣೆ- ಯು Kuwait Environmental Protection Society (KEPS) ಯೊಂದಿಗೆ ಜಂಟಿಯಾಗಿ ತೀರ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಕೈಜೋಡಿಸಿದರು. ಸುಮಾರು ೧೬೦ಕ್ಕೂ ಹೆಚ್ಚು ಜಪಾನ್ ನಾಗರಿಕರು ಹಾಗೂ ಕೆಇಪಿಎಸ್ ಸದಸ್ಯರು, ವಯೋಮಾನಬೇಧವಿಲ್ಲದೆ ಈ ಅಭಿಯಾನದಲ್ಲಿ ಪಾಲ್ಗೊಂಡರು. ಒಂದು ಘಂಟೆಯ ಕಾಲ ಅಲೆದ ಅವರು ಸುಮಾರು ೩೦ ದೊಡ್ಡ ಪ್ಲಾಸ್ಟಿಕ್ ಚೀಲಗಳ ಭರ್ತಿ ಕಸವನ್ನು ಸಂಗ್ರಹಿಸಿ ತೀರಗಳನ್ನು ಸ್ವಚ್ಛವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜನತೆಗೆ ಪರಿಸರ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ  ಹಾಗೂ ಕುವೈಟ್ ಮತ್ತು ಜಪಾನ್ ನಾಗರಿಕರ ನಡುವೆ ಉತ್ತಮ ಬಾಂಧವ್ಯ ರೂಪುಗೊಳ್ಳಲು ಈ ಅಭಿಯಾನ ಸಹಕಾರಿಯಾಗಿದೆ ಎಂದು ಜಪಾನ್ ಸಂಘಟನೆಯ ಅಧ್ಯಕ್ಷರಾದ ಹಿಡೆಯುಕಿ ಉರಾಟಾ ಅವರು ತಿಳಿಸಿದ್ದಾರೆ.
ಈ ವಾರ್ಷಿಕ ಅಭಿಯಾನವು ೨೦೦೦ದಿಂದಲೂ ನಡೆಯುತ್ತಾ ಬಂದಿದೆ ಎಂದೂ ಅವರು ತಿಳಿಸಿದ್ದಾರೆ. ಕೆಇ.ಪಿಎಸ್. ಕಾರ್ಯದರ್ಶಿ ಎಂಜಿನಿಯರ್ ಹಮದ್ ಅಲ್ ಹಮದ್ ಅವರು ಹಿಂದಿನ ವರ್ಷಗಳ ಅಭಿಯಾನಗಳು ಯಶಸ್ವಿಯಾಗಿವೆಯೆಂಬುದಕ್ಕೆ ಇಂದಿನ ಅಭಿಯಾನಕ್ಕೆ ಸಿಕ್ಕ ಪ್ರೋತ್ಸಾಹವೇ ಸಾಕ್ಷಿ ಎಂದಿದ್ದಾರೆ. ಈ ಅಭಿಯಾನವು ತೀರಗಳಿಗೆ ಮೊಟ್ಟೆಯಿಡಲು ಆಗಮಿಸುವ ಸಮುದ್ರದ ಆಮೆಗಳಿಗೆ ಸಮರ್ಪಕ ಸ್ಥಳಾವಕಾಶ ನೀಡುವುದು ಅಭಿಯಾನದ ಹಿಂದಿನ ಪ್ರೇರಣೆಯಾಗಿದೆ. 

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕುವೈಟ್ ಟೈಮ್ಸ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-11-28


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri