ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ

ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
ದಿನೇಶ ಪಟ­ವ­ರ್ಧನ್‌

ಚಿಕ್ಕಮಗಳೂರು : ಕಾಂಗ್ರೆಸ್‌ ಪಕ್ಷ ಅಭ್ಯರ್ಥಿ ಆಯ್ಕೆ­ಯಲ್ಲಿ ಸ್ವಲ್ಪ ಜಾಣ­ತನ ತೋರಿ­ದ್ದರೆ ಕಡೂರು ವಿಧಾನ­ಸಭಾ ಕ್ಷೇತ್ರ ಹೊಸ ಇತಿ­ಹಾ­ಸಕ್ಕೆ ಮುನ್ನುಡಿ ಬರೆ­ಯುವ ಸಾಧ್ಯ­ತೆ­ಗಳು ಇತ್ತು. ಮೊದಲ ಮಹಿಳಾ ಪ್ರತಿ­ನಿ­­ಯನ್ನು ಕ್ಷೇತ್ರಕ್ಕೆ ಕೊಟ್ಟ ಹೆಗ್ಗ­ಳಿಕೆಯೂ ಇರು­ತ್ತಿತ್ತು.

ಚುನಾ­ವ­ಣೆಗೆ ಇನ್ನೂ ಮೂರು ದಿನ ಇದೆ. ಇಂದಿನ ವರೆಗೆ ಮಾಡಿದ ತಂತ್ರ­ಗಳೇ ಬೇರೆ. ಮುಂದಿನ ತಂತ್ರಗಳೇ ಬೇರೆ. ಎಲ್ಲ ಲೆಕ್ಕಾ­ಚಾರ ಬುಡ­ಮೇಲು ಮಾಡುವ 'ಶಕ್ತಿ' ಈ ದಿನ­ಗ­ಳಿಗೆ ಇದೆ. ಈ ದಿನದ ಮಟ್ಟಿಗೆ ಮೂರೂ ಪಕ್ಷ­ಗಳು ಸಮ­ಬ­ಲದ ಹೋರಾಟ ನೀಡು­ತ್ತಿವೆ.

ಕಾಂಗ್ರೆ­ಸ್‌­ನಿಂದ ಕೆ.ಎಂ.ಕೆಂ­ಪ­ರಾಜು, ಜೆಡಿ­ಎ­ಸ್‌­ನಿಂದ ವೈ.ಎಸ್‌.ವಿ.ದತ್ತಾ, ಬಿಜೆ­ಪಿ­ಯಿಂದ ಡಾ.ವಿ­ಶ್ವ­ನಾಥ್‌ ಸ್ಪì­ಗಳು. ಕೆಂಪ­ರಾ­ಜುಗೆ ವಿಧಾ­ನ­ಸಭೆ ಚುನಾ­ವಣೆ ಹೊಸತು. ಆದರೆ ಚುನಾ­ವಣೆ ಪ್ರಕ್ರಿಯೆ ಹೊಸ­ತಲ್ಲ. ತಮ್ಮ ಸಹೋ­ದರ ಕೆ.ಎಂ. ಕೃ­ಷ್ಣ­ಮೂ­ರ್ತಿ ಪರ ಚುನಾ­ವಣೆ ದಿನ­ಗ­ಳಲ್ಲಿ ಟೊಂಕ ಕಟ್ಟಿ ನಿಂತ­ವರು.

8 ಚುನಾ­ವ­ಣೆ­ಗಳ ಅನು­ಭವ. ಹೀಗಾಗಿ ಎಲ್ಲ ಪಟ್ಟು­ಗಳೂ ಕರ­ಗತ. ಜಾತ್ಯ­ತೀತ ಜನ­ತಾ­ದ­ಳದ ವೈ.ಎಸ್‌.ವಿ. ದತ್ತಾಗೆ ಇದು ಎರ­ಡ­ನೇಯ ಚುನಾ­ವಣೆ. ಮಾತಿನ ಮಲ್ಲ. ಜನ­ರಲ್ಲಿ ಹೊಸ ಭರ­ವಸೆ ಮೂಡಿ­ಸಿ­ರುವ ವ್ಯಕ್ತಿ. ಬಿಜೆ­ಪಿಯ ಡಾ.ವಿ­ಶ್ವ­ನಾ­ಥ್‌ಗೆ ಮೂರ­ನೇಯ ಚುನಾ­ವಣೆ. ಸಭ್ಯ­ತೆಯೇ ಮಾನ­ದಂಡ.

ಈ ಕ್ಷೇತ್ರ­ದಲ್ಲಿ ಫಲಿ­ತಾಂ­ಶದ ಅಳ­ತೆ­ಗೋಲು ಜಾತಿ. ಹಿಂದಿನ ಚುನಾ­ವ­ಣೆ­ಗಳು ಇದಕ್ಕೆ ಸಾಕ್ಷಿ. ಹಿಂದೆಂದೂ ಕಾಣ­ದಷ್ಟು ಸಂಪ­ಲ್ಮೂಲ ಕ್ಷೇತ್ರ­ದಲ್ಲಿ ಹರಿ­ದಾ­ಡು­ತ್ತಿದೆ. ಎಷ್ಟೇ ಸಭ್ಯ­ರಂತೆ ಮಾತ­ನಾ­ಡಿ­ದರೂ ಜಾತಿ, ಹಣ, ಹೆಂಡ ಮೂರೂ ಚುನಾ­ವಣೆ ಫಲಿ­ತಾಂ­ಶ ನಿರ್ಧರಿಸುವ ಅಂಶ­ಗ­ಳು.

