ಕಾಟಿಪಳ್ಳ ಅಸೋಸಿಯೇಷನ್, ದಮ್ಮಾಂ 22ನೇ ವಾರ್ಷಿಕ ಮಹಾಸಭೆ |
ಪ್ರಕಟಿಸಿದ ದಿನಾಂಕ : 2011-05-07
ಸೌದಿ ಅರೇಬಿಯ: ಕಾಟಿಪಳ್ಳ ಮುಸ್ಲಿಮ್ ಯೂತ್ ಅಸೋಸಿಯೇಷನ್, ದಮ್ಮಾಂ/ ಅಲ್ಖೋಬರ್/ ಜುಬೈಲ್ ಇದರ 22ನೇ ವಾರ್ಷಿಕ ಮಹಾಸಭೆಯು ದಿನಾಂಕ 25 ಮಾರ್ಚ್ 2011ಶುಕ್ರವಾರ ಜುಮಾ ನಮಾಝಿನ ಬಳಿಕ ದಮ್ಮಾಂ ಜುಬಿಲಿ ಹೋಟೆಲ್ ಆಡಿಟೊರಿಯಂ ನಲ್ಲಿ ಜರಗಿತು.
ಸಂಘದ ಪ್ರಪ್ರಥಮ ಅಧ್ಯಕ್ಷರಾದ ಹಾಜಿ ಪಿ.ಅಬ್ದುಲ್ ಹಮೀದ್ ರವರ ಘನ ಅಧ್ಯಕತೆಯಲ್ಲಿ ಅಹ್ಮದ್ ಸ್ವಾದಿಖ್ ರವರ ಖುರ್ ಆನ್ ಪಠಣದೊಂದಿಗೆ ಸಭೆಯು ಪ್ರಾರಂಭಗೊಂಡಿತು.
ಸಂಘದ ಪ್ರಧಾನ ಕಾರ್ಯದರ್ಷಿ ಇಸ್ಮಾಯೀಲ್ ಕಾಟಿಪಳ್ಳ ರವರು ಸಂಘದ 21ನೇ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಪಣಂಬೂರು ಮುಸ್ಲಿಮ್ ಜಮಾಅತ್ ಗೊಳಪಟ್ಟ ಕಾಟಿಪಳ್ಳ ಜುಮ್ಮಾ ಮಸೀದಿಯ ಅರ್ಹ, ಬಡ,ಯತೀಂ ಹೆಣ್ಮಕ್ಕಳ ವಿವಾಹಕ್ಕೆ ಧನ ಸಹಾಯ, ಧಾರ್ಮಿಕ ಹಾಗೂ ಲೌಕಿಕ ವಿಧ್ಯಾಭ್ಯಾಸದಲ್ಲಿ ಪ್ರಪ್ರಥಮ ಸ್ಥಾನ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ಆರ್ಥಿಕವಾಗಿ ತೀರಾ ಹಿಂದುಳಿದಿರುವ ಜನರಿಗೆ ವೈದ್ಯಕೀಯ ನೆರವು ಮೊದಲಾದ ಹಲವಾರು ಕಾರ್ಯಕ್ರಮಗಳನ್ನು ನಮ್ಮೀ ಸಂಸ್ಥೆ ಕಾರ್ಯಾಚರಿಸುತ್ತಿರುವು ದರ ಬಗ್ಗೆ ಇಸ್ಮಾಯೀಲ್ ರವರು ಸವಿಸ್ತಾರವಾಗಿ ವಿವರಿಸಿದರು.
ತದನಂತರ ಕೋಶಾಧಿಕಾರಿ ಝಾಕಿರ್ ಹುಸೈನ್ ರವರು ಲೆಕ್ಕಪತ್ರವನ್ನು ಮಂಡಿಸಿದರು.
