ರಿಯಾದ್: ಇದೀಗ ಸೌದಿ ಅರೇಬಿಯಾಕ್ಕೂ ಬಜೆಟ್ ಏರ್ ಲೈನ್ಸ್ : ವರ್ಷಾಂತ್ಯದಲ್ಲಿ 12 ನಗರಗಳಿಗೆ ಸಂಪರ್ಕ |
ಪ್ರಕಟಿಸಿದ ದಿನಾಂಕ : 2008-03-14
ಸೌದಿ ಅರೇಬಿಯಾದ ನಾಸ್ ಏರ್ ಸಂಸ್ಥೆಯ ಹೊಸ ಸೇವೆ : ಅಬುಧಾಬಿ, ಪಾಕಿಸ್ತಾನ, ಭಾರತ ಸಹಿತ ಹಲವೆಡೆ ಹೊಸ ಮಾರ್ಗಗಳ ಘೋಷಣೆ
ರಿಯಾದ್, ಮಾರ್ಚ್ ೧೪: ಕಳೆದ ಬುಧವಾರ ಸೌದಿ ಅರೇಬಿಯಾದ ಬಜೆಟ್ ಏರ್ ಲೈನ್ಸ್ ಆಗಿರುವ ನಾಸ್ ಏರ್ ಶಾರ್ಜಾ ನಗರಕ್ಕೆ ಪ್ರಥಮ ಯಶಸ್ವಿ ಹಾರಾಟ ನಡೆಸಿದೆ. ಈ ಯಶಸ್ಸು ಹನ್ನೆರೆಡು ಅಂತಾರಾಷ್ಟ್ರೀಯ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆಗೆ ನಾಂದಿ ಹಾಡಿದೆ. ಅಬುಧಾಬಿ, ಪಾಕಿಸ್ತಾನ, ಭಾರತ, ಸೂಡಾನ್, ಈಜಿಪ್ಟ್, ಜೋರ್ಡಾನ್, ಬೀರೂತ್ ಹಾಗೂ ಸಿರಿಯಾ ದೇಶಗಳ ನಗರಗಳಿಗೆ ಹೊಸ ಸೇವೆಯನ್ನು ಆರಂಭಿಸಲು ಯೋಜಿಸಿರುವುದಾಗಿ ನಾಸ್ ಏರ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಎಡ್ವರ್ಡ್ ಡಬ್ಲ್ಯೂ ವಿಂಟರ್ ಅವರು ತಿಳಿಸಿದ್ದಾರೆ.
ಈ ಮಾರ್ಗಗಳಲ್ಲಿ ಪಾಕಿಸ್ತಾನ ಪ್ರಥಮ ಪ್ರಾಶಸ್ತ್ಯ ಪಡೆದಿದ್ದು ಇನ್ನು ಒಂದು ತಿಂಗಳೊಳಗಾಗಿ ಹೊಸ ಮಾರ್ಗಗಳನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಸಂಸ್ಥೆಯ ಬಳಿ ಆರು ವಿಮಾನಗಳಿದ್ದು ಇನ್ನೂ ಐದು ವಿಮಾನಗಳನ್ನು ಬಾಡಿಗೆಗೆ ಪಡೆದುಕೊಳ್ಳಲಿದೆ ಹಾಗೂ ಹೊಸ ವಿಮಾನಗಳಿಗೆ ಈಗಾಗಲೇ ಬೇಡಿಕೆ ಸಲ್ಲಿಸಿದ್ದು ೨೦೧೨ ರ ವೇಳೆಗೆ ಎಲ್ಲಾ ವಿಮಾನಗಳು ಲಭ್ಯವಾಗಲಿವೆ ಎಂದು ಅವರು ತಿಳಿಸಿದ್ದಾರೆ
ನಾಸ್ ಏರ್ ದುಬೈ ನಗರಕ್ಕೆ ಹಾರಾಟ ನಡೆಸಲು ಅನುಮತಿ ಕೋರಿದ್ದು ಜೆಬೆಲ್ ಆಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಅಲ್ ಮಕ್ತೂಮ್ ವಿಮಾನ ನಿಲ್ದಾಣ) ಪ್ರಾರಂಭವಾದೊಡನೆ ಸೇವೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂಡು ವಿಂಟರ್ ಅವರು ತಿಳಿಸಿದ್ದಾರೆ.
ಪ್ರಸ್ತುತ ಅಧಿಕ ಇಂಧನಬೆಲೆ ಒಂದು ಸವಾಲಾಗಿದ್ದು ಸರ್ಕಾರದೊಂದಿಗೆ ಈ ನಿಟ್ಟಿನಲ್ಲಿ ಮಾತುಕತೆ ಜಾರಿಯಲ್ಲಿವೆ ಎಂದು ಅವರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಎಮಿರೇಟ್ಸ್ ಬಿಸಿನೆಸ್ 247 ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-03-14
|
|
|