ಇರಾನ್ ಅಧ್ಯಕ್ಷರಿಂದ ಸುಲ್ತಾನ್ ರಿಗೆ ಶುಭಸಂದೇಶ ರವಾನೆ. |
ಪ್ರಕಟಿಸಿದ ದಿನಾಂಕ : 2007-11-26
ಮಸ್ಕತ್, ನವೆಂಬರ್ ೨೫. ಮಾನ್ಯ ಸುಲ್ತಾನ್ ಕಬೂಸ್ ಬಿನ್ ಸೈದ್ ಅವರಿಗೆ ಇರಾನ್ ಅಧ್ಯಕ್ಷರಾದ ಮಹ್ಮೂದ್ ಅಹ್ಮದೆನಿಜಾದ್ ಅವರು ಉಭಯ ದೇಶಗಳ ಉತ್ತಮ ಸಂಬಂಧಗಳ ಕುರಿತು ಸಂದೇಶವೊಂದನ್ನು ರವಾನಿಸಿದರು.
ಇರಾನಿನ ವಿದೇಶಾಂಗ ಸಚಿವರಾಗಿರುವ ಡಾ. ಮನೋಷೆರ್ ಮುತ್ತಕಿಯವರು ಒಮಾನಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೈತ್ ಅಲ್ ಬರಖಾ ಅರಮನೆಯಲ್ಲಿ ಸುಲ್ತಾನರಿಗೆ ಈ ಸಂದೇಶ ತಲುಪಿಸಿದರು.
ಈ ಭೇಟಿಯಲ್ಲಿ ಉಭಯ ದೇಶಗಳ ಅಭಿವೃದ್ಧಿ ಹಾಗೂ ಸಹಕಾರಗಳನ್ನು ಬೆಳೆಸುವ ಅನೇಕ ಕಾರ್ಯಕ್ರಮಗಳ ವಿಚಾರ ವಿನಿಮಯ ನಡೆಯಿತು.
ಈ ಭೇಟಿಯಲ್ಲಿ ಒಮಾನಿನಲ್ಲಿರುವ ಇರಾನಿನ ರಾಯಭಾರಿಯಾಗಿರುವ ಮುರ್ತಧಾ ರಹೀಮಿ ಜರ್ಗಿ, ಹಾಗೂ ಇರಾನ್ ಸರ್ಕಾರದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಟೈಮ್ಸ ಆಫ್ ಒಮಾನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-11-26
|
|
|