ಮಂಗಳೂರು: ಸೆ.11ರಿಂದ 13 ರವರೆಗೆ ಬಂಟ್ಸ್ ಹಾಸ್ಟೆಲ್‌ನಲ್ಲಿ ಬಂಟರ ಸಂಘಗಳ ಗಣೇಶೋತ್ಸವ : ಮೆರವಣಿಗೆಯಲ್ಲಿ ಬಂಟ್ಸ್ ಹಾಸ್ಟೆಲ್‌ಗೆ ಬಂದ ಶ್ರೀ ಮಹಾಗಣಪತಿ ದೇವರ ವಿಗ್ರಹ. |
ಪ್ರಕಟಿಸಿದ ದಿನಾಂಕ : 2010-09-11
ಮಂಗಳೂರು,ಸೆ.10: ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಓಂಕಾರ ನಗರ, ಬಂಟ್ಸ್ ಹಾಸ್ಟೆಲ್, ಮಂಗಳೂರು ಇವರ ಏಳನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ದಿನಾಂಕ 11/09/10 ರಿಂದ 13/09/10ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಭಂಣೆಯಿಂದ ಜರಗಲಿರುವುದು
ಅ ಪ್ರಯುಕ್ತ ಇಂದು ಸಾಯಂಕಾಲ ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಬಳಿ ಇರುವ ರಾಧಕೃಷ್ಣ ಮಂದಿರದಿಂದ ಶ್ರೀ ಮಹಾಗಣಪತಿ ದೇವರ ವಿಗ್ರಹವನ್ನು ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಮೆರವಣಿಗೆಯ ಮೂಲಕ ಬಂಟ್ಸ್ ಹಾಸ್ಟೆಲಿನಲ್ಲಿರುವ "ಓಂಕಾರ ನಗರ" ಕ್ಕೆ ತರಲಾಯಿತು.
ಸಮಿತಿಯ ಗೌರವಾಧ್ಯಕ್ಷರಾದ ಕೊಡಿಯಾಲಗುತ್ತು ಅಜಿತ್ ಕುಮಾರ್ ರೈ ಮಾಲಾಡಿ, ಸಂಚಾಲಕ ಕೆ.ಬಾಲಕೃಷ್ಣ ಶೆಟ್ಟಿ, ಸಮಿತಿ ಅಧ್ಯಕ್ಷರಾದ ಶೆಡ್ಯೆಗುತ್ತು ಮಂಜುನಾಥ ಭಂಡಾರಿ, ನಿಟ್ಟೆ ರವಿರಾಜ ಶೆಟ್ಟಿ, ಡಾ. ಆಶಾಜ್ಯೋತಿ ರೈ, ಚಂದ್ರಹಾಸ ಶೆಟ್ಟಿ, ಮೇಗಿನ ಮನೆ ಉಮೇಶ್ ರೈ, ಉದ್ಯಮಿ ಗಣೇಶ್ ಶೆಟ್ಟಿ, ವಕೀಲರಾದ ಮೋನಪ್ಪ ಭಂಡಾರಿ, ಜಗದೀಶ್ ಶೆಣವ, ಪ್ರಚಾರ ಸಮಿತಿ ಸಂಚಾಲಕರಾದ ಜಗನಾಥ ಶೆಟ್ಟಿ ಬಾಳ ಹಾಗೂ ಸಮಿತಿಯ ಇತರ ಪಧಾಧಿಕಾರಿಗಳು, ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು.



ಸೆ.11ರಂದು ಶ್ರೀ ದೇವರ ಮೂರ್ತಿಯ ಪ್ರತಿಷ್ಠೆ:
ಸೆ.11ರಂದು ಬೆಳಿಗ್ಗೆ 9.15ಕ್ಕೆ ಉದ್ಘಾಟನೆ. 9.30ಕ್ಕೆ ಧ್ವಜಾರೋಹಣ, 9.40ಕ್ಕೆ ತೆನೆಹಬ್ಬ, 9.45ಕ್ಕೆ ಶ್ರೀ ದೇವರ ಮೂರ್ತಿಯ ಪ್ರತಿಷ್ಠೆ, ಸಾಯಂಕಾಲ 3ಗಂಟೆಗೆ ಹರಿಕಥಾ ಸತ್ಸಂಗ, 5ಗಂಟೆಯಿಂದ ಧಾರ್ಮಿಕ ಸಭೆ ಹಾಗೂ 7.30ರ ನಂತರ "ಕಟೀಲ್ದಪ್ಪೆ ಉಳ್ಳಾಲ್ತಿ" ಎಂಬ ಸಾಂಸ್ಕೃತಿಕ ಕಾರ್ಯಕರ್ಮ ನಡೆಯಲಿದೆ.
ಸೆ 12ರಂದು ಬೆಳಿಗ್ಗೆ 10ಗಂಟೆಗೆ ಮೂಡಪ್ಪ ಸೇವೆ, ಸಂಜೆ 5ರಿಂದ ಧಾರ್ಮಿಕ ಸಭೆ. 7.30ಕ್ಕೆ "ದೇಶ ದೇವೋಭವ" ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸೆ.13ರಂದು ಬೆಳಿಗ್ಗೆ 8.30ಕ್ಕೆ ಸಹಸ್ರ ಅಷ್ಟೋತ್ತರ ನಾರಿಕೇಳ ಮಹಾಗಣಯಾಗ, 11ಗಂಟೆಗೆ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, 12.30ರಿಂದ ಅನ್ನ ಸಂತರ್ಪಣೆ, ಸಂಜೆ 3.30ರಿಂದ ಧಾರ್ಮಿಕ ಸಭೆ, ಸಾಯಂಕಾಲ 6.30ಕ್ಕೆ ಶೋಭಾಯಾತ್ರೆ ನಡೆಯಲಿದೆ.

ವರದಿಯ ವಿವರಗಳು |
 |
ಕೃಪೆ : ಕರೀಶ್ಮಾ ಶೆಟ್ಟಿ.ಎಸ್.ಕಾಪಿಕಾಡ್ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-09-11 00:00:00
|
|
|