ಶನಿವಾರ, 19-05-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಅತ್ಯಾಚಾರ ಆರೋಪ: ಆರ್‌ಸಿಬಿ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್‌ ಬಂಧನ: ನಾಳೆಯವರೆಗೆ ಜಾಮೀನು
Latest news item ನಟ ಶಾರುಖ್ ಖಾನ್ ಗೆ 5 ವರ್ಷ ವಾಂಖೇಡೆ ಕ್ರೀಡಾಂಗಣ ಪ್ರವೇಶ ನಿಷೇಧ
Latest news item ಅಕ್ಷರಗಳ ಕಲಿತು ಕವಿತೆ ಬರೆದ ಗಂಗಾಧರ್ ಡಿವಾಟರ
Latest news item ನೀರು ಪೂರೈಕೆಯಲ್ಲಿ ನಗರ ಸಭೆಯಿಂದ ಅವಮಾನೀಯ ವರ್ತನೆ : ಹರೀಶ್ ಕಿಣಿ ಆರೋಪ
Latest news item ಉಡುಪಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರ 80ನೇ ಹುಟ್ಟುಹಬ್ಬ ವಿಶೇಷ ರೀತಿಯಲ್ಲಿ ಆಚರಣೆ
Latest news item ಕೌಟುಂಬಿಕ ಗೊಂದಲ: ಅನಿವಾಸಿ ಭಾರತೀಯ ತಾಯಿ ಆತ್ಮಹತ್ಯೆಗೆ ಶರಣು !.
Latest news item ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಕನ್ನಡ ಮಾಧ್ಯಮದಲ್ಲಿ ಪ್ರಜ್ವಲ್ ಎಸ್. ರಾಜ್ಯಕ್ಕೆ ಪ್ರಥಮ: ಆಳ್ವಾಸ್ ಪ್ರೌಢ ಶಾಲೆಗಳಿಗೆ ಶೇ.100 ಫಲಿತಾಂಶ
Latest news item ಎಮಿರೇಟ್ ಐಡಿ ನವೀಕರಣಕ್ಕೆ ಕಿಕ್ಕಿರಿದ ಅನಿವಾಸಿಗಳು: ಪಾಸ್ಪೋರ್ಟು ಕಳೆದುಕೊಳ್ಳುವ ಭೀತಿ !
Latest news item ಶೋಕಸಾಗರದ ನಡುವೆ ರಸ್ನಾ ಹುಡುಗಿ ತರುಣಿ ಅಂತ್ಯಕ್ರಿಯೆ | ‘ನಿಮ್ಮನ್ನೆಲ್ಲ ಕೊನೆಯ ಬಾರಿ ಭೇಟಿಯಾಗುತ್ತಿದ್ದೇನೆ’ ಎಂದು ಹೇಳಿದ್ದ ತಾರುಣಿ: ನೇಪಾಳ ಪ್ರವಾಸಕ್ಕೆ ಮುನ್ನ ಎಲ್ಲರಿಗೂ ‘ಗುಡ್‌ಬೈ’ ಸಂದೇಶ ರವಾನಿಸಿದ್ದ ಬಾಲ ನಟಿ
Latest news item ತಾವೇ ತೋಡಿದ ಹೊಂಡಕ್ಕೆ ಬಿದ್ದ ಕಥೆ: ನೀರಿಗೆ ಬಿದ್ದು ನಾಪತ್ತೆ ಪ್ರಕರಣ ಒಂದು ನಾಟಕ
Latest news item ಉಡುಪಿ ನಗರ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಕೆ : ಶಾಸಕ ಭಟ್
Latest news item ಎಸೆಸೆಲ್ಸಿ ಫಲಿತಾಂಶದಲ್ಲಿ ನವ್ಯ ಶೆಟ್ಟಿ ಮತ್ತು ಪಲ್ಲವಿ ರಾವ್ ಪ್ರಥಮ ಹಾಗೂ ದ್ವಿತೀಯ ರ್ಯಾಂಕ್
Latest news item ಬಿಜೆಪಿಗೆ ಬಿ‌ಎಸ್‌ವೈ ಗುಡ್ ಬೈ: ಲಕ್ಷ್ಮೀನಾರಾಯಣ | ಬಿಕ್ಕಟ್ಟು ಹಿನ್ನೆಲೆ, ಜೇಟ್ಲಿ, ಪ್ರಧಾನ ನಾಳೆ ಬೆಂಗಳೂರಿಗೆ
Latest news item ಕನಿಷ್ಟ ವೇತನ ಪರಿಷ್ಕರಿಸುವಂತೆ ಬೀಡಿ ಕಾರ್ಮಿಕರ ಪ್ರತಿಭಟನೆ
