ಕುವೈಟ್: ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವ ನಾಗರಿಕರಿಗೆ ವೇತನ ಏರಿಕೆ |
ಪ್ರಕಟಿಸಿದ ದಿನಾಂಕ : 2008-02-22
ಪ್ರತಿ ತಿಂಗಳು 120 ದಿನಾರ್ ಏರಿಕೆ: ವಾಣಿಜ್ಯ ಸಚಿವ ಪ್ರಕಟಣೆ
ಕುವೈಟ್ ನಗರ, ಫೆಬ್ರವರಿ 22: ನಿನ್ನೆ ಪ್ರಕಟಿಸಿದಂತೆ ಕುವೈಟಿನ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಕುವೈಟಿ ನಾಗರಿಕರ ವೇತನಗಳಲ್ಲಿ ಪ್ರತಿ ತಿಂಗಳೂ 120 ಕುವೈಟಿ ದಿನಾರ್ ಏರಿಕೆಯಾಗಲಿದೆ.
ಕಳೆದ ಹದಿನೈದು ವರ್ಷಗಳಲ್ಲಿ ಈ ವರ್ಷ ಅತಿ ಹೆಚ್ಚು ಹಣದುಬ್ಬರ ಕಂಡಿರುವುದು ವೇತನಗಳಲ್ಲಿ ಏರಿಕೆಗೆ ಮುಖ್ಯ ಕಾರಣವಗಿದೆ. ಅಷ್ಟೇ ಅಲ್ಲದೆ ಕುವೈಟ್ ಸರ್ಕಾರದಲ್ಲಿ ಉದ್ಯೋಗಿಗಳಾಗಿರುವ ವಿದೇಶಿಯರಿಗೆ ಪ್ರತಿ ತಿಂಗಳ ವೇತನದಲ್ಲಿ 50 ಕುವೈಟಿ ದಿನಾರ್ ಗಳಷ್ಟು ಏರಿಸಲು ನಿರ್ಧರಿಸಲಾಗಿದೆ ಎಂದು ವಾಣಿಜ್ಯ ಸಚಿವರಾದ ಮುಸ್ತಫಾ ಅಲ್ ಶಮಾಲಿಯವರು ತಿಳಿಸಿದ್ದಾರೆ.
ಈ ಏರಿಕೆ ಮಾರ್ಚ್ ತಿಂಗಳಿಂದ ಅನ್ವಯವಾಗಲಿದೆ. ಆದರೆ ಈ ಏರಿಕೆ ಕಾರ್ಮಿಕರ ಮೂಲ ವೇತನದೊಂದಿಗೆ ಮಿಳಿತವಾಗದೆ ಏರಿದ ಬೆಲೆಗಳಿಗೆ ಅನುಸಾರವಾಗಿ ಭತ್ಯೆಯ ರೂಪದಲ್ಲಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಣದುಬ್ಬರ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 7.2 % ಏರಿದ್ದು ಜನವರಿಯಲ್ಲಿ 12% ದಷ್ಟು ಏರಿದೆ. ವಿಶ್ವ ತೈಲ ಸಂಗ್ರಹದಲ್ಲಿ ಸುಮಾರು 10% ತೈಲ ಹೊಂದಿರುವ ಕುವೈಟ್ ಪ್ರತಿದಿನ 2.5 ಮಿಲಿಯನ್ ಗ್ಯಾಲನ್ ತೈಲ ಹೊರತೆಗೆಯುತ್ತಿದ್ದು ಸುಮರು 200 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದೆ.
ವರದಿಯ ವಿವರಗಳು |
 |
ಕೃಪೆ : ಖಲೀಜ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-02-22
|
|
|