ಜಿಲ್ಲೆಯ ಉಳಿದ ತಾಲೂ­ಕು­ಗ­ಳಿಗೆ ಹೋಲಿ­ಸಿ­ದಲ್ಲಿ ಕಡೂರು ಕ್ಷೇತ್ರ­ದಲ್ಲಿ ಹೆಚ್ಚಿನ ಅಭಿ­ವೃ­ದ್ಧಿ, ಸಾಧನೆ ಆಗಿ­ರು­ವುದು ಸತ್ಯ. ಗುಣ­ಮಟ್ಟ ಕೊರತೆ ಫಲ­ವಾಗಿ ಕೆಲವು ಶಾಶ್ವ­ತ­ವಾಗಿ ಉಳಿ­ದಿಲ್ಲ. ಸಮ­ಸ್ಯೆ­ಗ­ಳಿಗೂ ಬರ­ವಿಲ್ಲ. ಸಂಪರ್ಕ ರಸ್ತೆ­ಗಳ ಅಭಿ­ವೃ­ದ್ಧಿ ಗಂಭೀ­ರ­ವಾಗಿ ಕಾಡು­ತ್ತಿದೆ. ಬಯಲು ಪ್ರದೇ­ಶಕ್ಕೆ ಶಾಶ್ವತ ನೀರಾ­ವರಿ ವ್ಯವಸ್ಥೆ ಕಲ್ಪಿ­ಸುವ ಕನಸು ಸಾಕಾ­ರ­ವಾ­ಗಿಲ್ಲ.

ಶ್ರೀಮಂ­ತಿಕೆ ಜೊತೆಗೆ ಬಡ­ತ­ನವೂ ಇದೆ. ಇದನ್ನೇ ಆಡ­ಳಿತ ಪಕ್ಷ ಚುನಾ­ವ­ಣೆಯ ಪ್ರಮುಖ ಅಸ್ತ್ರ­ವಾಗಿ ಮಾಡಿ­ಕೊಂ­ಡಿದೆ. ದತ್ತು ಸ್ವೀಕಾ­ರದ ಮಾತು­ಗಳ ಮೂಲಕ ಮತ­ದಾ­ರರ ಮೂಗಿಗೆ ತುಪ್ಪ ಸವ­ರುವ ಕೆಲಸ ಮಾಡು­ತ್ತಿದೆ.

ಇದಕ್ಕೆ ಪ್ರತಿ­ಯಾಗಿ ಪ್ರತಿ­ಪ­ಕ್ಷ­ಗಳು ಗಣಿ­ಹ­ಗ­ರಣ, ಭೂ ಹಗ­ರಣ, ಕೆಲ ಸಚಿ­ವರ ಲಂಪ­ಟ­ತನ, ಆಡ­ಳಿ­ತ­ದಲ್ಲಿ ಹೆಚ್ಚಿದ ಭ್ರಷ್ಟಾ­ಚಾರ ಹೀಗೆ ಹತ್ತು ಹಲವು ವಿಷ­ಯ­ಗ­ಳನ್ನು ಹರಿದು ಬಿಡು­ತ್ತಿವೆ. ಇದೆಲ್ಲ ಮತ­ದಾ­ರರ ಮೇಲೆ ಪರಿ­ಣಾಮ ಬೀರು­ವುದೇ ಎನ್ನು­ವುದೇ ಮುಖ್ಯ ಪ್ರಶ್ನೆ.

ಜನ­ರಿಗೆ ರಾಜ­ಕೀಯ ಒಂದು ರೀತಿ ರೋಸಿ ಹೋಗಿದೆ. ಸ್ವರ್ಗ­ವನ್ನು ಧರೆಗೆ ಇಳಿ­ಸುವ ಮಾತಿ­ನಲ್ಲಿ ವಿತ್ವಾಸ ಕಳೆ­ದು­ಕೊಂ­ಡಿ­ದ್ದಾರೆ. ಚುನಾ­ವ­ಣೆಗೂ ಕಾಲಿಟ್ಟ ಭ್ರಷ್ಟತೆ ಫಲ­ವಾಗಿ ಜನರ 'ನಿ­ರೀಕ್ಷೆ'ಗಳು ಅಪಾರ. ಮತ­ಗಳು ಯಾರಿಗೆ ಎನ್ನುವ ಪ್ರಶ್ನೆಗೆ ಉತ್ತರ ನಮ್ಮನ್ನು 'ವಿ­ಚಾ­ರಿಸಿ' ಕೊಂಡ­ವ­ರಿಗೆ.

ಲಿಂಗಾ­ಯಿ­ತರು ಹಾಗು ಕುರು­ಬರ ಕದ­ನದ ಮಧ್ಯೆ ಇತರೆ ವರ್ಗದ ಅಪಾರ ಮತ­ದಾ­ರರೂ ಇಲ್ಲಿ­ದ್ದಾರೆ. ನಿರ್ಣಾ­ಯ­ಕರು ಇವರು. ಇಂದು ಯಾರೂ ಒಗ್ಗ­ಟ್ಟಾಗಿ ಉಳಿ­ದಿಲ್ಲ. ಉಳಿ­ಯಲು ಬಿಟ್ಟಿಲ್ಲ.

ಮತ­ದಾ­ರರ ಕೈಯಲ್ಲಿ ಸಾವಿರ ರೂ. ನೋಟು­ಗಳು ನಲಿ­ದಾ­ಡು­ತ್ತಿವೆ. ಸಾರಾ­ಯಿಯ ಕಮಟು ವಾಸನೆ ಸಭೆಗ­ಳಲ್ಲಿ ಮೂಗಿಗೆ ಬಡಿ­ಯು­ತ್ತಿದೆ. ಇದೆಲ್ಲ ರಾಜ­ಕಾ­ರ­ಣಿ­ಗಳ ಕೃಪಾ­ಕ­ಟಾಕ್ಷ.