Latest news item ರಾಜ್ಯ ಸರ್ಕಾರದ ವೈಫಲ್ಯದ ವಿರುದ್ದ ಉಡುಪಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಮೇ.20 ರಿಂದ ಮಹಾನಗರಿಮುಂಬಯಿಯಲ್ಲಿ ‘ಅದ್ಭುತ ಬಾಲಕಿ’ಯ ನೃತ್ಯ -ಪ್ರತಿಭಾ ಪ್ರದರ್ಶನ ಸಪ್ತಾಹ
Latest news item ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ: ಶಂಕರ್ ಶಾನ್ ಬಾಗ್ ರವರ ಗಾನ ಸುಧೆಯಲ್ಲಿ ಭಾವ ಪರವಶರಾದ ಭಕ್ತ ಸಮೂಹ
Latest news item ಮನರಂಜಿಸಿದ “ಕಿವುಡನ ಕಿತಾಪತಿ”
Latest news item ಅಗಲಿದ ಸಜ್ಜನ ರಾಜಕಾರಣಿ ಡಾ|ವಿ. ಎಸ್. ಆಚಾರ್ಯರಿಗೆ ದುಬಾಯಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣೆ
Latest news item ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
Latest news item ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
Latest news item ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
Latest news item ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
Latest news item ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ 'ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರದರ್ಶನ



 

 
ಒಮಾನ್ ಎಂಬ ಒಗಟು; ಪ್ರೊ ನಿರಂಜನ ವಾನಳ್ಳಿಗೆ ಕಾಮತ್ ಪ್ರಶಸ್ತಿ ಪ್ರದಾನ

ಹೊನ್ನಾವರ,ಸೆ.25:ಎರಡೂ ಜಿಲ್ಲೆಗಳು ಒಂದೇ ಸಮುದ್ರದ ಬದಿಯಲ್ಲೇ ಇದ್ದರೂ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಂತಃಸತ್ವ ಮತ್ತು ವ್ಯಕ್ತಿತ್ವ ಬೇರೆಬೇರೆ ತೆರನಾದದ್ದು.ಕರಾವಳಿ ತೀರದ ಜಿಲ್ಲೆಗಳೆಂಬ ಮಾತ್ರಕ್ಕೆ ಎರಡನ್ನೂ ಒಂದೇ ಕನ್ನಡಕದಲ್ಲಿ ನೋಡುವ ದೃಷ್ಟಿದೋಷ ಹಲವರಲ್ಲಿದೆ ಎಂದು "ಮುಂಗಾರು ಮಳೆ"ಕವಿ ಜಯಂತ ಕಾಯ್ಕಿಣಿ ಇಂದು ಇಲ್ಲಿ ವಿಷಾದ ವ್ಯಕ್ತಪಡಿಸಿದರು.

ವೃತ್ತಿ ಕೌಶಲ್ಯಕ್ಕೆ,ವ್ಯಾಪಾರಕ್ಕೆ,ಸೃಜನಶೀಲತೆಯನ್ನು ಬಿಜಿನೆಸ್ಸಿಗೆ ಕನೆಕ್ಟ್ ಮಾಡುವುದಕ್ಕೆ, ವಿಸಿಟಿಂಗ್ ಕಾರ್ಡ್ ಮತ್ತು ಲೆಟರ್ ಹೆಡ್ ಹಾಗೂ ಬಯೋಡೇಟಾ ಸಂಸ್ಕೃತಿಯಿಂದ ಹೊರತಾದ ಉತ್ತರ ಕನ್ನಡ ಮಣ್ಣಿನ ಫಲಾಪೇಕ್ಷೆರಹಿತ ಗುಣ ಕುರಿತಂತೆ ಅವರು ಸಾದ್ಯಂತ ಮಾತನಾಡಿದರು.ವ್ಯಕ್ತಿ,ಬದುಕು,ಸಾಹಿತ್ಯದ ಧೋರಣೆಗಳನ್ನು ಉದಾಹರಣೆ ಸಮೇತ ಹೆಣೆಯುತ್ತ ಕಾಯ್ಕಿಣಿ ಸ್ವಾರಸ್ಯಪೂರ್ಣ ಭಾಷಣಕ್ಕೆ ಧುಮುಕಿದರು.

