ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್. |
ಪ್ರಕಟಿಸಿದ ದಿನಾಂಕ : 2010-09-10
(ವಿಶೇಷ ಚಿತ್ರ / ವರದಿ : ಸತೀಶ್ ಕಾಪಿಕಾಡ್)
ರಂಝಾನ ಹಬ್ಬ ಆಚರಣೆಯ 90ಕ್ಕೂ ಹೆಚ್ಚು ವಿಶೇಷ ಚಿತ್ರಗಳನ್ನು ನೋಡಲು ಫೋಟೋ ಆಲ್ಬಂ ಕ್ಲಿಕ್ ಮಾಡಿ
ಮಂಗಳೂರು,ಸೆ.10: ಇಂದು ಮುಸ್ಲಿಮರ ಪವಿತ್ರ ರಂಝಾನ್ ಹಬ್ಬ. ಮಂಗಳೂರಿನ ಈದ್ಗಾ ಮೈದಾನದಲ್ಲಿರುವ ಈದ್ಗಾ ಮಸೀದಿಯಲ್ಲಿ ಇಂದು ಬೆಳಿಗ್ಗೆ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಅವರ ನೇತ್ರತ್ವದಲ್ಲಿ ನಮಾಜ್ ಹಾಗೂ ಖುತ್‌ಬಾ ಪಾರಾಯಣ ನಡೆಯಿತು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಾಲ್ಲಿ ಈದ್- ಉಲ್-ಫಿತರ್ ಒಂದು. ಒಂದು ತಿಂಗಳ ರಂಝಾನ್ ಅಥವಾ ರಮಾದನ್ ಉಪವಾಸ ಆಚರಣೆಯ ಅನಂತರ ಈದ್-ಉಲ್-ಫಿತರನ್ನು ಆಚರಿಸಲಾಗುತ್ತದೆ. ಇಸ್ಲಾಂ ಕ್ಯಾಲೆಂಡರನಲ್ಲಿ ವರ್ಷದ ಒಂಬತ್ತನೆ ತಿಂಗಳು ಇದಾಗಿರುತ್ತದೆ.
ಇಸ್ಲಾಂನ ಐದು ಪ್ರಮುಖ ಹಬ್ಬಗಳಲ್ಲಿ ಇದು ನಾಲ್ಕನೇಯದ್ದು. ದಾನ -ಧರ್ಮ ಕ್ಕೆ ಈ ಹಬ್ಬದಲ್ಲಿ ಹೆಚ್ಚಿನ ಪ್ರಾಮುಖ್ಯ ವಿದೆ. ಹಾಗೇ ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಹಾರೈಸುವುದಕ್ಕೂ ಈ ಹಬ್ಬದಲ್ಲಿ ಮಹತ್ವ ಹೆಚ್ಚು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-09-10 00:00:00
|
|
| mohsin dubai, udupi | 2010-09-10 | | ಎಲ್ಲಾ ಮುಸ್ಲಿಮ್ ಬಾಂಧವರಿಗೆ ಪವಿತ್ರ ರಂಝಾನ್ ಹಬ್ಬಶುಭಾಶಯಗಳು
|
|