ಭರ­ವ­ಸೆ­ಗಳ ಮೂಲಕ ಆಸೆ- ಆಮಿ­ಷ­ಗಳ ಮಹಾ­ಪೂ­ರವೇ ಹರಿ­ದಿದೆ. ಕೆಲ 'ಇ­ಷ್ಟಾರ್ಥ'ಗಳೂ ನೆರ­ವೇ­ರಿವೆ. ಎಲ್ಲ ಅಭ್ಯರ್ಥಿ, ನಾಯ­ಕ­ರಲ್ಲಿ ಗೆಲು­ವಿನ ಉತ್ಸಾಹ. ವಿತ್ವಾ­ಸ­ದಿಂದ ಕೇಳಿ­ದರೆ ಹೇಳಿ­ಕೊ­ಳ್ಳು­ವಷ್ಟು ಸುಲ­ಭ­ವಿಲ್ಲ ಎನ್ನುವ ಪಿಸು ಧ್ವನಿ. ಇದು ವಾಸ್ತವ. ಕಳೆದ ಚುನಾ­ವ­ಣೆಗೂ ಇಂದಿಗೂ ಸಾಕಷ್ಟು ಬದ­ಲಾ­ವಣೆ ಆಗಿದೆ.

ಅಂದು ಕೆಎಂಕೆ ಜೊತೆ­ಗಿ­ದ್ದ­ವರು ಕಾಂಗ್ರೆಸ್‌ ಪರ­ವಾ­ಗಿಲ್ಲ. ಅದೇ ರೀತಿ ದತ್ತಾ ಕೈಹಿ­ಡಿ­ದ­ವರೂ ದೂರ ನಿಂತಿದ್ದಾರೆ. ವಿಶ್ವ­ನಾಥ್‌ ಬೇಡ ಎಂದ­ವರು ಒಮ್ಮೆ ಬರಲಿ ಎನ್ನು­ತ್ತಿ­ದ್ದಾರೆ. ಅಂತಿಮ ಕ್ಷಣ­ದಲ್ಲಿ ನಡೆ­ಯುವ ಮ್ಯಾಜಿಕ್‌ ಫಲಿ­ತಾಂ­ಶದ ದಿಕ್ಕನ್ನೇ ಬದ­ಲಿ­ಸುವ ಸಾಧ್ಯತೆ ಇಲ್ಲ­ದಿಲ್ಲ.

ಕೆಎಂಕೆ ಸಾಧನೆ , 'ಅ­ನು­ಕಂಪ 'ದ ಜೊತೆಗೆ ಸಾಂಪ್ರ­ದಾ­ಯಿಕ ಮತ­ಗಳು ಸಾರಾ­ಸ­ಗಟು ಕೈಹಿ­ಡಿ­ದರೆ ಕೆಂಪ­ರಾಜು ಅದೃಷ್ಟ ಖುಲಾ­ಯಿ­ಸಿ­ದಂತೆ.

ಜೆಡಿ­ಎ­ಸ್‌ಗೂ ಅನೇಕ ತೊಡ­ಕು­ಗಳು ಇಲ್ಲ­ದಿಲ್ಲ. ಮಾಜಿ ಶಾಸಕ ಧರ್ಮೇ­ಗೌಡ, ಎನ್‌.ದೇ­ವ­ರಾಜ್‌ ಬೆಂಬಲ ನಿಜಕ್ಕೂ ಸಹ­ಕಾರಿ. ಗೆಲು­ವಿಗೆ ಇದೊಂದೆ ಸಾಲದು. ಲಿಂಗಾ­ಯಿತ, ಕುರು­ಬ­ರನ್ನು ಹೊರತುಪಡಿಸಿ ಉಳಿದವರ ಮನ ಗೆಲ್ಲಲೇ ಬೇಕು. ಜೊತೆಗೆ ಕೊನೆಯ ಮೂರು ದಿನ­ಗ­ಳನ್ನು ನಿಭಾ­ಯಿ­ಸುವ ' ಸಾಮರ್ಥ್ಯ'ವೂ ಅಗತ್ಯ. ಇಲ್ಲಿ ಯಶಸ್ವಿ ಆದಲ್ಲಿ ಕಳೆದ ಬಾರಿ ಗೆಲು­ವಿನ ಹತ್ತಿ­ರಕ್ಕೆ ಬಂದ ದತ್ತಾ ಈ ಬಾರಿ ವಿಧಾನ ಸಭೆ ಪ್ರವೇ­ಶಿ­ಸು­ವುದು ನಿಶ್ಚಿತ.

ಬಿಜೆ­ಪಿಗೆ ದೊಡ್ಡ ಶಕ್ತಿ ಸಂಪ­ನ್ಮೂಲ. ದೊಡ್ಡ ನಾಯ­ಕರೇ ಇದರ ಹೊಣೆ ಹೊತ್ತಿ­ದ್ದಾರೆ. ಜಾತಿ ಸಮೀ­ಕ­ರ­ಣವೂ ಕೆಲಸ ಮಾಡುವ ವಿತ್ವಾ­ಸವೂ ಅವ­ರಿಗೆ ಇದೆ. ಪ್ರಮುಖ ಜಾತಿ ಮತ­ಗಳ ಜೊತೆಗೆ ಕೊಟ್ಟ ಮಾತಿ­ನಂತೆ ಇತರೆ ಸಮು­ದಾ­ಯ­ಗಳು ನಡೆ­ದು­ಕೊಂ­ಡರೆ ಡಾ.ವಿ­ಶ್ವ­ನಾಥ್‌ ಮುಖ­ದಲ್ಲಿ ನಗು ಮೂಡು­ವುದು ಖಚಿತ.