ಬರವಣಿಗೆ,ಸಾಹಿತ್ಯ ಸೃಷ್ಟಿಯ ಉದ್ದೇಶಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ಕಾಯ್ಕಿಣಿಯವರ ಭಾನುವಾರ ಮಧ್ಯಾನ್ಹದ ಉಪನ್ಯಾಸದ ವೇಳೆ,ದಿನಕರ ದೇಸಾಯಿ,ಗೌರೀಶ ಕಾಯ್ಕಿಣಿ, ತೇಜಸ್ವಿ, ಬಿಜಿ ಎಲ್ ಸ್ವಾಮಿ,ಶಿವರಾಮ ಕಾರಂತ,ಪಾಂಡೇಶ್ವರ ಮತ್ತಿತರರು ಇಣುಕಿ ನಡೆದರು.ಇವರೆಲ್ಲ ಒಂದೇ ಶಾಲೆಯ ವಿದ್ಯಾರ್ಥಿಗಳು ಎಂದು ಬಣ್ಣಿಸಿದ ಜಯಂತ,ಸಾಹಿತ್ಯ,ಸಂಗೀತ ಮತ್ತು ಕಲೆಯ ಉದ್ದೇಶ ಅಂತಿಮ ನೆಲೆಯಲ್ಲಿ ನಿರಸನವೇ ಆಗಿರುತ್ತದೆ ಎಂಬ ವಾದ ಮಂಡಿಸಿದರು.

ಲೇಖಕ, ಪರಿಸರಪ್ರಿಯ, ಛಾಯಾಚಿತ್ರಗ್ರಾಹಕ ಮತ್ತಿನ್ನೇನೇನೋ ಆಗಿದ್ದು ಉತ್ತರ ಕನ್ನಡ ಜಿಲ್ಲೆಯ ಆಗಿಹೋದ ಮಹಾನುಭಾವರ ಸಾಲಿಗೆ ಸೇರ್ಪಡೆಯಾದವರು ದಿವಂಗತ ಡಾ.ಕೃಷ್ಣಾನಂದ ಕಾಮತ್.ಅವರ ಹುಟ್ಟು ಹಬ್ಬ (ಸೆ.29)ನಿಮಿತ್ತ ಭಾನುವಾರ ಇಲ್ಲಿ ಒಂದು ಭರಪೂರ ಸಾಂಸ್ಕೃತಿಕ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು.

ಕೃಷ್ಣಾನಂದ ಕಾಮತ್ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ, ದತ್ತಿ ಉಪನ್ಯಾಸ, ಸನ್ಮಾನ ಹಾಗೂ ಕಾಮತರ ಸ್ಮರಣೆ ಇತ್ತು. ಪ್ರತಿಷ್ಠಾನದ ಆಧಾರ ಸ್ತಂಭಗಳಾಗಿರುವ ಕಾಮತರ ಪತ್ನಿ,ಬೆಂಗಳೂರು ನಿವಾಸಿ ಜ್ಯೋತ್ಸ್ನಾ ಕಾಮತ್ ;ಮಗ ಅಲಬಾಮಾ ನಿವಾಸಿ ವಿಕಾಸ್ ಕಾಮತ್ ಮತ್ತು ಕೃಷ್ಣಾನಂದರ ತಮ್ಮ ಹೊನ್ನಾವರ ನಿವಾಸಿ ತುಳಸಿದಾಸ್ ಕಾಮತ್ ಕಾರ್ಯಕ್ರಮ ರೂಪಿಸಿದ್ದರು.ಕಾರ್ಯಕ್ರಮ ಲಕ್ಷ್ಮೀನಾರಾಯಣ ನಗರದ ಕೃಷ್ಣಕಲ್ಪ ಸಭಾಂಗಣದಲ್ಲಿ ವ್ಯವಸ್ಥೆಯಾಗಿತ್ತು.

