ಕುವೈಟ್ : ಬಂಟರ ಸಂಘ ಆಯೋಜಿಸಿರುವ ಬಂಟೋತ್ಸವ 2008 -ಮೇ 2 ರಂದು. |
ಪ್ರಕಟಿಸಿದ ದಿನಾಂಕ : 2008-03-07
ಅದ್ದೂರಿಯ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ : ಊರಿನಿಂದ ಯಕ್ಷಗಾನ ಮಂಡಳಿ ಆಮಂತ್ರಣ
ಕುವೈಟ್, ಮಾರ್ಚ್ 7: ಕುವೈಟಿನ ಬಂಟರ ಸಂಘಟನೆಯಾದ ಕುವೈಟ್ ಬಂಟರ ಸಂಘ ಈ ವರ್ಷದ ಅದ್ದೂರಿಯ = ಬಂಟೋತ್ಸವ - 2008 = ಕಾರ್ಯಕ್ರಮವನ್ನು ಮೇ 2 ನೇ ಶುಕ್ರವಾರದಂದು ಆಚರಿಸಲು ಸಕಲ ಸಿದ್ಧತೆ ನಡೆಸಿದೆ
ಕುವೈಟ್ ನಗರದ ಅಲ್ ಶಾಬ್ ಲೀಶ್ಯರ್ ಪಾರ್ಕ್ ಉದ್ಯಾನದ ಮೈದಾನ್ ಹವಾಲಿ ಸಭಾಂಗಣದಲ್ಲಿ ಆಯೋಜಿತವಾದ ಕಾರ್ಯಕ್ರಮದಲ್ಲಿ ಊರಿನಿಂದ ಪ್ರಖ್ಯಾತ ಯಕ್ಷಗಾನ ಮಂಡಳಿಯೊಂದು ಪ್ರದರ್ಶನ ನೀಡಲಿರುವುದು ಕಾರ್ಯಕ್ರಮದ ಆಕರ್ಷಣೆಯಾಗಿದೆ.
ತುಳುನಾಡ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಏಕತೆ ಹಾಗೂ ಸಮಗ್ರತೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳಬೇಕೆಂದು ಆಯೋಜಕರು ವಿನಂತಿಸಿಕೊಂಡಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಬಂಟರ ಸಂಘ ಕುವೈಟ್ ಪ್ರಕಟಣೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-03-07
|
|
|