ಬಂಟ್ಸ್ ಬಹ್ರೈನ್ ಪ್ರಾಯೋಜಕತ್ವದಲ್ಲಿ ವಿಧ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗು ಪಟ್ಯ ಪುಸ್ತಕಗಳ ವಿತರಣೆ |
ಪ್ರಕಟಿಸಿದ ದಿನಾಂಕ : 2011-07-05
ಇತ್ತೀಚೆಗ ಮಂಗಳೂರಿನ ವಾಮಂಜೂರಿನಲ್ಲಿರುವ ಜಾನು ಶೆಟ್ಟಿ ಮೆಮೊರಿಯಲ್ ಎಜುಕೇಶನಲ್ ಟ್ರಸ್ಟ್ ನವರು ನಡೆಸುತ್ತಿರುವ ಶ್ರೀ ಅಮ್ರತೆಶ್ವರ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ವಿಧ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗು ಪಟ್ಯ ಪುಸ್ತಕಗಳನ್ನು ವಿತರಿಸಲಾಯಿತು.

ಬಹರೈನ್ ದ್ವೀಪ ರಾಷ್ಟ್ರದ ಅನಿವಾಸಿ ಬಂಟರ ಸಂಘಟನೆಯಾದ ಬಂಟ್ಸ್ ಬಹ್ರೈನ್ ಸಮವಸ್ತ್ರ ಹಾಗು ಪಟ್ಯ ಪುಸ್ತಕಗಳ ಪ್ರಾಯೋಜಕತ್ವವನ್ನು ವಹಿಸಿದ್ದು ,ಈ ಸಮಾರಂಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಸೀತಾರಾಮ್ ಶೆಟ್ಟಿ,ಸಮಿತಿ ಸದಸ್ಯರಾದ ಪ್ರತೊಶ್ ಮಲ್ಲಿ ಹಾಗು ಬಂಟ್ಸ್ ಬಹರೈನಿನ ಪ್ರತಿನಿಧಿಯಾಗಿ ಶ್ರೀ ಸುನಿಲ್ ಶೆಟ್ಟಿ ಯವರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮಿನ್ ಬಹ್ರೈನ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2011-07-05
|
|
|