ಕೃಷ್ಣಾನಂದ ಕಾಮತ್ ದತ್ತಿ ಉಪನ್ಯಾಸ (ವಿಷಯ;ವಿಜ್ಞಾನ ತಂತ್ರಜ್ಞಾನ ಮತ್ತು ಪರಿಸರ ) ನೀಡಿದವರು ಕಾಮತರನ್ನು ಭಾಳ ಹಚ್ಚಿಕೊಂಡಿದ್ದ ಲೇಖಕಿ ಮತ್ತು ವಿಜ್ಞಾನಿ ನೇಮಿಚಂದ್ರ.HAL ಕಾರ್ಖಾನೆಯಲ್ಲಿ ಅವರು ವಿಜ್ಞಾನಿ.ಕಾರ್ಯಭಾರ ನಿಮಿತ್ತ ಅವರು ಇಸ್ರೇಲಿಗೆ ಪ್ರಯಾಣ ಬೆಳೆಸಿದುದರಿಂದ ಅವರ ಪರವಾಗಿ ಹೃದ್ಗತ ಉಪನ್ಯಾಸ ವಾಚಿಸಿದವರು ಡಾ.ಎಚ್.ಎಸ್ ಅನುಪಮ.ನಂತರ ಲೇಖನಗಳ ಸಂಗ್ರಹ (ಪರಿಸರ ಮತ್ತು ಅಭಿವೃದ್ಧಿ)ಕೃತಿ ಬಿಡುಗಡೆ ಮಾಡಿದವರು ಮನೋಹರ ಗ್ರಂಥಮಾಲಾದ ಜ್ಯೂನಿಯರ್ ಜಡಭರತ ಡಾ.ರಮಾಕಾಂತ ಜೋಷಿ.

ಅತ್ಯುತ್ತಮ ಪ್ರವಾಸ ಕಥನ ಕೃತಿ ಪ್ರಶಸ್ತಿಗೆ ಭಾಜನರಾದವರು ಪತ್ರಕರ್ತ,ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಪಾಠಮಾಡುವ ಪ್ರೊ.ನಿರಂಜನ ವಾನಳ್ಳಿ.ಇವರೂ ಉತ್ತರ ಕನ್ನಡ ಜಿಲ್ಲೆಯವರೇ.ನಿರಂಜನ ಅವರು 28ತಿಂಗಳ ಕಾಲ ಒಮಾನ್ ಪ್ರವಾಸ ಮಾಡಿ ಹೊರತಂದ "ಒಮಾನ್ ಎಂಬ ಒಗಟು" ಕೃತಿಗೆ ಕಾಮತ್ ಪ್ರತಿಷ್ಠಾನ 25 ಸಾವಿರ ರೂ. ನಗದು ಬಹುಮಾನ ಸಂದಿತು.

ವಾನಳ್ಳಿ ಅವರನ್ನು ಅವರ ತಂದೆ ತಾಯಿ ಸಮ್ಮುಖದಲ್ಲಿ ಶಾಲುಹೊದಿಸಿ ಸನ್ಮಾನಿಸಿದ್ದು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿತು.ಬಹುಮಾನಿತ ಕೃತಿ ಆಯ್ಕೆ ಮಾಡಿದವರು ಪ್ರತಿಷ್ಠಾನ ನೇಮಿಸಿದ್ದ ಪ್ರಶಸ್ತಿ ಸಮಿತಿ. ಸಮಿತಿಯ ಮುಖ್ಯಸ್ಥರು ಕಥೆಗಾರ ಶ್ರೀಧರ ಬಳಗಾರ.

ಪ್ರತಿಷ್ಠಾನದ ಧ್ಯೇಯೋದ್ದೇಶ ಕುರಿತು ಸವಿಸ್ತಾರವಾಗಿ ಮಾತನಾಡಿದವರು ಜ್ಯೋತ್ಸ್ನಾ ಕಾಮತ್.ತಮ್ಮ ಪತಿ ಪ್ರಣೀತ ಆದರ್ಶಗಳನ್ನು ಜನಮನಕ್ಕೆ ತಲುಪಿಸುವ ಪ್ರೀತಿ ಮತ್ತು ಶ್ರಮ ವ್ಯರ್ಥವಾಗುವುದಿಲ್ಲ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.ಕೃಷ್ಣಾನಂದ ಕಾಮತರಿಗೆ ಇದ್ದ ಒಲವುಗಳು ಎರಡು. ಒಂದು ಮನುಷ್ಯ ಪ್ರೀತಿ ಇನ್ನೊಂದು ಪರಿಸರ ಪ್ರೇಮ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2011-09-26

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ನಿರಂತರ 'ಡ್ರಗ್ಸ್' ವ್ಯಾಪಾರ : ಜಾಲ ಬೇದಿಸಿದ ಒಮಾನ್ ಪೋಲಿಸರು
»17 ಮೇ: ಒಮಾನ್ ತುಳುವರಿಗೆ ಅಪರೂಪದ ಅವಕಾಶ: ’ದಾದ ಮಲ್ಪೆರಾಪುಂಡು’ ತುಳು ನಾಟಕಕ್ಕೆ ಕ್ಷಣಗಣನೆ
»ಉರಿ ಬಿಸಿಲಿನಲ್ಲಿ ಕಾರ್ಮಿಕರ ಕೆಲಸವನ್ನು ನಿಷೇಧಿಸಿದ ಒಮಾನ್ ಸರಕಾರ !
