ಒಮಾನ್ ನಲ್ಲಿ ಏಡ್ಸ್ ತಿಳಿವಳಿಕೆ ಅಭಿಯಾನ |
ಪ್ರಕಟಿಸಿದ ದಿನಾಂಕ : 2007-11-25
ಮಸ್ಕತ್ ನವೆಂಬರ್ ೨೫. The United Nations Population Fund (UNFPA) ಸಂಸ್ಥೆಯ ಪ್ರಾಂತೀಯ ಶಾಖೆಯೊಂದುಮಸ್ಕತ್ ನಲ್ಲಿದ್ದು ಒಮಾನ್ ಸರ್ಕಾರದ ಸಹಕಾರದೊಡನೆ ಏಡ್ಸ್ ಹಾಗೂ ಹೆಚ್.ಐ.ವಿ. ಸೋಂಕುಗಳ ಬಗ್ಗೆ ಜನರಲ್ಲಿಜಾಗೃತಿ ಮೂಡಿಸಲು ಅಭಿಯಾನ ಆರಂಭಿಸಿದೆ. ಇಲ್ಲಿನ ಜನತೆಯಲ್ಲಿ, ಅದರಲ್ಲೂ ಮುಖ್ಯವಾಗಿ ಯುವಜನಾಂಗಕ್ಕೆ ಲೈಂಗಿಕ ರೋಗಗಳ, ರೋಗ ಹರಡುವ ವಿಧಾನಗಳ ಬಗ್ಗೆ ತಾಯಿ ಹಾಗೂ ಮಗುವಿನ ಆರೋಗ್ಯದ ಕಡೆಗೆ, ಎರೆಡು ಮಕ್ಕಳ ನಡುವಿನ ಅಂತರದ ಬಗ್ಗೆ ವಿವರಗಳನ್ನು ನೀಡುತ್ತಿವೆ.
ಈ ನಿಟ್ಟಿನಲ್ಲಿ ನವೆಂಬರ್ ೨೬ರಿಂದ ೨೯ರವರೆಗೆ ಶಾಂಗ್ರಿಲಾಸ್ ಬರ್ ಅಲ್ ಜಿಸ್ಸಾ ರೆಸಾರ್ಟ್ ಅಂಡ್ ಸ್ಪಾ-ದಲ್ಲಿ Cutting Edge Issues in Programming for Young People: Youth Friendly Services ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮಧ್ಯಪ್ರಾಚ್ಯ ಹಾಗೂ ಪೂರ್ವ ಯೂರೋಪ್ ರಾಷ್ಟ್ರಗಳಿಂದ ಸುಮಾರು ಮೂವತ್ತು ತಜ್ಞರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಈ ಅಭಿಯಾನವು ಒಮಾನಿನ ಸಂಸ್ಕೃತಿಗೆ ಚ್ಯುತಿ ಬರದ ರೀತಿಯಲ್ಲಿ ಹೆಚ್.ಐ.ವಿ.ಹಾಗೂ ಏಡ್ಸ್ ಬಗ್ಗೆ ವಿವರಗಳನ್ನೂ, ಮುಂಜಾಗರೂಕತಾ ಕ್ರಮಗಳನ್ನೂ ಪ್ರಸ್ತುತಪಡಿಸಲಿದೆ.
ಪ್ರಸ್ತುತ ಒಮಾನಿನಲ್ಲಿರುವ ಹೆಚ್.ಐ.ವಿ ಪೀಡಿತರ ಸಂಖ್ಯೆ ಗಣನೀಯವಾಗಿಲ್ಲದಿದ್ದರೂ ಮಧ್ಯಪ್ರಾಚ್ಯ ಪ್ರದೇಶದಲ್ಲಿ ೬೨೦,೦೦೦ ಜನರು ಪೀಡಿತರಾಗಿದ್ದಾರೆ. ಅದರಲ್ಲೂ ೨೦೦೫ರಿಂದೀಚೆಗೆ ೧೦೦,೦೦೦ ಜನರು ಪೀಡಿತರಾಗಿದ್ದಾರೆ.
ಅರಬ್ ಮೂಲದ ಯುವಜನತೆ ಇಂದು ವಿಶ್ವದೆಲ್ಲೆಡೆ ತೆರಳುತ್ತಿರುವುದು, ಹಲವರು ತಮ್ಮ ಸಂಸ್ಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಇತ್ಯಾದಿ ಹೆಚ್.ಐ.ವಿ.ಶಿಕ್ಷಣದ ಅಗತ್ಯಕ್ಕೆ ಒತ್ತುಕೊಡುತ್ತವೆ.
ಒಮಾನಿನಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನತೆ ೨೧ ವಯಸ್ಸಿನೊಳಗಿನವರಾಗಿದ್ದು ಈ ಶಿಕ್ಷಣ ಅತಿ ಹೆಚ್ಚಿನ ಅಗತ್ಯವಾಗಿದೆ.
ಅಸುರಕ್ಷಿತ ಸಂಬಂಧಗಳೇ ಅಲ್ಲದೆ ಸ್ಟರಿಲೈಜ್ ಮಾಡದ ಸೂಜಿಗಳನ್ನು ಉಪಯೋಗಿಸುವುದು, ರೋಗಪೀಡಿತ ರಕ್ತದಾನ, ಮಾದಕ ಪದಾರ್ಥಗಳ ಸೇವನೆ ಇತ್ಯಾದಿಗಳು ರೋಗ ಹರಡುವಿಕೆಗೆ ಕಾರಣವಾಗಿವೆ.
ಒಮಾನಿನ ಎಲ್ಲಾ ಯುವಜನತೆ ಈ ಅಭಿಯಾನದ ಪ್ರಯೋಜನ ಪಡೆಯಲು ಕೋರಲಾಗಿದೆ.
ವರದಿಯ ವಿವರಗಳು |
 |
ಕೃಪೆ : ಟೈಮ್ಸ್ ಆಫ್ ಒಮಾನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-11-25
|
|
|