ಕಣ­ದಲ್ಲಿ ಮೂರೂ ಕುದು­ರೆ­ಗಳು ಸಮ­ಬ­ಲ­ವಾಗಿ ಓಡು­ತ್ತಿವೆ. ಜೆಡಿ­ಎಸ್‌- ಬಿಜೆಪಿ ಮಧ್ಯೆ ಹೆಚ್ಚು ತುರುಸು ಕಾಣು­ತ್ತಿದೆ. ಎಲ್ಲಿ ಯಾರು ಎಡ­ವು­ತ್ತಾರೆ. ಜನ ಯಾರಿಗೆ ಕೈ ಕೊಡು­ತ್ತಾರೆ ಎನ್ನು­ವು­ದರ ಮೇಲೆ ನಿರ್ಧಾರ. ಅಚ್ಚ­ರಿಯ ಫಲಿ­ತಾಂ­ಶದ ಸಾಧ್ಯ­ತೆ­ಗಳೇ ಅಕ.

ವಿಧಾನ ಸಭಾ ಕ್ಷೇತ್ರ: ಕಡೂರು.

ಒಟ್ಟು ಮತ­ದಾ­ರರು: 1,76,470.

ಪುರು­ಷರು: 90,515,

ಮಹಿ­ಳೆ­ಯರು: 85,955.

ಮತ­ಗ­ಟ್ಟೆ­ಗಳು: 226.

ಸೂಕ್ಷ್ಮ-102 ,

ಅತೀ ಸೂಕ್ಷ್ಮ- 66

ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ
ಎಂ.ಎನ್‌. ಗುರುಮೂರ್ತಿ

ಬೆಂಗಳೂರು : ಈ ತಿಂಗಳ 13 ರಂದು ನಡೆಯಲಿರುವ ಕಡೂರು ಹಾಗೂ ಗುಲ್ಬರ್ಗ ದಕ್ಷಿಣ ಕ್ಷೇತ್ರಗಳ ಉಪ ಚುನಾವಣೆ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ ಪಾಲಿಗೆ ಪ್ರತಿಷ್ಠೆ ಮಾತ್ರವಲ್ಲ , ಸವಾಲು ಕೂಡ ಆಗಿದೆ.

ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಮೇಲೆ ಈಗಿನದು ಮೂರನೇ ಉಪ ಚುನಾವಣೆ. ಲೋಕಸಭಾ ಚುನಾವಣೆಗೆ ಮುನ್ನ 8 ಹಾಗೂ ನಂತರ 5 ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು . ಈಗ ಮತ್ತೂಂದು ಉಪ ಚುನಾವಣೆ ಎದುರಾಗಿದೆ, ಈಗ ಸ್ಥಾನಗಳು ಖಾಲಿ ಆಗಿರುವುದು 'ಆಪರೇಷನ್‌ ಕಮಲ' ದಿಂದಲ್ಲ . ಕಡೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್‌ನ ಕೆ.ಎಂ.ಕೃಷ್ಣಮೂರ್ತಿ ಹಾಗೂ ಗುಲ್ಬರ್ಗ ದಕ್ಷಿಣವನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿಯ ಚಂದ್ರಶೇಖರ ಪಾಟೀಲ್‌ ರೇವೂರ ಅವರ ನಿಧನದಿಂದ ತೆರವಾದವು. ಹಿಂದಿನ ಎರಡು ಉಪ ಚುನಾವಣೆಗಳಿಗೂ ಈಗಿನ ಉಪ ಚುನಾವಣೆಗೂ ಸಾಕಷ್ಟು ರಾಜಕೀಯ ಹಾಗೂ ಸಾಂದರ್ಭಿಕ ವ್ಯತ್ಯಾಸಗಳಿವೆ. ಕಳೆದ ಎರಡು ವರ್ಷಗಳ ಆಡಳಿತ ವೈಖರಿ ಮತ್ತಿತರ ಕಾರಣಗಳಿಂದ ಬಿಜೆಪಿಯ ವರ್ಚಸ್ಸು ಕುಂದಿದೆ, ಕುಂಭಕರ್ಣ ನಿದ್ರಾವಸ್ಥೆಯಲ್ಲಿದ್ದ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಕೊನೆಗೂ ರಣ ಕಹಳೆ ಮೊಳಗಿಸಿವೆ.

ಮೂರು ಪಕ್ಷಗಳಿಗೂ ಈ ಚುನಾವಣೆ ಪ್ರತಿಷ್ಠೆ ಹಾಗೂ ಸವಾಲು ಆಗಿದೆ, ಈ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಪಣ ತೊಟ್ಟಿದ್ದರೆ, ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿ ಅದುºತ ಯಶಸ್ಸು ಕಂಡು ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್‌ ಚುನಾವಣೆ ಗೆಲ್ಲಲು ಸಂಕಲ್ಪ ಮಾಡಿದೆ. ಅದೇ ರೀತಿ ತಮ್ಮ ಅಸ್ತಿತ್ವದ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಸದಾ ಕೇಳಿ ಬರುತ್ತಿರುವ ಟೀಕೆಗಳಿಗೆ ಉತ್ತರ ಕೊಡಲು ಎರಡು ಕ್ಷೇತ್ರಗಳಲ್ಲಿ ಒಂದು ಕಡೆಯಲ್ಲಾದರೂ ಗೆಲುವು ಸಾಧಿಸಲು ಜೆಡಿಎಸ್‌ ಕಾರ್ಯತಂತ್ರ ರೂಪಿಸಿ ಹೋರಾಡುತ್ತಿದೆ. ಸದ್ಯದಲ್ಲಿಯೇ ನಡೆಯಲಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದ ದಿಕೂÕಚಿಯೆಂದೇ ಹೇಳಲಾಗುವ ಈ ಉಪ ಚುನಾವಣೆ ಹಲವು ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.

