ವೇತನಗಳಲ್ಲಿ ಹೆಚ್ಚಳ : ಬಹುತೇಕ ಖಚಿತ |
ಪ್ರಕಟಿಸಿದ ದಿನಾಂಕ : 2008-02-03
ಕುವೈಟ್, ಫೆಬ್ರವರಿ ೩: ಕುವೈಟಿನ ಎಲ್ಲಾ ಸರ್ಕಾರಿ, ಖಾಸಗಿ, ನಿವೃತ್ತಿವೇತನ ಹಾಗೂ ಸರ್ಕಾರದ ಅನುದಾನ ಪಡೆಯುವ ಎಲ್ಲಾ ಇಲಾಖೆಗಳ ವೇತನಗಳಲ್ಲಿ ಹೆಚ್ಚಳ ಕಂಡುಬರಲಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಕುವೈಟ್ ಉಪಪ್ರಧಾನಿ ಹಾಗೂ ಉನ್ನತ ಸಮಿತಿಯ ರಾಜ್ಯಸಚಿವರಾಗಿರುವ ಫೈಸಲ್ ಅಲ್ ಹಾಜ್ಜಿಯವರು ಇಂದು ಸಭೆಯೊಂದನ್ನು ಕರೆದಿದ್ದು ನಾಗರಿಕ ಸೇವಾ ವಿಭಾಗದ ಎಲ್ಲಾ ವಿವರಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು.
ಸಭೆಯಲ್ಲಿ ಸೆಂಟ್ರಲ್ ಬ್ಯಾಂಕ್ ಹಾಗೂ ವಾಣಿಜ್ಯ ಸಚಿವಾಲಯದ ಅಧಿಕಾರಿಗಳನ್ನು ಆಹ್ವಾನಿಸಲಾಗಿದ್ದು ಸಾಧಕ ಮಾರ್ಗಗಳ ಬಗ್ಗೆ ವಿಚಾರ ವಿನಮಯ ನಡೆಸಲಾಯಿತು. ಈ ಅಧಿಕಾರಿಗಳು ಎಲ್ಲಾ ವಿಚಾರಗಳನ್ನು ವಿಮರ್ಶಿಸಿ ಇಂದಿನ ಪರಿಸ್ಥಿತಿಗನುಗುಣವಾಗಿ ಬೆಲೆಗಳ ಏರಿಕೆ, ಹಣದುಬ್ಬರ, ರಾಷ್ಟ್ರದ ಬಜೆಟ್ ಇತ್ಯಾದಿಗಳ ಪರಿಶೀಲನೆಯ ಬಳಿಕ ಅಂತಿಮ ವರದಿಯನ್ನು ಶೀಘ್ರವೇ ನೀಡಲಿದ್ದಾರೆ.
ಆದರೆ ಈ ಸಭೆಯಲ್ಲಿ ವಿಶ್ವ ಬ್ಯಾಂಕಿನ ಯಾವುದೇ ಸದಸ್ಯರು ಹಾಜರಿರಲಿಲ್ಲ. ವೇತನಗಳಲ್ಲಿ ಏರಿಕೆಯಾಗುವ ಎಲ್ಲಾ ಸೂಚನೆಗಳಿವೆ ಎಂದು ಹಾಜ್ಜಿಯವರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕುವೈಟ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-02-03
|
|
|