ಬಹರೈನ್‍ನಲ್ಲಿ 8ನೇ ವಿಶ್ವಕನ್ನಡ ಸಮ್ಮೇಳನ: ಆಹ್ವಾನ ಸ್ವೀಕರಿಸಿದ ಮುಖ್ಯ ಮಂತ್ರಿ ಸದಾನಂದ ಗೌಡ ಮತ್ತು ನಟ ಪುನೀತ್ ರಾಜ್ ಕುಮಾರ್ |
ಪ್ರಕಟಿಸಿದ ದಿನಾಂಕ : 2011-08-29
ರಾಜ್ಯ ಪ್ರಶಸ್ತಿ ವಿಜೇತ ಬಹರೈನ್ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ರಾಜ್‍ಕುಮಾರ್ ಅವರು ಕರ್ನಾಟಕದ ನೂತನ ಮುಖ್ಯ ಮಂತ್ರಿಯಾಗಿ ಆರಿಸಲ್ಪಟ್ಟು ಅಧಿಕಾರ ವಹಿಸಿಕೊಂಡ ಮಾನ್ಯ ಶ್ರೀ ಸದಾನಂದ ಗೌಡರವರನ್ನು ಭೇಟಿಯಾಗಿ ಬಹರೈನ್‍ನ ಸಮಸ್ತ ಕನ್ನಡಿಗರ ಪರವಾಗಿ ಶುಭಾಶಯವನ್ನು ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಸಪ್ಟಂಬರ್ ತಿಂಗಳ ದಿನಾಂಕ 29ಮತ್ತು 30ಕ್ಕೆ ಬಹರೈನ್‍ನಲ್ಲಿ ನಡೆಯಲಿರುವ 8ನೇ ವಿಶ್ವಕನ್ನಡ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಬಂದು ಸಮ್ಮೇಳನದಲ್ಲಿ ಭಾಗವಹಿಸಲು ಕನ್ನಡಿಗರ ಪರವಾಗಿ ನೀಡಲಾದ ಆಮಂತ್ರಣವನ್ನು ಸ್ವೀಕರಿಸಿ ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ಭರವಸೆಯನ್ನಿತ್ತರು.

ಕನ್ನಡ ಚಿತ್ರನಟ ಪುನೀತ್‍ರಾಜ್‍ಕುಮಾರ್ ಅವರನ್ನೂ ಭೇಟಿಯಾಗಿ ಸಮ್ಮೇಳನದಲ್ಲಿ ಭಾಗ ವಹಿಸಲು ಆಮಂತ್ರಣವನ್ನಿತ್ತು ಬಹರೈನ್‍ನಲ್ಲಿರುವ ಕನ್ನಡಿಗರನ್ನು ಮನರಂಜಿಸಲು ಕೇಳಿ ಕೊಂಡಾಗ ಅದಕ್ಕೆ ಪುನೀತ್‍ರವರು ಸ೦ತೋಷದಿಂದ ಸಮ್ಮತಿಸಿದರು.

ಕನ್ನಡ ಸಮ್ಮೇಳನದಲ್ಲಿ ಕವಿ ಗೋಷ್ಠಿ,ಮಾಧ್ಯಮ ಗೋಷ್ಠಿ,ವೈದ್ಯ ಗೋಷ್ಠಿ,ಅಂತರರಾಷ್ಟ್ರೀಯ ಸೌಹಾರ್ದ ಗೋಷ್ಠಿ,ವಸ್ತುಪ್ರದರ್ಶನ,ಛಾಯಾಚಿತ್ರ ಸ್ಪರ್ಧೆ ಮಾತ್ರವಲ್ಲದೆ ಅನೇಕ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 100ಕ್ಕೂ ಹೆಚ್ಚಿನ ಕಲಾವಿದರು ಭಾಗವಹಿಸುವರು ಎಂದು ಅಧ್ಯಕ್ಷರು ತಿಳಿಸಿದರು.
ವರದಿಯ ವಿವರಗಳು |
 |
ಕೃಪೆ : ಪತ್ರಿಕಾ ಪ್ರಕಟನೆ ವರದಿಗಾರರು : ”ಆಶ್ವಿನಿ’
ಪ್ರಕಟಿಸಿದ ದಿನಾಂಕ : 2011-08-29
|
|
|