»ಮಸ್ಕತ್‌ಗೆ ’ಯುಗಾದಿ ನಗೆ ಹಬ್ಬ’ ದೊಂದಿಗೆ ಬಂದ ‘ನಂದನ’
»ಸ್ಪಂದನ ಆರ್ಟ್ ಲೌವರ್ಸ್ ರಿಂದ ಹೆಸರಾಂತ ಗಾಯಕಿ ಅನಿತಾ ಸಾಮ್ಸನ್ ಅವರಿಗೆ ಸನ್ಮಾನ
»Indian businessman’s body found in mysterious circumstances
»ಮನರಂಜಿಸಿದ “ಕಿವುಡನ ಕಿತಾಪತಿ”
»ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
»ಸ್ಪಂದನ ತಂಡದ ಕಾರ್ಯಕ್ರಮಕ್ಕೆ ಆಗಮಿಸಿದ ಕಲಾವಿದರು
»ಒಮಾನ್ ಹರ್ಷ ಕುಮಾರ್‌ ರೈಗೆ ಭಾರತ ಸಮ್ಮಾನ್‌ ಪ್ರಶಸ್ತಿ
»ಜನವರಿ 19ರಂದು ಸ್ಪಂದನಾ ವಿರಚಿತ 'ಯಾದೊಂಕಿ ಭಾರತ್' ಸಂಗೀತ ಬಿಡುಗಡೆ
»ಒಮಾನ್ ನಲ್ಲಿ ಬಂಟರ 24ನೇ ಸಮ್ಮಿಲನ : ಗಮನಸೆಳೆದ ಮನೋರಂಜನಾ ಕಾರ್ಯಕ್ರಮ , ತುಳುನಾಡಿನ ವೈಶಿಷ್ಟ್ಯ
»ಮಸ್ಕಟ್‌ನಲ್ಲಿ ಕಾರು ಅಪಘಾತ: ನಗರದ ಸಹೋದರಿಯರ ಸಾವು
»ಓಮನ್ ಬಿಲ್ಲವರ ಸಮಾವೇಶ: ಗಲ್ಫ್ ರಾಷ್ಟ್ರಗಳ ಸಾಂಸ್ಕೃತಿಕ ಉನ್ನತಿಗೆ ಭಾರತೀಯರ ಕೊಡುಗೆ ಅಪಾರ: ಡಾ. ಸತೀಶ್ ನಂಬಿಯಾರ್
»ಮರಳುಗಾಡಿನ ನಾಡಿನಲ್ಲೊಂದು ಜಲಪಾತ ...
»ಒಮಾನ್‌ನಿಂದಲೇ ಕೇಸು ಹಾಕಿ...
»ಒಮಾನ್ ಎಂಬ ಒಗಟು; ಪ್ರೊ ನಿರಂಜನ ವಾನಳ್ಳಿಗೆ ಕಾಮತ್ ಪ್ರಶಸ್ತಿ ಪ್ರದಾನ
»ಒಂದು ವಾರದಲ್ಲಿ ಒಮಾನ್ ದೇಶದಲ್ಲಿ 234ಅಪಘಾತ: ಮೃತರ ಸಂಖ್ಯೆ 28
»ಮಸ್ಕತ್ ನಲ್ಲಿ 27ನೆ ವರ್ಷದ ವಿಜ್ರ೦ಭಣೆಯ ಗಣೇಶೊತ್ಸವ
»ಮರಳುಗಾಡಿನಲ್ಲಿ ಮಲೆನಾಡು! ಸಲಾಲ
»ಕ್ರಿಮಿನಲ್ ಮತ್ತು ನಾಗರಿಕ ವಿಷಯಗಳಿಗೆ ಸಂಬಂಧ : ಭಾರತ-ಒಮನ್ ಮೂರು ಒಪ್ಪಂದಗಳಿಗೆ ಸಹಿ ಸಾಧ್ಯತೆ
»ಒಮನ್‌ನಲ್ಲಿ ಮನೆಕೆಲಸ:ನಿಯಮ ಬಿಗಿಗೊಳಿಸಿದ ಭಾರತ
»ಸ೦ಭ್ರಮದಿ೦ದ ಜರುಗಿದ ಮಸ್ಕತ್ ಮೊಗವೀರ್ಸ್ ರವರ 21ನೇ ವಾರ್ಷಿಕೋತ್ಸವ
»ಕಾಸರಗೋಡು: ಎಂಡೋಸಲ್ಫಾನ್ ನಿಷೇಧಕ್ಕೆ ಆಗ್ರಹ : ಕೇರಳ (ಬಂದ್) ಹರತಾಳ ಭರ್ಜರಿ ಯಶಸ್ಸು.
