ಮುಂದಿನ ಫೆಬ್ರವರಿಯಲ್ಲಿ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ: ತುಳು ಅಕಾಡಮಿ ಅಧ್ಯಕ್ಷ ಡಾ. ಪಾಲ್ತಾಡಿ |
ಪ್ರಕಟಿಸಿದ ದಿನಾಂಕ : 2009-04-03
ಉಡುಪಿ, ಎ.೨: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ೨೦೧೦ರ ಫೆಬ್ರವರಿ ತಿಂಗಳಲ್ಲಿ ವಿಶ್ವ ತುಳು ಸಮ್ಮೇಳನವೊಂದನ್ನು ಸಂಘಟಿಸಲು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ನಿರ್ಧರಿಸಿದೆ ಎಂದು ಅಕಾಡಮಿ ಅಧ್ಯಕ್ಷ ಡಾ. ಪಾಲ್ತಾಡಿ ಡಿ. ರಾಮಕೃಷ್ಣ ಆಚಾರ್ ಪ್ರಕಟಿಸಿದ್ದಾರೆ.
ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಶ್ರಯದಲ್ಲಿ ಉಡುಪಿಯ ಟಿಎಪೈ ಹಿಂದಿ ಪ್ರಚಾರ ಸಭಾದಲ್ಲಿ ಅಯೋಜಿಸಲಾದ ಮೂರು ದಇನಗಳ ತುಳು ಭಾಷೆ-ಸಾಹಿತ್ಯ ಕಜ್ಜ ಕೊಟ್ಯ( ಕಾರ್ಯಾಗಾರ)’ದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಶಿಬಿರದ ನಿರ್ದೇಶಕರಾದ ಸರಕಾರಿ ಕಾಲೇಜಿನ ಉಪನ್ಯಾಸಕ ಡಾ. ಗಣನಾಥ ಎಕ್ಕಾರು ಸ್ವಾಗತಿಸಿದರೆ, ಅಕಾಡೆಮಿಯ ರಿಜಿಸ್ಟಾರ್ ಎಸ್. ಎಚ್. ಶಿವರುದ್ರಪ್ಪ ವಂದಿಸಿದರು. ಅಕಾಡಮಿಯ ಸದಸ್ಯ ಸಂಚಾಲಕ ಡಾ. ದುಗ್ಗಪ್ಪ ಕಜೆಕಾರು ಕಾರ್ಯಕ್ರಮ ನಿರ್ವಹಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-04-03
|
|
|