ಗಿನ್ನೆಸ್ ದಾಖಲೆ ಸೇರಿದ ಕತರ್ ಕೆ.ಎಫ್.ಸಿ. |
ಪ್ರಕಟಿಸಿದ ದಿನಾಂಕ : 2008-02-03
ದೋಹಾ, ಫೆಬ್ರವರಿ ೩: ವಿಶೇಷ ಕಾರ್ಯಕ್ರಮವೊಂದರಲ್ಲಿ ಕತರ್ ಫುಡ್ ಕಂಪನಿ (ಅಮೇರಿಕಾನಾ) ಒಂದೇ ಪಾತ್ರೆಯಲ್ಲಿ ಮುನ್ನೂರು ಕೇಜಿಯಷ್ಟು ಕೆಂಟಕಿ ಫ್ರೈಡ್ ಚಿಕನ್ ಖಾದ್ಯವನ್ನು ತಯಾರಿಸಿ ಬಡಿಸುವ ಮೂಲಕ ಗಿನ್ನೆಸ್ ದಾಖಲೆ ಸ್ಥಾಪಿಸಿದೆ.
ವಿಲಾಜಿಯೋ ಮಾಲ್ ನಲ್ಲಿರುವ ಕೆ.ಎಫ್.ಸಿ. ಮಳಿಗೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುನ್ನೂರು ಕೇಜಿ ಕೋಳಿಮಾಂಸದ ಖಾದ್ಯವನ್ನು ಯಶಸ್ವಿಯಾಗಿ ತಯಾರಿಸಿ ನೆರೆದವರಿಗೆ ಉಚಿತವಾಗಿ ಹಂಚಲಾಯಿತು.
ಗಿನ್ನೆಸ್ ದಾಖಲೆ ಪಡೆಯುತ್ತಾರೋ ಇಲ್ಲವೋ ಎಂದು ನೋಡಲು ನೂರಾರು ಜನರು ಕುತೂಹಲಭರಿತ ಕಣ್ಣುಗಳಿಂದ ಇಡೀ ಪ್ರಕ್ರಿಯೆಯನ್ನು ವೀಕ್ಷಿಸುತ್ತಿದ್ದರು. ಇದಕ್ಕೆಂದೇ ಕೆ.ಎಫ್.ಸಿ.ಯ ವಿಶೇಷ ಬಕೆಟ್ಟೊಂದನ್ನು ನಿರ್ಮಿಸಲಾಗಿದ್ದು ಕೆ.ಎಫ್.ಸಿ ಸದಾ ಬಳಸುವ ಯಥಾವತ್ತು ಮಾದರಿಯಾಗಿದೆ. ಇದರಲ್ಲಿ ಸಂಸ್ಥೆಯ ಚಿನ್ಹೆ ಮತ್ತು ಹೆಸರನ್ನೂ ಮುದ್ರಿಸಲಾಗಿತ್ತು. ಕಾರ್ಯಕ್ರಮದ ಕಡೆಯಲ್ಲಿ ಉಚಿತ ಕೋಳಿಖಾದ್ಯಗಳನ್ನು ಪಡೆಯಲು ಜನರಲ್ಲಿ ನೂಕುನುಗ್ಗಲು ಉಂಟಾಯಿತು.
ಗಿನ್ನೆಸ್ ದಾಖಲೆ ಸಂಸ್ಥೆಯಿಂದ ಆಗಮಿಸಿದ್ದ ಅಧಿಕಾರಿ ಅಮೇರಿಕಾನಾ ಸಂಸ್ಥೆಗೆ "ವಿಶ್ವದ ಅತ್ಯಂತ ದೊಡ್ಡ ಕೋಳಿ ಖಾದ್ಯ ವಿತರಣೆ" ಪ್ರಶಸ್ತಿಪತ್ರವನ್ನು ನೀಡಿ ಸನ್ಮಾನಿಸಿದರು. ಇಂತಹ ಒಂದು ದಾಖಲೆ ಕತರ್ ಮಾತ್ರವಲ್ಲದೇ ವಿಶ್ವಕ್ಕೇ ಮೊದಲ ಬಾರಿಯಾಗಿದೆ.
ವರದಿಯ ವಿವರಗಳು |
 |
ಕೃಪೆ : ದ ಪೆನಿನ್ಸುಲಾ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-02-03
|
|
|