ಡಾಲರ್ ಮೇಲಿನ ಅವಲಂಭನೆ ತೆಗೆಯುವ ಉದ್ದೇಶ ಇಲ್ಲ : ಸೌದಿ ಅರೇಬಿಯಾ ಸ್ಪಷ್ಟನೆ |
ಪ್ರಕಟಿಸಿದ ದಿನಾಂಕ : 2008-02-01
ರಿಯಾದ್, ಫೆಬ್ರವರಿ ೧: ಇಲ್ಲಿಯವರೆಗೂ ಇದ್ದಂತೆ ಸೌದಿ ರಿಯಾಲ್ ಯು.ಎಸ್. ಡಾಲರ್ ಮೇಲಿನ ಅವಲಂಬನೆಯನ್ನು ಮುಂದುವರಿಸಲಿದೆ ಎಂದು ಸೌದಿ ಅರೇಬಿಯನ್ ಮಾನೆಟರಿ ಏಜೆನ್ಸಿ (ಸಾಮಾ) ದ ಗವರ್ನರ್ ಆಗಿರುವ ಹಮದ್ ಅಲ್ ಸಯ್ಯಾರಿಯವರು ತಿಳಿಸಿದ್ದಾರೆ. ಯು.ಎಸ್. ಡಾಲರ್ ಬೆಲೆಯಲ್ಲಿ ಕುಸಿತ ಸೌದಿ ಅರೇಬಿಯನ್ ರಿಯಾಲ್ ಮೇಲೆ ಹೆಚ್ಚಿನ ವ್ಯತ್ಯಾಸ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಆದರೆ ಹಣದುಬ್ಬರ ಇತರೆಡೆಗಳಂತೆ ಸೌದಿ ಅರೇಬಿಯಾದಲ್ಲಿಯೂ ಏರಿದ್ದು ಕಳೆದ ವರ್ಷ ೨.೨ ಶೇಖಡಾ ಇದ್ದದ್ದು ಈ ವರ್ಷ ೪.೧ ಕ್ಕೆ ಏರಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ ಸೌದಿ ಅರೇಬಿಯಾದ ಎಲ್ಲಾ ರಂಗಗಳಲ್ಲಿ ಪ್ರಗತಿ ಕಂಡುಬಂದಿದೆ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಹಣ ಹೂಡಿಕೆ ಉತ್ಪಾದನೆಯನ್ನು ಹೆಚ್ಚಿಸಿದೆ ಹಾಗೂ ಲಾಭಾಂಶಗಳು ಕುಸಿತವನ್ನು ಸುಧಾರಿಸಿವೆ. ಈ ಕಾರಣಗಳಿಂದ ಕುಸಿದ ಯು.ಎಸ್. ಡಾಲರ್ ಹೆಚ್ಚಿನ ತೊಂದರೆ ಉಂಟುಮಾಡಿಲ್ಲ. ಸೌದಿ ರಿಯಾಲ್ ಬೆಲೆ ಹೆಚ್ಚೂ ಕಡಿಮೆ ಮೊದಲಿದ್ದಂತೆಯೇ ಇದೆ ಎಂದು ಸಯ್ಯಾರಿಯವರು ತಿಳಿಸಿದ್ದಾರೆ.
ಇತ್ತೀಚೆಗೆ ಪ್ರಕಟಿಸಿರುವ ಯು.ಎಸ್. ಫೆಡೆರಲ್ ಬ್ಯಾಂಕ್ ಬಡ್ಡಿದರಗಳಲ್ಲಿ ಕಡಿತಗಳ ಬಗ್ಗೆ ಚಿಂತನೆ ನಡೆಸಿ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ತೀರ್ಮಾನವು ನಾಗರಿಕರ ಆದಾಯವನ್ನು ಹೆಚ್ಚಿಸುವ ಹಾಗೂ ಹಣದುಬ್ಬರವನ್ನು ನಿಯಂತ್ರಿಸುಲು ಸಹಾಯಕವಾಗುವಂತೆ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ನ್ಯೂಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-02-01
|
|
|