ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕುವೈಟ್ : ಎರೆಡು ಬಾರಿ ಇಂಜಿನ್ ವೈಫಲ್ಯದಿಂದ ವಿಮಾನ ವಾಪಾಸು

ಕುವೈಟ್ ಏರ್ ವೇಸ್ ಭಾಗಶಃ ಖಾಸಗಿಯವರಿಗೆ ಸಾಧ್ಯತೆ

ಕುವೈಟ್: ಮಾರ್ಚ್ 7: ಈಜಿಪ್ಟಿನ ಕೈರೋ ನಗರಕ್ಕೆ ಹೊರಟಿದ್ದ  ಕುವೈಟ್ ಏರ್ ವೇಸ್ ನ ವಿಮಾನವೊಂದು ಸೌದಿ ಅರೇಬಿಯಾದ ಆಗಸದಲ್ಲಿ ಇಂಜಿನ್ ವೈಫಲ್ಯ ಕಂಡು ರಿಪೇರಿಗಾಗಿ ಹಿಂತಿರುಗಿ ಬಂದಿರುವುದು ವರದಿಯಾಗಿದೆ.  ಫ್ಲೈಟ್ ೫೪೧ ಕುವೈಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿನ್ನೆ ಮಧ್ಯಾಹ್ನ  ಹೊರಟಿದ್ದು ಮಾರ್ಗಮಧ್ಯೆ ಇಂಜಿನ್ ತೊಂದರೆ ಕಾಣಿಸಿಕೊಂಡಿದ್ದುದರಿಂದ ಹಿಂತಿರುಗಿ ಬರಬೇಕಾಯ್ತು.

ಕುವೈಟ್ ವಿಮಾನ ನಿಲ್ದಾಣದಲ್ಲಿ ಇಂಜಿನ್ ದುರಸ್ತಿಗೊಳಿಸಿಕೊಂಡು ವಿಮಾನ ಮತ್ತೊಮ್ಮೆ ಆಗಸಕ್ಕೇರಿದರೂ ಅದೇ ಇಂಜಿನ್ನಿನಲ್ಲಿ ಮತ್ತೊಮ್ಮೆ ವೈಫಲ್ಯ ಕಂಡುಬಂದುದರಿಂದ ಮತ್ತೊಮ್ಮೆ ವೈಫಲ್ಯ ಕಂಡಿತು. ಆಗ ಅನಿವಾರ್ಯವಾಗಿ ಹೊರಟಲ್ಲಿಗೇ ಮತ್ತೊಮ್ಮೆ ವಿಮಾನ ವಾಪಾಸಾಗಿತ್ತು.

ಬಳಿಕ ಸುಮಾರು ಮೂರು ಘಂಟೆಯವರೆಗೆ ನಡೆದ ದುರಸ್ತಿಯಲ್ಲಿ ಇಂಜಿನ್ ದೋಷವನ್ನು ಸರಿಪಡಿಸಿ ಐದು ಘಂಟೆಗೆ ಮತ್ತೊಮ್ಮೆ ಆಗಸವನ್ನೇರಿದ ವಿಮಾನ ಸುರಕ್ಷಿತವಾಗಿ ಕೈರೋ ನಗರ ತಲುಪಿದೆ.

ಕಳೆದ ಜನವರಿಯಲ್ಲಿ ಕುವೈಟ್ ಏರ್ ವೇಸ್ ಸಂಸ್ಥೆಯ 40 % ವಹಿವಾಟುಗಳನ್ನು ಸಾರ್ವಜನಿಕ ವಲಯ ಹಾಗೂ 35 % ವಹಿವಾಟುಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ಸಂಸ್ಥೆ ನಿರ್ಧರಿಸಿದೆ. ಪ್ರಸ್ತುತ ಸಂಸ್ಥೆ ನಷ್ಟದ ಹಾದಿಯಲ್ಲಿದ್ದು ಇತರ ಸಂಸ್ಥೆಗಳಾದ ಎಮಿರೇಟ್ಸ್ ಹಾಗೂ ಕತಾರ್ ಏರ್ ವೇಸ್ ನಿರ್ವಹಣೆಗಿಂತ ಎಷ್ಟೋ ಹಿಂದಿದೆ.  ಈ ನಿರ್ಧಾರ ಮುಂದಿನ ಎರೆಡು ವರ್ಷಗಳಲ್ಲಿ ಕಾರ್ಯಗತವಾಗಲಿದೆ. 

ವಿಮಾನದ ಪ್ರಯಾಣಿಕರ ಸುರಕ್ಷತೆಗೆ ಸಂಸ್ಥೆ ಹೆಚ್ಚಿನ ಕಾಳಜಿ ನೀಡಬೇಕೆಂದು ಪ್ರಯಾಣಿಕರು ಸಂಸ್ಥೆಯ ಅಧಿಕಾರಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡಲು ನಿರಾಕರಿಸಿದ್ದಾರೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಅರೇಬಿಯನ್ ಬಿಸಿನೆಸ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-03-07


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri