ಕಮಲಾ ಹ್ಯಾರಿಸ್ ಕ್ಯಾಲಿಫೋರ್ನಿಯ ಎಜಿ |
ಪ್ರಕಟಿಸಿದ ದಿನಾಂಕ : 2010-11-05
ವಾಷಿಂಗ್ಟನ್ : ಕ್ಯಾಲಿಫೋರ್ನಿಯ ಅಟಾರ್ನಿ ಜನರಲ್ ಹುದ್ದೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಭಾರತೀಯ-ಅಮೆರಿಕ ಮೂಲದ ಕಮಲಾ ಹ್ಯಾರಿಸ್ ಅವರು ಗೆಲುವು ಸಾಧಿಸಿದ್ದಾರೆ. ಸೌತ್ ಕೆರೋಲಿನಾ ಗವರ್ನರ್ ಆಗಿ ರಿಪಬ್ಲಿಕನ್ ಪಕ್ಷದ ಹಾಗೂ ಭಾರತೀಯ ಮೂಲದ ನಿಕ್ಕಿ ಹ್ಯಾಲಿ ಅವರು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಬೆನ್ನಲ್ಲಿಯೇ ಕಮಲಾ ಹ್ಯಾರೀಸ್ ಅವರು ಈ ಸಾಧನೆ ತೋರಿದ್ದಾರೆ.
ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಹುದ್ದೆಗೇರಿದ ಪ್ರಥಮ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಕಮಲಾ ಅವರು ಪಾತ್ರರಾಗಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಜೆರ್ರಿ ಬ್ರೌನ್ ಅವರು ಕ್ಯಾಲಿಫೋರ್ನಿಯ ಗವರ್ನರ್ ಆಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ಭಾರತೀಯ ತಾಯಿ ಹಾಗೂ ಆಫ್ರಿಕನ್-ಅಮೆರಿಕನ್ ತಂದೆಗೆ ಜನಿಸಿದ ಕಮಲಾ ಹ್ಯಾರಿಸ್ ಅವರು ಆಯ್ಕೆಯಾಗಿದ್ದಾರೆ. ಪ್ರಸ್ತುತ ಹ್ಯಾರಿಸ್ ಅವರು ಸ್ಯಾನ್‌ಫ್ರಾನ್ಸಿಸ್ಕೋ ಅಟಾರ್ನಿ ಜನರಲ್ ಆಗಿದ್ದಾರೆ. ಅವರು ತಮ್ಮ ಪ್ರತಿಸ್ಪಧಿ ರಿಪಬ್ಲಿಕನ್ ಪಕ್ಷದ ಸೀವ್ ಕೂಲಿ ಅವರನ್ನು ಪರಾಭವಗೊಳಿಸಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-11-05
|
|
|