ಆಡಳಿತಾರೂಢ ಬಿಜೆಪಿಗೆ ವಿಶೇಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಮತ್ತೂಂದು ಅಗ್ನಿ ಪರೀಕ್ಷೆ ಇದ್ದಂತೆ. ಈ ಚುನಾವಣೆಯ ಫಲಿತಾಂಶದಿಂದ ಸರ್ಕಾರದ ಭದ್ರತೆಗೆ ಅಪಾಯವೇನೂ ಆಗುವುದಿಲ್ಲ . ಸರ್ಕಾರ ಗಟ್ಟಿಯಾಗಿಯೇ ಇರುತ್ತದೆ. ಆದರೆ, ಯಡಿಯೂರಪ್ಪ ಅವರ ಆಡಳಿತ ವೈಖರಿ, ನೀತಿ ನಿಲುವುಗಳಿಂದಾಗಿ ಸರ್ಕಾರ ಹಾಗೂ ಪಕ್ಷದೊಳಗೆ ಇತ್ತೀಚೆಗೆ ಒಳಂಗಿಂದೊಳಗೆ ವಿರೋಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಶೋಭಾ ಕರಂದ್ಲಾಜೆ ಹಾಗೂ ವಿ. ಸೋಮಣ್ಣ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂಬ ಯಡಿಯೂರಪ್ಪ ಅವರ ಪ್ರಯತ್ನಕ್ಕೆ ಅಡ್ಡಗಾಲು ಹಾಕಿರುವುದೇ ಇದಕ್ಕೆ ನಿದರ್ಶನ.

ಇದುವರೆಗೆ ಯಡಿಯೂರಪ್ಪ ಹೇಳಿದ್ದೆಲ್ಲವೂ ನಡೆಯುತ್ತಿದ್ದವು, ಆದರೆ, ಇತ್ತೀಚೆಗೆ ಆ ರೀತಿ ಆಗುತ್ತಿಲ್ಲ. ಪಕ್ಷದ ವರಿಷ್ಠರು ಯಡಿಯೂರಪ್ಪ ನಾಗಾಲೋಟಕ್ಕೆ ಮೂಗುದಾರ ಹಾಕುತ್ತಿದ್ದಾರೆ. ಈಗ ಮತ್ತೆ ಎಲ್ಲವೂ ಅವರೇಳಿದಂತೆ ನಡೆಯಬೇಕಾದರೆ ಈ ಎರಡೂ ಉಪ ಚುನಾವಣೆಗಳಲ್ಲಿ ತಮ್ಮ ಜನಪ್ರಿಯತೆ ಸಾಬೀತುಪಡಿಸಬೇಕಾದ ಅನಿವಾರ್ಯತೆ ಯಡಿಯೂರಪ್ಪಗಿದೆ.

ಎರಡರ ಪೈಕಿ ಒಂದರಲ್ಲಿ ಗೆದ್ದರೂ ಬಿಜೆಪಿಗೆ ಲಾಭವೂ ಇಲ್ಲ , ನಷ್ಟವೂ ಇಲ್ಲ . ತನ್ನ ಸ್ಥಾನವನ್ನು ಉಳಿಸಿಕೊಂಡ ಗೌರವ ಇರುತ್ತದೆ. ಆ ಗೆಲುವು ಯಡಿಯೂರಪ್ಪ ಅವರನ್ನು ಕೈ ಬಲಪಡಿಸಿದಂತೆ ಆಗಲಿದೆ. ಒಂದು ವೇಳೆ ಚುನಾವಣೆ ಫಲಿತಾಂಶ ಏರುಪೇರಾದರೆ ಸರ್ಕಾರಕ್ಕೆ ಮುಖಭಂಗ ಮಾತ್ರವಲ್ಲ ,ಯಡಿಯೂರಪ್ಪಗೆ ಹಿನ್ನಡೆ ಅಲ್ಲಿಂದಲೇ ಶುರುವಾಗುತ್ತದೆ. ಶತ್ರುಗಳ ಕಾಟ ಜಾಸ್ತಿ ಆಗಲಿದೆ. ಯಡಿಯೂರಪ್ಪ ಅವರ ಬಾಯಿ ಮುಚ್ಚಿಸುವ ಶಕ್ತಿಗಳು ಮೇಲುಗೈ ಸಾಧಿಸುವ ಸಾಧ್ಯತೆಗಳಿವೆ.

