ಕತರ್: ಕತರ್ ತುಳು ಕೂಟ ವಾರ್ಷಿಕೋತ್ಸವ ಮಾರ್ಚ್ ೨೮ರಂದು |
ಪ್ರಕಟಿಸಿದ ದಿನಾಂಕ : 2008-03-09
ವಿಶೇಷ ಕಾರ್ಯಕ್ರಮವಾಗಿ ತುಳು ನಾಟಕ : ದೇವರ್ ನಡಪಾವೆರ್ ಪ್ರದರ್ಶನ
ದೋಹಾ, ಮಾರ್ಚ್ ೯: ಕತರ್ ತುಳು ಕೂಟ ಈ ವರ್ಷದ ವಾರ್ಷಿಕೋತ್ಸವವನ್ನು ತುಳು ನಾಟಕವೊಂದರ ಪ್ರದರ್ಶನದೊಂದಿಗೆ ವಿಶೇಷವಾಗಿ ಆಚರಿಸಲು ಸಜ್ಜಾಗಿದೆ. ಬರುವ ಮಾರ್ಚ್ ೨೮ ಶುಕ್ರವಾರದಂದು ಆಯೋಜಿತವಾಗಿರುವ ವಾರ್ಷಿಕೋತ್ಸವದಲ್ಲಿ ಪ್ರಖ್ಯಾತ ತುಳು ನಾಟಕ ನಿರ್ದೇಶಕರಾದ ಶ್ರೀ ದೇವಿದಾಸ್ ಕಾಪ್ಪಿಕಾಡ್ ಅವರ ಹಾಸ್ಯ ನಾಟಕ -ದೇವರ್ ನಡಪಾವೆರ್- ದೋಹಾ ಸಿನಿಮಾ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲು ಎಲ್ಲಾ ಸಿದ್ಧತೆಗಳು ನಡೆದಿವೆ.
ಹಲವು ಯಶಸ್ವಿ ಪ್ರದರ್ಶನಗಳನ್ನು ಕಂಡಿರುವ ಈ ನಾಟಕ ಮೂರು ಘಂಟೆಯ ಅವಧಿಯದ್ದಾಗಿದ್ದು ಸುಮಾರು 17 ಕಲಾವಿದರು ಪಾತ್ರವರ್ಗದಲ್ಲಿದ್ದಾರೆ. ಎಲ್ಲಾ ಕಲಾವಿದರೂ ಊರಿನಿಂದ ಈ ಕಾರ್ಯಕ್ರಮಕ್ಕೆಂದೇ ವಿಶೇಷವಾಗಿ ಆಗಮಿಸಲಿದ್ದು ವಾರ್ಷಿಕೋತ್ಸವ ವಿಭಿನ್ನವಾಗಿ ಹಾಗೂ ಸ್ಮರಣಾತ್ಮಕವಾಗಿ ನೆರವೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಈ ಶುಭಸಂದರ್ಭದಲ್ಲಿ ಶ್ರೀ ಪ್ರಕಾಶ್ ಅಜಿಲ ಅವರು ಸಂಪಾದಕರಾಗಿರುವ -ನಿರೆಲ್- (ನೆರಳು) ಎಂಬ ಪತ್ರಿಕೆಯನ್ನೂ ಬಿಡುಗಡೆ ಮಾಡಲಾಗುವುದು.
ಇಡಿಯ ದಿನ ನಡೆಯಲಿರುವ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಟಿಕೇಟುಗಳು ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
1. ಅಕ್ಷಯ ಜ್ಯೂಯೆಲರಿ: : 4435042 2. ಅತಿಥಿ ರೆಸ್ಟೋರೆಂಟ್, ಸಿಟಿ ಬಸ್ ಸ್ಟ್ಯಾಂಡ್ ಎದುರು: 4413751 3. ಕೆನರಾ ಜ್ಯೂಯೆಲರಿ :4422071 4. ಮಹಾರಾಜ ರೆಸ್ಟೋರೆಂಟ್ :4421642 5. ಮಾಝಾ ರೆಸ್ಟೋರೆಂಟ್ :4620077 6. ಸ್ವಾಗತ್ ರೆಸ್ಟೋರೆಂಟ್-ನಜ್ಮಾ :4433191 7:ವಲೇರಿಯನ್ ಫೆರ್ನಾಂಡಿಸ್: ಉಮ್ಮ್ ಸಯೀದ್: : 5892481 / 4779336 8. ಶೇಖರ್ ಕುಚೂರ್- ಅಲ್ ಖೋರ್ ಷೆಕರ್ ಖುಚೂರ್ : 5325852 9. ರೋನಾಲ್ಡ್ -ದುಖಾನ್ :4712869(ಮನೆ) / 5250865(ಮೊಬೈಲ್) / 4717931(ಕಛೇರಿ.) 10. ಯೂರೋ ಪಾರ್ಟ್ಸ್ (ಅಬ್ದುಲ್ಲಾ ಮೋನು)ಇಂಡಸ್ಟ್ರಿಯಲ್ ಏರಿಯಾ 4602009, 5548140.
ವರದಿಯ ವಿವರಗಳು |
 |
ಕೃಪೆ : ಇಕ್ಬಾಲ್ ಮನ್ನಾ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-03-09
|
|
|