ಸೆರೆಯಾಗಿರುವ ಶಂಕಿತ ಉಗ್ರ ಬಿಲಾಲ್ ಶೇಖ್ ತಂದಗೆ ಶಿವಸೇನೆ ಅಭಿನಂದನೆ |
ಪ್ರಕಟಿಸಿದ ದಿನಾಂಕ : 2010-09-11
ಮುಂಬಯಿ: ನನ್ನ ಮಗ ಉಗ್ರನಾಗಿದ್ದರೆ ಅವನನ್ನು ನೇಣಿಗೇರಿಸಿ ಎಂದಿರುವ ಉಗ್ರ ಬಿಲಾಲ್ ಶೇಖ್‌ನ ತಂದೆ ಮೊಹಮ್ಮದ್ ಹುಸೈನ್ ಶೇಖ್ ಅವರನ್ನು ಶಿವಸೇನೆ ಅಭಿನಂದಿಸಿದೆ. ಪುಣೆ ಸ್ಫೋಟಕ್ಕೆ ಸಂಬಂಧಿಸಿ ಬಿಲಾಲ್ ಸೆರೆಯಾಗಿರುವ ವಿಚಾರ ತಿಳಿಯುತ್ತಲೇ ಆತನ ತಂದೆ ಮತ್ತು ತಾಯಿ ಮಗ ಉಗ್ರನಾಗಿದ್ದರೆ ಅವನನ್ನು ಖಂಡಿತ ನೇಣಿಗೇರಿಸಬೇಕು ಎಂದಿದ್ದಾರೆ.
ಶಿವಸೇನೆಯ ಸೊಲ್ಲಾಪುರ ಶಾಖೆ ಮೊಹಮ್ಮದ್ ಹುಸೈನ್ ಶೇಖ್ ಮತ್ತು ಅವರ ಪರಿವಾರದವರನ್ನು ಅಭಿನಂದಿಸಿ ನಗರದಲ್ಲಿ ಬ್ಯಾನರ್‌ಗಳನ್ನು ಹಾಕಿದೆ. ಡಾಕ್ಟರ್ ಆಗುವ ಕನಸು ಕಾಣುತ್ತಿದ್ದ ಮಗ ದುಬಾಯಿಗೆ ಎಂದು ಹೋದವ ಆರು ವರ್ಷ ವಾಪಾಸಾಗಿರಲಿಲ್ಲ. ಅವನು ಸೆರೆಯಾದಾಗಲೇ ಬದುಕಿರುವ ವಿಚಾರ ತಿಳಿದದ್ದು ಎಂದು ಮೊಹಮ್ಮದ್ ಹುಸೈನ್ ಶೇಖ್ ಹೇಳಿದ್ದಾರೆ. ಮೊಹಮ್ಮದ್ ಹುಸೈನ್ ಶೇಖ್ ರೈಲ್ವೆ ಸುರಕ್ಷಾ ಪಡೆಯಲ್ಲಿ ಜಮಾದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಅವರು ಸೊಲ್ಲಾಪುರದ ಹೋಟಿYಯಲ್ಲಿ ವಾಸವಾಗಿದ್ದಾರೆ. ನಾಲ್ವರು ಮಕ್ಕಳಲ್ಲಿ ಬಿಲಾಲ್ ಎರಡನೆಯವ. ಉದುì ಮಾಧ್ಯಮದಲ್ಲಿ ಎಸ್‌ಎಸ್‌ಸಿ ತನಕ ಕಲಿತು 12ನೇ ತರಗತಿಯ ನಂತರ ಇಲೆಕಿóಕಲ್ ಡಿಪ್ಲೊಮ ಮಾಡಿದ್ದ ಬಿಲಾಲ್ ಕೊಂಚ ಸಮಯ ಮಾನಸಿಕ ಅಸ್ವಸ್ಥನಾಗಿದ್ದ ಹಾಗೂ ಅಕ್ಕಪಕ್ಕದವರಿಗೆ ಕಿರುಕುಳ ಕೊಡುತ್ತಿದ್ದ. ಇದೇ ಸಂದರ್ಭದಲ್ಲಿ ಮೊಹಮ್ಮದ್ ಹುಸೈನ್ ಶೇಖ್ ನಿವೃತ್ತಿಯಾದರು. ಈ ಸಂದರ್ಭದಲ್ಲಿ ತಂದೆಗೆ ಸಿಕ್ಕಿದ ಎರಡು ಲ. ರೂ. ಭವಿಷ್ಯ ನಿಧಿ ಹಣವನ್ನು ಕದ್ದುಕೊಂಡು ಬಿಲಾಲ್ ಮನೆಯಿಂದ ಓಡಿ ಹೋಗಿದ್ದ. ಆ ನಂತರ ಅವನ ಸುದ್ದಿಯೇ ಇರಲಿಲ್ಲ. ಬಿಲಾಲ್ ಉಗ್ರನಾಗಬಹುದೆಂದು ಭಾವಿಸಿರಲಿಲ್ಲ ಎಂದೆನ್ನುತ್ತಿದ್ದಾರೆ ಅವನ ಮನೆಯವರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-11 00:00:00
|
|
|