ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕುವೈಟ್ ಬಂಟರ ಸಂಘದ 'ಸ್ನೇಹಮಿಲನ-೨೦೦೭'

ಕುವೈಟ್: ಬಂಟರ ಸಂಘ ಇದರ ಸ್ನೇಹಮಿಲನ-೨೦೦೭ ಇಲ್ಲಿಯ ಶಾಬ್ ಲೀಜರ್ ಪಾರ್ಕ್ ಅಡಿಟೋರಿಯಂನಲ್ಲಿ ನವಂಬರ್ ೧೬ರಂದು ನಡೆಯಿತು.

ಈ ದಿನದ ಕಾರ್ಯಕ್ರಮಗಳು ಬೇಬಿ ಲಕ್ಷ್ಮಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಅಧ್ಯಕ್ಷರಾದ ಶ್ರೀ ದಿವಿನ್ ಕುಮಾರ್ ಮೆಂಡ, ನಾಲ್ಕು ಜನ ಹಿರಿಯರು ಹಾಗು ಸಂಘದ ಇತರ ಪದಾಧಿಕಾರಿಗಳ ಉಪಸ್ಥಿಥಿಯಲ್ಲಿ ದೀಪ ಬೆಳಗಿಸಿ ಈ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ದಿನದ ವೈಶಿಷ್ಟತೆಯಲ್ಲಿ ಬಂಟರ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ, ಹಾಡುವ ಸ್ಪರ್ಧೆ ಹಾಗು ಛದ್ಮವೇಷ ಸ್ಪರ್ಧೆಗಳನ್ನು ನಡೆಸಲಾಯಿತು.

ಮಧ್ಯಾನದ ಭೋಜನದ ನಂತರ ಸಂಘದ ಸದಸ್ಯರು ನೃತ್ಯ, ಜೊಕ್ಸ್ ಹಾಗು ಕಿರು ನಾಟಕಗಳಿಂದ ಸೇರಿದ ಸಭೆಯನ್ನು ರಂಜಿಸಿದರು. ನಂತರ 'ಹಾವು-ಏಣಿ' ಆಟ, ಹೌಸಿ-ಹೌಸಿ ಆಟಗಳನ್ನು ನಡೆಸಲಾಯಿತು.

ಕಾರ್ಯಕ್ರಮದ ಅಂತ್ಯದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗು ಕಲಾಕಾರರಿಗೆ ಸ್ಮರಣ ಫಲಕವನ್ನು ವಿತರಿಸಲಾಯಿತು. ಕಡೆಯದಾಗಿ ಸಂಘದ ಕಾರ್ಯದರ್ಶಿ ಶ್ರೀಮತಿ ಸನ್ಮತಿ ಡಿ. ಮೆಂಡ ಎಲ್ಲರಿಗು ಸಂಘದ ಪರವಾಗಿ ಧನ್ಯವಾದ ಸಮರ್ಪಿಸಿ, ರಾಷ್ಟ್ರಗೀತೆಯೊಂದಿಗೆ ಅಂದಿನ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಈ ದಿನದ ಎಲ್ಲಾ ಕಾರ್ಯಕ್ರಮಗಳನ್ನು ಸಂಘದ ಸಾಂಸ್ಕ್ರತಿಕಾಧಿಕಾರಿ ಶ್ರೀ ಕಿಶೋರ್ ಶೆಟ್ಟಿ ಬಿ. ಯವರ ನೇತ್ರತ್ವದಲ್ಲಿ, ಶ್ರೀ ಸುರೇಂದ್ರ ಶೆಟ್ಟಿ ಸುಸೂತ್ರವಾಗಿ ನಡೆಸಿಕೊಟ್ಟರು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಸನ್ಮತಿ.ಡಿ.ಮೆಂಡ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2007-11-25


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri