ಈದ್ - ಉಲ್- ಫಿತ್ರ್ ಸೌಹಾರ್ದದ ಸಂಕೇತ: 85 ಪಾಕ್ ಕೈದಿಗಳ ಬಿಡುಗಡೆ : ಭಾರತ |
ಪ್ರಕಟಿಸಿದ ದಿನಾಂಕ : 2010-09-11
ಹೊಸದಿಲ್ಲಿ : ದೇಶದ ವಿವಿಧ ಜೈಲುಗಳಲ್ಲಿ ಬಂಧಿಗಳಾಗಿರುವ ಸುಮಾರು 85 ಮಂದಿ ಪಾಕಿಸ್ಥಾನೀಯರನ್ನು ಸೌಹಾರ್ದದ ಸಂಕೇತವಾಗಿ ಸದ್ಯದಲ್ಲೇ ಬಿಡುಗಡೆಗೊಳಿಸಲಾಗುವುದು ಎಂದು ಈದ್ - ಉಲ್- ಫಿತ್ರ್ ಮುನ್ನಾ ದಿನ ಭಾರತ ಘೋಷಿಸಿದೆ. ಬಿಡುಗಡೆಗೊಳ್ಳುವವರಲ್ಲಿ ಬಹಳಷ್ಟು ಮಂದಿ ಮೀನುಗಾರರು ಎನ್ನಲಾಗಿದೆ.
'ಪಾಕ್ ಅಧಿ ಕಾರಿಗಳು ಪ್ರಯಾಣದ ಅಧಿಕೃತ ದಾಖಲೆಗಳನ್ನು ಒದಗಿಸುವ ಶರ್ತದ ಮೇಲೆ, ಸೆ.9ರಂದು ಗುಜರಾತ್‌ನ ಜೈಲುಗಳಲ್ಲಿ ಬಂಧನದಲ್ಲಿದ್ದ 58 ಮಂದಿ ಮೀನುಗಾರರನ್ನು ಬಿಡುಗಡೆಗೊಳಿಸುವ ಆದೇಶವನ್ನು ಹೊರಡಿಸಲಾಯಿತು' ಎಂದು ಕೇಂದ್ರ ಗೃಹ ಖಾತೆ ತಾನು ಹೊರಡಿಸಿದ ಪ್ರಕಟನೆಯಲ್ಲಿ ತಿಳಿಸಿದೆ.
ಇದೇ ವೇಳೆ ಪಂಜಾಬ್ ,ಜಮ್ಮು ಮತ್ತು ಕಾಶ್ಮೀರದ ಜೈಲುಗಳಿಂದಲೂ ತಲಾ 7 ಮಂದಿಯನ್ನು ಬಿಡುಗಡೆಗೊಳಿಸಲಾಗುವುದು. ರಾಜಸ್ಥಾನದಿಂದ ಒಬ್ಬ ಮತ್ತು ದಿಲ್ಲಿಯಿಂದ ಎರಡು ಮಂದಿಯನ್ನು ಮತ್ತು ಗುಜರಾತ್ ಜೈಲುಗಳಲ್ಲಿರುವ ಇನ್ನೂ ಮೂವರು ಕೈದಿಗಳನ್ನು ಬಿಡುಗಡೆಗೊಳಿಸಲಾಗುವುದು.
ಪಾಕಿಸ್ಥಾನ ಸರಕಾರ 43 ಮಂದಿ ಮೀನುಗಾರರ ಪಟ್ಟಿಯನ್ನು ನೀಡಿ ಅವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದರೂ ಆ ಪಟ್ಟಿಯಲ್ಲಿರುವ 7 ಮಂದಿಯನ್ನಷ್ಟೇ ಬಿಡುಗಡೆಗೊಳಿಸಲು ಭಾರತ ಆದೇಶ ಹೊರಡಿಸಿದೆ
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-11 00:00:00
|
|
|