ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಮಂತ್ರಿಮಂಡಲದಿಂದ ಅಗತ್ಯವಸ್ತುಗಳ ಬೆಲೆಯೇರಿಕೆಯ ಪರಿಶೀಲನೆ

ಮಸ್ಕತ್, ನವೆಂಬರ್ ೨೬. ಇತ್ತೀಚಿನ ದಿನಗಳಲ್ಲಿ ಜನರಿಗೆ ಚಿಂತೆಯ ವಿಷಯವಾಗಿರುವ ವಿಶ್ವವ್ಯಾಪಿ ದಿನಬಳಕೆಯ ವಸ್ತುಗಳಲ್ಲಾಗುತ್ತಿರುವ ಬೆಲೆಯೇರಿಕೆ ಬಗ್ಗೆ ತಮ್ಮ ಕಾಳಜಿ ತೋರಿರುವ HMಸುಲ್ತಾನ್ ಕಬೂಸ್ ಬಿನ್ ಸೈದ್ ಅವರು ಜನಹಿತ ರಕ್ಷಣೆ ಕಾಯುವತ್ತ ಮಂತ್ರಿಮಂಡಲದ ಸಭೆಯೊಂದಕ್ಕೆ ಕರೆ ನೀಡಿದ್ದರು. ಈ ಮಂಡಲವು ಅಗತ್ಯವಸ್ತುಗಳ ಬೆಲೆಯೇರಿಕೆಗೆ ಕಾರಣಗಳು ಹಾಗೂ ಅದರಿಂದಾಗುವ ಪರೋಕ್ಷ ಪರಿಣಾಮಗಳ ಬಗ್ಗೆ ವಿಚಾರ ವಿನಿಮಯ ನಡೆಸಲಿದೆ. ಹಾಗೂ ಒಮಾನ್ ಸ್ವದೇಶಿಗಳಿಗೂ ಅನಿವಾಸಿಗಳಿಗೂ ಸಮಾನವಾಗಿ ಅನ್ವಯವಾಗುವಂತಹ ಪರಿಹಾರವನ್ನು ವಿಮರ್ಶಿಸಲಾಗುವುದು. ಮಂಡಲಿಯು ಬೆಲೆಯೇರಿಕೆಗೆ ಕಾರಣಗಳನ್ನು ಸಹಾ ಪರಿಶೀಲಿಸಿತು. ಹಾಗೂ ದಾಸ್ತಾನುಗಾರರು, ಸಗಟು ಖರೀದಿದಾರರು ಹಾಗೂ ಚಿಲ್ಲರೆ ವ್ಯಾಪಾರಿಗಳ ಹಿತರಕ್ಷಣೆ ಕಾಯ್ದುಕೊಂಡು ಒಂದು ಪರಿಹಾರ ಕಂಡುಕೊಳ್ಳುವಲ್ಲಿ ಮಂಡಲಿ ಕಾರ್ಯನಿರ್ವಹಿಸಲು ತೀರ್ಮಾನಿಸಿದೆ.

ವಿಶ್ವದೆಲ್ಲೆಡೆ ಬದಲಾಗುತ್ತಿರುವ ವ್ಯಾಪಾರೀಕಣದ ಪ್ರಭಾವ ಸರ್ಕಾರ ಹಾಗೂ ಜನತೆಯ ಮೇಲಾಗುತ್ತಿದೆ. ಈ ಪ್ರಭಾವಗಳನ್ನು ಅರಿಯಲು ಹಾಗೂ ಸಮರ್ಪಕ ವಿಧಾನವನ್ನು ಅಳವಡಿಸಿಕೊಳ್ಳಲು ಸಮಿತಿಯೊಂದನ್ನು ರಚಿಸಲಾಗುವುದು. ಈ ಸಮಿತಿಯು ರಾಷ್ಟ್ರೀಯ ಆರ್ಥಿಕ ಸಚಿವರ ಮುಂದಾಳತ್ವದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವುದು. ಜೊತೆಯಲ್ಲಿ ಉಪ ವಾಣಿಜ್ಯ ಹಾಗೂ ಶಕ್ತಿ ಸಂಪನ್ಮೂಲ ಸಚಿವರೂ, ಮೀನುಗಾರಿಕಾ ಸಚಿವರೂ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರೂ, ಕೃಷಿ ಸಚಿವರೂ ಹಾಗೂ ಒಸಿಸಿಐ ಅಧ್ಯಕ್ಷರೂ ಈ ಸಮಿತಿಯ ಸದಸ್ಯರಾಗಿರುತ್ತಾರೆ.

 

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಟೈಮ್ಸ್ ಆಫ್ ಒಮಾನ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-11-26


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri