ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ |
ಪ್ರಕಟಿಸಿದ ದಿನಾಂಕ : 2010-09-10
ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ 10 ಬೈಕ್ ಮತ್ತು 1 ಓಮ್ನಿ ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಉಡುಪಿಯಲ್ಲಿ ನಡೆದಿದೆ. ನಗರದ ಕಿನ್ನಿ ಮೂಲ್ಕಿಯ ವೀರಭದ್ರೇಶ್ವರ ದೇವಸ್ಥಾನದ ಮುಂ ಭಾಗದಲ್ಲಿ ರಸ್ತೆ ಬದಿ ಪಾರ್ಕ್ ಮಾಡಿದ್ದ ಬೈಕ್‌ಗಳ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಹರಿದಿದೆ. ಉಡುಪಿ ಮದುವೆ ಸಭಾಂಗಣದ ಮುಂಭಾಗದಲ್ಲಿ ನಿಲ್ಲಿಸಿದ್ದ ೧೦ ಬೈಕ್‌ಗಳು ಜಖಂ ಗೊಂಡಿದ್ದು ಕಾರು ಭಾಗಶಃ ಹಾನಿಯಾಗಿದೆ.
ಮೂಕಾಂಬಿಕ ಬಸ್ ಚಾಲಕ ಕೀರ್ತೇಶ್ ಪಾನಮತ್ತನಾಗಿ ಬಸ್ ಚಲಾಯಿಸುತ್ತಿದ್ದ ಎಂದು ಹೇಳ ಲಾಗಿದೆ. ಬಸ್ಸು ಉಡುಪಿಯಿಂದ ಮಂಗಳೂರಿನತ್ತ ಹೊರಟಿತ್ತು. ಘಟನೆ ನಡೆದ ಸಂದರ್ಭ ಮಳೆ ಸುರಿಯುತ್ತಿದ್ದು ಯಾರೂ ಇಲ್ಲದ ಕಾರಣ ಯಾವುದೇ ಸಾವು ನೋವುಗಳು ನಡೆದಿಲ್ಲ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡ್ರೈವರ್ ಕೀರ್ತೇಶ್‌ನನ್ನು ಬಂಧಿಸಲಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-09-10 00:00:00
|
|
|