ಸಂಘದ ಅಧ್ಯಕ್ಷ ತಾಜುದ್ದೀನ್, ಉಪಾಧ್ಯಕ್ಷ ಮುಹಮ್ಮದ್ ಬಶೀರ್ ಹಾಗೂ ಮಾಜಿ ಅಧ್ಯಕ್ಷರು ಗಳಾದ ಖಾಲಿದ್ ಹಂಝ, ಪಿ.ಎ.ರಹ್ಮಾನ್,ಎಸ್.ಎ.ಅಝೀಝ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಸಂಘದ ಅಧ್ಯಕ್ಶ ತಾಜುದ್ದೀನ್ ರವರು ಪ್ರಸಕ್ತ ವರ್ಷ ಸಂಘದ ಅಭಿವ್ರದ್ಧಿಗಾಗಿ ಸಹಕರಿಸಿದ ಸರ್ವ ಸದಸ್ಯರಿಗೂ ಅಲ್ಲಾಹು ತಕ್ಕುದಾದ ಪ್ರತಿಫಲ ನೀಡಲಿ ಎಂದು ಪ್ರಾರ್ಥಿಸಿದರು.
2011-12 ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ನೇಮಕ ಮಾಡ ಲಾಯಿತು.
ಗೌರವಾಧ್ಯಕ್ಷರಾಗಿ ಪಿ.ಅಬ್ದುಲ್ ಹಮೀದ್, ಅಧ್ಯಕ್ಷರಾಗಿ ಬಿ.ಎಂ.ರಫಿಖ್, ಪ್ರಧಾನ ಕಾರ್ಯದರ್ಷಿ ಯಾಗಿ ಇಸ್ಮಾಯೀಲ್ ಕಾಟಿಪಳ್ಳ, ಕೋಶಾಧಿಕಾರಿಯಾಗಿ ಪಿ.ಎಂ.ತಾಜುದ್ದೀನ್ ರನ್ನು ಆರಿಸಲಾ ಯಿತು.
ಉಪಾಧ್ಯಕ್ಷರಾಗಿ ಪಿ.ಝಾಕಿರ್ ಹುಸೈನ್ ಮತ್ತು ಎಂ.ಹಂಝ,ಜೊತೆ ಕಾರ್ಯದರ್ಷಿಗಳಾಗಿ ಶಕೀಲ್ ಆದಂ ಮತ್ತು ಅಹ್ಮದ್ ಸ್ವಾದಿಖ್,ಸಂಚಾಲಕರಾಗಿ ಖಾಲಿದ್ ಹಂಝ ಮತ್ತು ಪಿ. ಝೈನುದ್ದೀನ್ ಆರಿಸಲ್ಪಟ್ಟರು.
ಸದಸ್ಯರಾಗಿ ಜುಬೈಲ್ ನಿಂದ ಅಹ್ಮದ್ ಸುಹೈಬ್, ಮುಹಮ್ಮದ್ ಬಶೀರ್, ಪಿ.ಎ.ರಹ್ಮಾನ್, ಆಸಿಫ್, ಮುಶ್ತಾಖ್, ಇಖ್ಬಾಲ್, ಅಲ್ಕೋಬರ್ ನಿಂದ ಸೈಫುಲ್ಲಾ,ನಿಯಾಝ್ ಅಹ್ಮದ್, ರಿಯಾಝ್, ಆರಿಫ್, ಪಿ.ಶರೀಫ್, ದಮ್ಮಾಂ ನಿಂದ ಎಸ್.ಎ.ಅಝೀಝ್, ಎಸ್.ಖಾಲಿದ್, ಅಬ್ದುಲ್ ಗಫಾರ್, ಮುಹಮ್ಮದ್, ಮನ್ಸೂರ್, ಮುಸ್ಥಫ, ಮೊಯ್ದಿನ್ ಹಾಜಿ, ಟಿಎ.ಶರೀಫ್, ಜಾಫರ್ ರನ್ನು ನೇಮಿಸಲಾಯಿತು.
ನೂತನ ಸಮಿತಿಗೆ ಪಿ.ಮುಹಮ್ಮದ್ ಬಶೀರ್ ರವರು ಶುಭ ಹಾರೈಸಿದರು.
ಸಭೆಯ ಪ್ರಾರಂಭದಲ್ಲಿ ಪಿ.ಝೈನುದ್ದೀನ್ ಸ್ವಾಗತಿಸಿ, ಕೊನೆಯಲ್ಲಿ ನೂತನ ಜೊತೆ ಕಾರ್ಯದರ್ಷಿ ಅಹ್ಮದ್ ಸ್ವಾದಿಖ್ ಧನ್ಯವಾದಗೈದರು.
ವರದಿಯ ವಿವರಗಳು |
 |
ಕೃಪೆ : ಇಕ್ಬಾಲ್ ಮನ್ನಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2011-05-07
|
|
|