ಗೋಹತ್ಯೆ ನಿಷೇಧ ಕಾಯ್ದೆ, ಸರ್ಕಾರದ ವಿವಿಧ ಅಭಿವೃದ್ಧಿ ಕೆಲಸಗಳು, ಅಕ್ರಮ ಗಣಿಗಾರಿಕೆಯ ಆರೋಪ, ಅಕ್ರಮ ತಡೆಗೆ ಕೈಗೊಂಡ ಕ್ರಮಗಳಿಗೆ ಜನರ ಸ್ಪಂದನೆ ಏನು ಎಂಬುದು ಫಲಿತಾಂಶದಿಂದ ವ್ಯಕ್ತವಾಗಲಿದೆ. ಸಹಜವಾಗಿಯೇ ಇದು 'ಟ್ರೆಂಡ್‌ ಸೆಟ್ಟರ್‌' ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಪ್ರಮುಖ ಪ್ರತಿ ಪಕ್ಷ ವಾದ ಕಾಂಗ್ರೆಸ್‌ ಪಾಲಿಗೂ ಇದು ಸವಾಲಿನ ಚುನಾವಣೆ. ಗುಂಪುಗಾರಿಕೆ- ಒಳಜಗಳದಿಂದ ನರಳುತ್ತಿದ್ದ ಕಾಂಗ್ರೆಸ್‌ ಪಕ್ಷವನ್ನು ಬಳ್ಳಾರಿ ಪಾದಯಾತ್ರೆ ಒಗ್ಗೂಡಿಸಿದೆ. ಎಲ್ಲಾ ನಾಯಕರು ಹೆಜ್ಜೆಗೆ ಹೆಜ್ಜೆ ಹಾಕಿ ಪಾದಯಾತ್ರೆ ಯಶಸ್ವಿ ಗೊಳಿಸಿದರು. ಬಹುಕಾಲದ ನಂತರ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ತನ್ನ ಶಕ್ತಿ ಪ್ರದರ್ಶಿಸಿದೆ. ಈ ಶಕ್ತಿಯ 'ಎಫೆಕ್ಟ್' ಏನು ಎಂಬುದು ಉಪ ಚುನಾವಣೆಗಳಲ್ಲಿ ಸಾಬೀತು ಆಗಲಿದೆ.‌ ಒಂದು ವೇಳೆ ಗೆದ್ದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಯಕತ್ವಕ್ಕೆ ಮನ್ನಣೆ ಖಂಡಿತ, ಇಲ್ಲದಿದ್ದರೆ ಹಿನ್ನಡೆ. ಕಡೂರಿನಲ್ಲಿ ಹಠಕ್ಕೆ ಬಿದ್ದು ಕೃಷ್ಣಮೂರ್ತಿ ಸಹೋದರ ಕೆ.ಎಂ. ಕೆಂಪರಾಜುಗೆ ಟಿಕೆಟ್‌ ಕೊಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಹಾಗಾಗಿ ಇಲ್ಲಿ ಸಿದ್ದರಾಮಯ್ಯ ಅವರ ಪ್ರತಿಷ್ಠೆ ಅಡಗಿದೆ. ತಮ್ಮ ನಾಯಕತ್ವದ ವರ್ಚಸ್ಸು ಹಾಗೂ ಪಾದಯಾತ್ರೆಯ 'ಎಫೆಕ್ಟ್' ಏನು ಎಂಬುದನ್ನು ಸಿದ್ದರಾಮಯ್ಯ ಓರೆಗೆ ಹಚ್ಚಿದ್ದಾರೆ.

