ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ |
ಪ್ರಕಟಿಸಿದ ದಿನಾಂಕ : 2010-09-10
ಗಣಪತಿಯ ವಿಗ್ರಹ ಬಹಳ ಸುಂದರ ಕಲ್ಪನೆಯದ್ದು. ಗಜಮುಖ, ನಾಲ್ಕು ಕೈ, ದೊಡ್ಡ ಹೊಟ್ಟೆ, ಹೊಟ್ಟೆಗೆ ಹಾವು ಸುತ್ತಿರುವುದು, ಸವಾರಿಗೆ ಇಲಿ. ವಿಲಕ್ಷಣ ಮೂರ್ತಿ ಗಣಪತಿ. ಗಣಗಳಿಗೆ ಅಧಿಪತಿ (ಒಡೆಯ) ಆದ್ದರಿಂದ ಗಣಪತಿ, ಗಣಗಳಿಗೆ ಈಶ ಆದ್ದರಿಂದ ಗಣೇಶ ಎಂದೆನಿಸಿ ಕೊಂಡಿದ್ದಾನೆ.


ವಿಘ್ನನಿವಾರಕ, ಸಿದ್ಧಿವಿನಾಯಕ, ಮೂಷಿಕ ವಾಹನ, ಲಂಬೋದರ, ವಿಘ್ನೇಶ, ಏಕದಂತ, ವಕ್ರ ತುಂಡ, ಗಣರಾಜ, ಗಣೇಶ, ಮೋದಕಪ್ರಿಯ ಎಂದೆಲ್ಲಾ ಕರೆಸಿಕೊಳ್ಳುವ ಗಣಪತಿಯ ಹಬ್ಬ ಬಂದೇ ಬಿಡ್ತು. ಪ್ರತಿ ವರ್ಷ ಭಾದ್ರಪದ ಶುಕ್ಲದ ಚೌತಿಯಂದು ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ಸೆ. 11ರಂದು (ನಾಳೆ) ಈ ಆಚರಣೆ ನಡೆಯಲಿದೆ.


ಉಡುಪಿಯ ರಥಬೀದಿಯಲ್ಲಿ ಹೂವಿನ ವ್ಯಾಪಾರ, ಕಬ್ಬು ಮಾರಾಟ, ಮುಡೆ, ಹಣ್ಣುಹ೦ಪಲುಗಳ ವ್ಯಾಪಾರ ಭರಾಟೆಯು ತು೦ಬಾ ಜೋರಾಗಿ ನಡೆಯುತ್ತಿದೆ.
ಮೊದಲು ವಂದಿಪೆ ನಿನಗೆ ಗಣನಾಥ ಎಂಬಂತೆ ಯಾವುದೇ ಕೆಲಸ-ಕಾರ್ಯಗಳನ್ನು ಪ್ರಾರಂಭಿ ಸುವ ವೊದಲು ಗಣಪತಿಯನ್ನು ಸ್ಮರಿಸುವುದು ಭಾರತೀಯರ ಒಂದು ಸಂಪ್ರದಾಯವಾಗಿದೆ. ಯಾವುದೇ ಧಾರ್ಮಿಕ ಕಾರ್ಯಗಳಲ್ಲಿಯೂ ಮೊದಲಿಗೆ ಸ್ವಸ್ತಿಕವಿಟ್ಟು ಗಣಪನ ಸ್ಮರಣೆ ಮಾಡ ಲಾಗುತ್ತದೆ. ಹಿಂದೂಗಳಲ್ಲಿ ಅಂತೂ ಯಾವುದೇ ಸಮಾರಂಭದ ಪ್ರಾರಂಭದ ಮೊದಲು ವಿಘ್ನ ನಿವಾರಕ ಪ್ರಾರ್ಥನೆಗೆ ಬಹಳ ಪ್ರಾಮುಖ್ಯವಿದೆ.


ಸಾರ್ವಜನಿಕ ಗಣೇಶೋತ್ಸವ
ದೇಶದೆಲ್ಲೆಡೆ ಸಾರ್ವಜನಿಕ ಗಣೇಶೋತ್ಸವ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಈ ಸಾರ್ವಜ ನಿಕ ಗಣೇಶೋತ್ಸವವನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂ ಗಾಧರ ತಿಲಕರು ಪ್ರಾರಂಭಿಸಿದರು. ಇದರ ಉದ್ದೇಶ ರಾಷ್ಟ್ರದ ಜನತೆಯನ್ನು ಒಗ್ಗೂಡಿಸಿ ಅವರಲ್ಲಿ ದೇಶಪ್ರೇಮ ಬೆಳೆಸುವುದರ ಮೂಲಕ ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಹೋರಾಟ ನಡೆಸುವುದಾಗಿ ತ್ತು. ಮೊದಲಿಗೆ ಮುಂಬಯಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಪ್ರಾರಂಭಗೊಂಡಿತು. ಈ ಹಬ್ಬವನ್ನು ಭಾರತದಲ್ಲಿ ಯಾವುದೇ ಧರ್ಮ, ಜಾತಿ, ಭೇದವಿಲ್ಲದೆ ಎಲ್ಲ ಜನರು ಒಂದುಗೂಡಿ ಆಚರಿಸುತ್ತಾರೆ.









ವರದಿಯ ವಿವರಗಳು |
 |
ಕೃಪೆ : ದುರ್ಗಪ್ರಸಾದ್ ಕೆ. ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-09-10 00:00:00
|
|
|