»ಒಮಾನ್‌ನಲ್ಲಿ ರಂಜಿಸಿದ ಮಂಗಳೂರಿನ ಬ್ಯಾಂಡ್‌
»ಮಸ್ಕತ್: ಬಿಲ್ಲವ ಸಮುದಾಯದ ನೆಚ್ಚಿನ ನಾಯಕ ಪಿತಾ೦ಬರ ಅಲ್ಕೆ ಇನ್ನಿಲ್ಲ
»ಮಸ್ಕತ್: ಪ್ರಜಾಪ್ರಭುತ್ವ ಪರವಾದ ಪ್ರತಿಭಟನೆ ಕಿಚ್ಚು : ಆರು ಮಂದಿ ಗುಂಡೇಟಿಗೆ ಬಲಿ
»ಮಸ್ಕತ್ : ಒಮನ್ ಬಿಲ್ಲವಾಸ್ ಅವರಿ೦ದ ಸ೦ಭ್ರಮದಿ೦ದ ಜರುಗಿದ ವಣಸ್ದ ಪರ್ಭ
»ಒಮಾನ್ : ಜನಮನ ಗೆದ್ದ ‘ಸುವರ್ಣ ಕರ್ನಾಟಕ ಪ್ರಶಸ್ತಿ’ ವಿಜೇತ ಶ್ರೀರವೀಂದ್ರ ಪ್ರಭು ಮತ್ತು ಅನಿತಾ ಸ್ಯಾಂಸನ್ ಅವರ ಸ೦ಗೀತ ಸ೦ಜೆ ಕಾರ್ಯಕ್ರಮ
»62ನೇ ಗಣರಾಜ್ಯೋತ್ಸವದ ಅಂಗವಾಗಿ ಫೆಬ್ರುವರಿ 2ರಂದು ಮಸ್ಕತ್‌ನಲ್ಲಿ ಗೋಡ್ಕಿಂಡಿ ಕೊಳಲು ವಾದನ
»ಮಕರ ಸ೦ಕ್ರಾ೦ತಿಯ ದಿನದ೦ದು ಜರುಗಿದ ಒಮನ್ ಬಿಲ್ಲವಾಸ್ ಅವರ ಎರಡನೇ ವಾರ್ಷಿಕ ಕ್ರೀಡೋತ್ಸವ
»ಒಮಾನ್ : ಉತ್ಸಾಹದಿ೦ದ ಗಾಳಿಪಟ ತಯಾರಿಕೆಯಲ್ಲಿ ಮಗ್ನರಾದ ಕನ್ನಡಿಗರು
»ಜ, 21 : ಒಮಾನ್ ನ ‘ಸಂಗೀತ ಲಹರಿ’ ಕಾರ್ಯಕ್ರಮದಲ್ಲಿ ಸ೦ಗೀತ ಸುಧೆಯನ್ನು ಹರಿಸಲಿದ್ದಾರೆ ಪ್ರಸಿದ್ದ ಗಾಯಕ ರವೀ೦ದ್ರ ಪ್ರಭು ಮತ್ತು ಬಳಗ
»40 ವರ್ಷ ಅಧಿಕಾರ ಪೂರೈಸಿದ ಒಮಾನ್ ಸುಲ್ತಾನ್
»ಮಸ್ಕತ್ : ಎಲ್ಲಾದರೂ ಇರು, ಎ೦ತಾದರೂ ಇರು, ಎ೦ದೆ೦ದಿಗೂ ನೀ ಕನ್ನಡವಾಗಿರೂ.... ಜನಮನಸೂರೆಗೊ೦ಡ ಗುರುಕಿರಣ್ ಸ೦ಗೀತ ಸುಧೆ
»ಮಸ್ಕತ್ ನ ಭಾರತೀಯ ಸೋಶಿಯಯಲ್ ಕ್ಲಬ್ ಕರ್ನಾಟಕ ವಿಭಾಗದಲ್ಲಿ ಗುರುಕಿರಣ್ ಸಂಗೀತ ಸುಧೆ
»ಒಮನ್ ಬಂಟ್ಸ್ ನ 23ನೇ ವಾರ್ಷಿಕ ಸಮಾರ೦ಭ