ಅತ್ತ ಗುಲ್ಬರ್ಗದಲ್ಲಿ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಇಬ್ಬರೂ ತಮ್ಮ ವರ್ಚಸ್ಸು , ಪ್ರಭಾವವನ್ನು ಪಣಕ್ಕೆ ಇಟ್ಟಂತಿದೆ. ಧರ್ಮಸಿಂಗ್‌ ಅವರು 2008ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ 2009ರ ಲೋಕಸಭಾ ಚುನಾವಣೆಯಲ್ಲಿ ಬೀದರ್‌ನಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಈಗಿನ ಉಪ ಚುನಾವಣೆಗೆ ಪುತ್ರ ಡಾ. ಅಜಯ್ಸಿಂಗ್‌ ಅವರನ್ನು ಕಣಕ್ಕಿಳಿಸುವ ಮೂಲಕ ಕುಟುಂಬದ ರಾಜಕೀಯ ಭವಿಷ್ಯದ ಪರೀಕ್ಷೆಗೆ ಮುಂದಾಗಿದ್ದಾರೆ. ಇಲ್ಲಿ ಕಾಂಗ್ರೆಸ್‌ ಗೆದ್ದರೆ ಖರ್ಗೆ-ಧರಂ ಜೋಡಿ ಹೈ ದರಾಬಾದ್‌ ಕರ್ನಾಟಕದಲ್ಲಿ ಇನ್ನೂ ಪ್ರಭಾವ ಶಾಲಿ ಎಂಬ ಸಂದೇಶ ಹೊರ ಬೀಳಲಿದೆ. ಇಲ್ಲದಿದ್ದರೆ ಇಬ್ಬರೂ ತೀವ್ರ ಮುಖಭಂಗಕ್ಕೆ ಒಳಗಾಗಲಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಪ್ರತಿನಿಧಿಸುವ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಕಡೂರು ಸೇರಿರುವುದರಿಂದ ಗೌಡರಿಗೂ ಪ್ರತಿಷ್ಠೆ ಹಾಗೂ ಸವಾಲು . ಅದೇ ರೀತಿ ಗುಲ್ಬರ್ಗದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಅನುಕಂಪ ಅಥವಾ ಲಿಂಗಾಯತ ಉಪ ಜಾತಿಗಳ ಒಡಕಿನ ಲಾಭ ಪಡೆಯಲೋ ಎಂಬಂತೆ ಚಂದ್ರಶೇಖರ ಪಾಟೀಲ ರೇವೂರ ಅವರ ಪತ್ನಿ ಅರುಣಾ ಪಾಟೀಲ್‌ ರೇವೂರ ಅವರನ್ನು ಕಣಕ್ಕಿಳಿಸಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಗುಲ್ಬರ್ಗದಲ್ಲಿ ಇಡೀ ಚುನಾವಣೆಯನ್ನು ಕುಮಾರಸ್ವಾಮಿ ತಮ್ಮ ಹೆಗಲಿಗೆ ಹಾಕಿಕೊಂಡು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಎರಡರಲ್ಲಿ ಒಂದು ಕಡೆ ಯದಾರೂ ಗೆಲುವು ಸಾಧಿಸಿ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಬೇಕೆಂದು ಅಪ್ಪ-ಮಗ ಛಲ ತೊಟ್ಟಿದ್ದಾರೆ. ಹೀಗಾಗಿ ಕದನ ಕುತೂಹಲ ಕೆರಳಿಸಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಉದಯವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-10 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಅಶ್ಲೀಲ ಕಲಾಪಕ್ಕೆ ಸದನ ಬಲಿ
»ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
»ವಿಧಾನಸೌಧದಲ್ಲಿ ಸಚಿವತ್ರಯರಿಂದ ಅಶ್ಲೀಲ ಚಿತ್ರ ವೀಕ್ಷಣೆ: ಸರಕಾರ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ
»ಹಾಸನ: ವಿಟಿಯು ಕುಲಪತಿ ವಿರುದ್ಧ ಪ್ರತಿಭಟನೆ
»ಬನ್ನೇರುಘಟ್ಟಕ್ಕೆ ಪಠಾಣ್, ಸಂದೀಪ್ ಪಾಟೀಲ್ ಭೇಟಿ
»ಪಾವಗಡಕ್ಕೆ ಕುಡಿಯುವ ನೀರಿಗೆ ಆಗ್ರಹಿಸಿ ಪಾದಯಾತ್ರೆ: ‘ಬೆಂಗಳೂರು ಚಲೋ’ಗೆ ವಿದುಕ್ತ ಚಾಲನೆ
»‘ಬ್ಲೂ ಫಿಲಂ’ ಸಚಿವರ ವಿರುದ್ಧ ಭುಗಿಲೆದ್ದ ಆಕ್ರೋಶ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ; ಶಾಸಕ ಸ್ಥಾನದಿಂದಲೂ ಅನರ್ಹಕ್ಕೆ ಒತ್ತಾಯ
»ಶಾಸಕತ್ವ ಅನರ್ಹಗೊಳಿಸಲು ಆಗ್ರಹಿಸಿ ಸಿಪಿಐ ಧರಣಿ
»ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
»ನಾವೇಕೆ ಕ್ಷಮೆಯಾಚಿಸ್ಬೇಕು-ಡೀವಿ; ಕಳಂಕಿತರಿಗೆ ಬಿಜೆಪಿ ಬೆಂಬಲ
»ಸದನದಲ್ಲಿ ‘ಬ್ಲೂಫಿಲಂ’ ವೀಕ್ಷಣೆ: ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ; ಸಿದ್ದರಾಮಯ್ಯ
»ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ 'ಕೈ' ಪ್ರತಿಭಟನೆ, ಪ್ರತಿಕೃತಿ ದಹನ
»ಬಿಬಿ‌ಎಂಪಿ ಹಗರಣ:ಎಲ್ಲ ಕಾಮಗಾರಿಗಳ ತನಿಖೆಗೆ ಸರ್ಕಾರ ಆದೇಶ
»ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್‌ ಚಾರಿಯಟ್‌' 'ಹೌಸ್‌ ಫ‌ುಲ್‌ ಜರ್ನಿ' ಆರಂಭ: ರೈಲಿನಲ್ಲಿ ಅಮೆರಿಕ, ಆಸ್ಟ್ರಿಯಾದ 80 ಪ್ರವಾಸಿಗರು
