ಕಂಧಮಾಲ್ ಗಲಭೆ ಪ್ರಕರಣ: ಬಿಜೆಪಿ ಶಾಸಕನಿಗೆ ಆರು ವರ್ಷ ಜೈಲು ಶಿಕ್ಷೆ |
ಪ್ರಕಟಿಸಿದ ದಿನಾಂಕ : 2010-09-10
ಪುಲ್ಬನಿ: ಒರಿಸ್ಸಾದ ಕಂಧಮಾಲ್‌ನಲ್ಲಿ ೨೦೦೮ರಲ್ಲಿ ನಡೆದ ಕೋಮು ಗಲಭೆಯಲ್ಲಿ ವ್ಯಕ್ತಿಯೊಬ್ಬನ ಕೊಲೆ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿಯ ಹಾಲಿ ಶಾಸಕ ಮನೋಜ್ ಪ್ರಧಾನ್‌ಗೆ ತ್ವರಿತ ನ್ಯಾಯಾಲಯ ೬ ವರ್ಷ ಕಠಿಣ ಶಿಕ್ಷೆ ವಿಧಿಸಿದೆ.
ಕೋಮು ಗಲಭೆ ಸಂದರ್ಭದಲ್ಲಿ ನಡೆದ ಕ್ರಿಶ್ಚಿಯನ್ ಧರ್ಮೀಯ ಬಿಕ್ರಮ್ ನಾಯಕ್ ಕೊಲೆ ಪ್ರಕರ ಣದಲ್ಲಿ ಪ್ರಧಾನ್ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿತು. ಸೂಕ್ಷ್ಮ ಪ್ರದೇಶವಾದ ಉದಯಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಗಲಭೆ ವೇಳೆ ಅಲ್ಪಸಂಖ್ಯಾತರ ಮನೆಗಳಿಗೆ ಬೆಂಕಿ ಹಚ್ಚಿದ ಮತ್ತು ಗೋಮುಗಲಭೆಗೆ ಪ್ರಚೋದನೆ ನೀಡಿದ ಕಾರಣಕ್ಕಾಗಿ ಪ್ರಧಾನ್‌ಗೆ ನ್ಯಾಯಾಲಯ ೧೫,೫೦೦ ರು. ದಂಡವನ್ನೂ ವಿಧಿಸಿತು.
ವಿಎಚ್‌ಪಿ ಮುಖಂಡ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರ ಹತ್ಯೆಯ ಹಿನ್ನೆಲೆಯಲ್ಲಿ ೨೦೦೮ರ ಆಗಸ್ಟ್ ೨೬ರಂದು ಕಂದಮಾಲ್‌ನಲ್ಲಿ ಉಂಟಾದ ಕೋಮುಗಲಭೆಗೆ ೩೮ ಮಂದಿ ಬಲಿಯಾಗಿದ್ದರು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-10 00:00:00
|
|
|