»ಓಮನ್ : ಬ೦ಟ್ಸ್ ಸಮುದಾಯ ವತಿಯಿ೦ದ 23ನೇ ವರ್ಷದ ಸ೦ಭ್ರಮದ ಬ೦ಟ್ಸ್ ಹಬ್ಬ
»Indian maid dies at airport after being stranded due to passport loss
»ಮಸ್ಕತ್ತಿನಲ್ಲಿ ಭಾರತೀಯ ಮೂಲದ ವೈದ್ಯನ ಶವ ಸಂಶಯಾಸ್ಪದ ರೀತಿಯಲ್ಲಿ ಪತ್ತೆ
»ಮಸ್ಕತ್: ಇಂಡಿಯನ್ ಸೋಶಿಯಲ್ ಕ್ಲಬ್ ಕರ್ನಾಟಕ ವಿಭಾಗದಿಂದ ನಮ್ಮ 'ಕರ್ನಾಟಕ ಕ್ವಿಜ್' ಕಾರ್ಯಕ್ರಮ; ಕಬಿನಿ ಕಾವೇರಿ ತಂಡಗಳಿಗೆ ಮೊದಲೆರಡು ಬಹುಮಾನ
»ಮಸ್ಕತ್ : ಭಕ್ತಿಭಾವದೊ೦ದಿಗೆ ಗಣೇಶ್ ಚತುರ್ಥಿ ಆಚರಣೆ
»ಒಮನ್ : ವಿಮಾನದಲ್ಲಿ ಹುಸಿ ಬಾಂಬ್: ಭಾರತೀಯನ ವಿಚಾರಣೆ
»ಒಮಾನ್ ಗೆ ಬಿಎಚ್ಇಎಲ್ ಉಪಕರಣ
»ಮ೦ಗಳೂರು : ಮಸ್ಕತ್‌ನ ‘ಸೇವಾ’ದಿಂದ ಪ್ರತಿಭಾವ೦ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ
»ಅಮೆರಿಕದಲ್ಲಿ ನಡೆಯಲಿರುವ ಜಾಗತಿಕ ಯುವ ನಾಯಕರ ಸ೦ಕಿರಣಕ್ಕೆ ಬೆಳ್ತಂಗಡಿಯ ಬಾಲೆಗೆ ಓಲೆ: ಪ್ರಸ್ತುತ ಮಸ್ಕತ್‌ನ ಇ೦ಡಿಯನ್ ಸ್ಕೂಲ್‌ನ 11ನೇ ತರಗತಿಯ ವಿದ್ಯಾರ್ಥಿ
»ಒಮಾನ್ ತೀರಕ್ಕೆ ಅಪ್ಪಳಿಸಿದ ಫೆಟ್ ಚ೦ಡಮಾರುತ: ಭಾರತೀಯ ಸಹಿತ ಇಬ್ಬರ ಸಾವು
»ಒಮಾನ್: ಭಾರತೀಯ ಉರ್ದು ಕವಿ ಸುರೇಂದರ್ ಭೂತಾನಿಗೆ ಪುರಸ್ಕಾರ
»ಒಮಾನ್: ಭಾರತೀಯ ಕವಿ ಸುರೇಂದರ್ ಭೂತಾನಿಗೆ ಪುರಸ್ಕಾರ
»ಮಸ್ಕತ್: ಸ೦ಭ್ರಮದಿ೦ದ ಜರುಗಿದ ಒಮಾನ್ ಬಿಲ್ಲವಾಸ್‌ರವರ ಪ್ರಥಮ ವಾರ್ಷಿಕೋತ್ಸವ ಸಮಾರ೦ಭ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri