ಪೂಜಾರಿ ಗ್ಯಾಂಗಿನ ಜತೆ ನಿವೃತ್ತ ಪೋಲಿಸ್ ಅಧಿಕಾರಿ ಶಾಮೀಲು? |
ಪ್ರಕಟಿಸಿದ ದಿನಾಂಕ : 2010-09-11
ಮುಂಬಯಿ: ಪೊಲೀಸರು ಇತ್ತೀಚೆಗೆ ಸೆರೆ ಹಿಡಿದಿರುವ ಭೂಗತ ಜಗತ್ತಿನ ಪಾತಕಿ ರವಿ ಪೂಜಾರಿ ಗ್ಯಾಂಗಿನ ನಾಲ್ವರು ಪಾತಕಿ ಗಳಿಗೆ ಮಾಜಿ ಪೊಲೀಸ್ ಅಧಿ ಕಾರಿಯೊಬ್ಬರು ಮುಖ್ಯಸ್ಥರಾಗಿರುವ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ.
ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದು ಅರಿಯಲ್ಪಡುತ್ತಿದ್ದ ಈ ಪೊಲೀಸ್ ಅಧಿಕಾರಿ 23 ವರ್ಷ ಪೊಲೀಸ್ ಪಡೆಗೆ ಸೇವೆ ಸಲ್ಲಿಸಿದ ಬಳಿಕ ಎರಡು ವರ್ಷಗಳ ಹಿಂದೆ ಸ್ವನಿವೃತ್ತಿ ಪಡೆದುಕೊಂಡು ಸ್ವಂತ ಕಂಪೆನಿ ಪ್ರಾರಂಭಿಸಿದ್ದರು.
ಕ್ರೈಂಬ್ರಾಂಚ್‌ನ ಘಟಕ 9 ಮತ್ತು 10 ಹಾಗೂ ಕ್ರಿಮಿನಲ್ ಇಂಟೆಲಿಜನ್ಸ್ ಯೂನಿಟ್‌ನಲ್ಲಿ ಅವರು ಹಿರಿಯ ಅಧಿ ಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
49ರ ಹರೆಯದ ಈ ಮಾಜಿ ಪೊಲೀಸ್ ಅಧಿ ಕಾರಿ ಪೂಜಾರಿ ಗ್ಯಾಂಗಿನ ನಾಲ್ವರು ಪಾತಕಿಗಳು ಇತ್ತೀಚೆಗೆ ಸೆರೆಯಾದ ಬೆನ್ನಿಗೆ ವಿದೇಶಕ್ಕೆ ಪಲಾಯನ ಮಾಡಿದ್ದಾರೆಂದು ಪೊಲೀಸ್ ಮೂಲವೊಂದು ತಿಳಿಸಿದೆ.
ಪೊಲೀಸ್ ಆಯುಕ್ತ ಸಂಜೀವ್ ದಯಾಳ್ ಈ ಬಗ್ಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ತನಿಖೆ ಪ್ರಗತಿಯಲ್ಲಿರುವುದ ರಿಂದ ಈ ಹಂತದಲ್ಲಿ ಯಾವುದೇ ವಿವರ ಬಹಿರಂಗಪಡಿಸುವುದು ಸಾಧ್ಯವಿಲ್ಲ ಎಂದಿರುವ ಅವರು ಇದೇ ವೇಳೆ ಮಾಜಿ ಪೊಲೀಸ್ ಅಧಿ ಕಾರಿಯೊಬ್ಬರು ಭೂಗತ ಜಗತ್ತಿನ ಹಫ್ಡಾ ವಸೂಲು ಕೃತ್ಯದಲ್ಲಿ ಶಾಮೀಲಾಗಿರುವುದನ್ನು ನಿರಾಕರಿಸಿಲ್ಲ.
ಬಿಲ್ಡರ್ ರವಿ ಪಂಜಾಬಿಯ ಜತೆಗೆ ಸಾಹೇಬ್ ಎಂಬ ವ್ಯಕ್ತಿ ತಮಗೆ ಸೂಚನೆಗಳನ್ನು ನೀಡುತ್ತಿದ್ದ ವಿಚಾರವನ್ನು ವಿಚಾರಣೆ ವೇಳೆ ಪಾತಕಿಗಳು ಬಾಯಿಬಿಟ್ಟಿದ್ದಾರೆ. ಈ ಸಾಹೇಬ್ ನಿವೃತ್ತ ಪೊಲೀಸ್ ಅಧಿ ಕಾರಿ ಹಾಗೂ ಈ ಹಿಂದೆ ಛೋಟಾ ರಾಜನ್ ಗ್ಯಾಂಗಿಗೆ ಸಹಕಾರ ನೀಡುತ್ತಿದ್ದರು ಎನ್ನಲಾಗುತ್ತಿದೆ.
ಪೊಲೀಸ್ ಅಧಿ ಕಾರಿ ಭೂಗತ ಜಗತ್ತಿನ ಪಾತಕಿಗಳ ಜತೆಗೆ ಸೇರಿ ಹಫ್ಡಾ ವಸೂಲು ಮಾಡುತ್ತಿದ್ದರು. ಅಲ್ಲದೆ ಪಾತಕಿಗಳಿಗೆ ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಹಾಗೂ ಸೆರೆಯಾಗದಂತೆ ಪಾರಾಗುವ ಕುರಿತು ಮಾರ್ಗದರ್ಶನ ನೀಡುತ್ತಿದ್ದರು. ಆದರೆ ಸೆರೆಯಾಗಿರುವ ಪಾತಕಿಗಳು ತನ್ನ ಹೆಸರನ್ನು ಬಾಯಿ ಬಿಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಅವರು ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಈ ಅಧಿಕಾರಿ ಹಿಂದೆ ರವಿ ಪೂಜಾರಿಯನ್ನು ಸ್ವತಹ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-11 00:00:00
|
|
|