ಅನಿವಾಸಿಗಳ ನಿವಾಸಾವಧಿಗೆ ಮಿತಿ : ಸೌದಿ ಅರೇಬಿಯಾ ಸಮರ್ಥನೆ |
ಪ್ರಕಟಿಸಿದ ದಿನಾಂಕ : 2008-02-12
ರಿಯಾದ್, ಫೆಬ್ರವರಿ ೧೨: ಸೌದಿ ಅರೇಬಿಯಾದಲ್ಲಿ ಮಿಲಿಯಾಂತರ ಅನಿವಾಸಿಗಳು ಹಲವಾರು ವರ್ಷಗಳಿಂದ ನೆಲೆಸಿದ್ದು ಅವರಿಗೆ ನೆಲೆಸಿರುವ ಅವಧಿಗೆ ಒಂದು ಮಿತಿಯಿರಿಸುವ ಪ್ರಸ್ತಾಪವನ್ನು ಸೌದಿ ಅರೇಬಿಯಾ ಸಮರ್ಥಿಸಿದೆ.
ಮುಂದೆ ನಮ್ಮ ಪಾರ್ಲಿಮೆಂಟ್ ಸಭೆಗಳಲ್ಲಿ ಅನಿವಾಸಿಗಳು ಪ್ರಮುಖ ಪಾತ್ರವಹಿಸಬಹುದಾದ ಅಪಾಯವಿದೆ, ಹಾಗಾಗಿ ನಿವಾಸಾವಧಿಗೆ ಒಂದು ಮಿತಿ ಕಲ್ಪಿಸುವುದು ಬಹಳ ಮುಖ್ಯವಾಗಿದೆ ಎಂದು ಕಾರ್ಮಿಕ ಸಚಿವರಾದ ಘಾಜಿ ಅಲ್ ಗೊಸೈಬಿಯವರು ತಿಳಿಸಿದ್ದಾರೆ.
ಭವಿಷ್ಯದಲ್ಲಿ ಈ ಅವಧಿಯನ್ನೇ ನೆಪವಾಗಿರಿಸಿ ವಿದೇಶಿ ಶಕ್ತಿಗಳು ಅಧಿಕಾರವನ್ನು ಒದಗಿಸಲು ಒತ್ತಡ ತರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಜಿ.ಸಿ.ಸಿ. ರಾಷ್ತ್ರಗಳ ೩೫ ಮಿಲಿಯನ್ ಜನಸಂಖ್ಯೆಯಲಿ ೧೩ ಮಿಲಿಯನ್ ಅನಿವಾಸಿಗಳಿದ್ದು ಶೇಖಡಾ ೩೭% ರಷ್ಟಿದ್ದಾರೆ. ಜಿ.ಸಿ.ಸಿ. ರಾಷ್ಟ್ರಗಳ ಬೆಳವಣಿಗೆಗೆ ಏಶಿಯಾ ಮೂಲದ ಅನಿವಾಸಿಗಳ ಕೊಡುಗೆ ಪ್ರಮುಖವಾಗಿದೆ.
ಆದರೆ ಈ ಅವಧಿ ಎಷ್ಟು ವರ್ಷಗಳಿಗೆ ಅನ್ವಯಿಸುತ್ತದೆ ಎಂದು ಅವರು ತಿಳಿಸಲಿಲ್ಲ. ಕಳೆದ ವರ್ಷ ಬಹರೇನ್ ಕಾರ್ಮಿಕ ಸಚಿವರಾದ ಮಜೀದ್ ಅಲ್ ಅಲಾವಿಯವರು ಆರು ವರ್ಷಗಳ ಮಿತಿ ಹೇರಲು ಒತ್ತಡ ತಂದಿದ್ದರು. ಆದರೆ ಹೆಚ್ಚಿನ ಪ್ರತಿರೋಧ ಕಂಡುಬಂದಿದ್ದರಿಂದ ಈ ಪ್ರಸ್ತಾಪವನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿತ್ತು.
ವರದಿಯ ವಿವರಗಳು |
 |
ಕೃಪೆ : ಖಲೀಜ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-02-12
|
|
|