»ಅನುದಾನ ಬಿಡುಗಡೆಗೆ ಆಗ್ರಹಿಸಿ ಆಮರಣ ಉಪವಾಸ : ಕಣ್ತೆರೆಯದ ಸರ್ಕಾರ: ಅತಂತ್ರರಾದ ಶಿಕ್ಷಕರು
»ಯೋಗ ವಿಜ್ಞಾನ ಶಿಬಿರ: ಬಜೆಟ್‌ನಲ್ಲಿ ಯೋಗಕ್ಕೆ ವಿಶೇಷ ಒತ್ತು: ಸಿ‌ಎಂ
»ನನ್ನ ಮೇಲಿನ ಆರೋಪಗಳೆಲ್ಲ ನಿರಾಧಾರ: ಮಾಜಿ ಸಿ‌ಎಂ ಯಡಿಯೂರಪ್ಪ ನನ್ನ ಸಂಬಂಧಿಕರಲ್ಲ: ನ್ಯಾ. ಬನ್ನೂರಮಠ ( Update)
»ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
»ಹೂವಿನಹಡಗಲಿಯಲ್ಲಿ ಪ್ರತ್ಯೇಕ ದುರಂತ : ಅಪಘಾತದಲ್ಲಿ 8, ತೆಪ್ಪ ಮುಳುಗಿ 5ಸಾವು
»ಆಧಾರ್ ಕಾರ್ಡ್‌ಗೆ ಲಂಚವೇ ಆಧಾರ: ಸರ್ಕಾರದಿಂದ ತನಿಖೆ ಭರವಸೆ
»50 ಕೋಟಿ ಯುವಕರಿಗೆ ಕೌಶಲ ತರಬೇತಿ: ಖರ್ಗೆ
»ಏಡ್ಸ್ ಜಾಗೃತಿ ಜಾಥಾಕ್ಕೆ ಡಾ.ಸಲೀಂ ಚಾಲನೆ
»ಕಲ್ಲಡ್ಕ ಭಟ್ಟರ ಗಡಿಪಾರಿಗೆ ಒತ್ತಾಯ: ಸದನದಲ್ಲಿ ಕೋಲಾಹಲ; ವಿಪಕ್ಷದಿಂದ ಸಭಾತ್ಯಾಗ
»ತರಕಾರಿ ಸೇವಿಸಿ; ರೋಗ ತಡೆಗಟ್ಟಿ: ಡಾ.ಎಂ.ಆರ್. ಹುಲಿನಾಯ್ಕರ್
»ಸರಕಾರಿ ಜಾಗದಲ್ಲಿ ಅನಧಿಕೃತ ನಾಗರಕಟ್ಟೆ ನಿರ್ಮಾಣ: ಪಿಡಬ್ಲುಡಿ ಇಲಾಖೆಯ ವರ್ತನೆಗೆ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ
»ಮಂಡ್ಯ: ಮಕ್ಕಳ ಹಬ್ಬದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಸೊಗಡು ಅನಾವರಣ
»ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿ ಬ್ರಹ್ಮರಥೋತ್ಸವ
»ಹಾಸನದ ಆರು ತಾಲೂಕುಗಳು ಬರಪೀಡಿತ: ಬೇಸಿಗೆ ಸಮಸ್ಯೆ ನಿವಾರಣೆಗೆ ಕ್ರಮ: ನೂತನ ಜಿಲ್ಲಾಧಿಕಾರಿ ಮೋಹನ್‌ರಾಜ್
»ರೈತರ ಮೇಲೆ ನಿರಂತರ ದಬ್ಬಾಳಿಕೆ ತಡೆಗೆ ಸರಕಾರ ವಿಫಲ: ಕುಮಾರಸ್ವಾಮಿ ಆರೋಪ
»ಪುಣ್ಯಕ್ಷೇತ್ರದಲ್ಲಿ ಗಾಂಜಾ ಬಾಬಾಗಳ ದಮ್ ಮಾರೋ ದಮ್*
»SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
»ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
»ನೇತ್ರಾಣಿ ದ್ವೀಪದಲ್ಲಿ ಬಾಂಬ್ ಸ್ಫೋಟ; ಆಕ್ಷೇಪಣೆಗೆ ಆದೇಶ
»ಅಧಿಕಾರ ಇಲ್ಲದ ಕುಮಾರಸ್ವಾಮಿ ಮಾನಸಿಕ ಅಸ್ವಸ್ಥ: ಪುಟ್ಟಣ್ಣಯ್ಯ
»ಹೂವಿನಹಡಗಲಿ: ಬಸ್- ಕ್ರೂಸರ್ ಜೀಪ್ ಢಿಕ್ಕಿ; ಏಳು ಮಂದಿಯ ಸಾವು; ನಾಲ್ವರಿಗೆ ಗಾಯ
»ಬಿ‌ಎಸ್‌ವೈ ಸಂಬಂಧಿ ಅಲ್ಲ, ಆರೋಪಗಳೆಲ್ಲ ಸುಳ್ಳು: ಬನ್ನೂರುಮಠ
»ಕಲಾಪಕ್ಕೆ ಹಾಜರ್; ಎಲ್ಲರ ಗಮನ ಸೆಳೆದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು
»ಕರ್ನಾಟಕದ ಎರಡು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕಗಳಲ್ಲಿ ಹರೆಕಳ ಹಾಜಬ್ಬನವರ ಜೀವನ ಕಥೆಯ ಸೇರ್ಪಡೆ
»ಚಿತ್ರದುರ್ಗ: ವಿದ್ಯುತ್ ಸ್ಪರ್ಶಿಸಿ ಇಬ್ಬರು ಸಾವು
»ಭಾರತ ಹುಣ್ಣಿಮೆ: ಇಂದು ಸವದತ್ತಿ ಯಲ್ಲಮ್ಮನ ಜಾತ್ರೆ
» ಉಪನ್ಯಾಸಕರ ಸೇವೆ ಕಾಯಂಗೊಳಿಸುವಂತೆ ಒತ್ತಾಯ: ಪ್ರತಿಭಟನೆ
»ಯುವತಿಯ ಮೈಮೇಲೆ ಕೈಚಲಕಕ್ಕೆ ಯತ್ನ; ಸಿಕ್ಕಾಪಟ್ಟೆ ಗೂಸಾ
»ಅರಣ್ಯ ಕಾಯ್ದೆ ಉಲ್ಲಂಘನೆ ಮಾಡಿ ಟ್ರೆಕ್ಕಿಂಗ್: 21 ಮಂದಿ ಬಂಧನ
»ಭರದಿಂದ ಸಾಗಿದ 43ಕೋಟಿ ರೂ ವೆಚ್ಚದ ತುಂಗಭದ್ರಾ ಸೇತುವೆ ಕಾಮಗಾರಿ
»ಮತ್ತೆ ಸಿಡಿದ ಗಣಿ ವರದಿ: ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ | ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಅಧಿಕಾರಿಗಳನ್ನು ನೇಣಿಗೇರಿಸಿ: ಸಿದ್ದು ಗುಡುಗು
»ಸಂಘರ್ಷದ ನಡುವೆಯೂ ಬಿಜೆಪಿ ಚುನಾವಣೆ ಸಿದ್ಧತೆ: ನಾಯಕತ್ವದ ಬಗ್ಗೆ ಚರ್ಚೆ ಬೇಡ: ಈಶ್ವರಪ್ಪ
»ಲೋಕಾಯುಕ್ತ ಸ್ಥಾನದಿಂದ ಹಿಂದೆ ಸರಿದ ಬನ್ನೂರಮಠ: ಕೊನೆಗೂ ಗೆದ್ದ ರಾಜ್ಯಪಾಲರ ಹಠ
»ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಕ್ರಮ: ಶರಣಾಗತರಿಗೆ ತಲಾ 2 ಲಕ್ಷ ರೂ. ದಾಳಿಯಲ್ಲಿ ಸತ್ತ ಪೋಲೀಸ್ ರಿಗೆ 5 ಲಕ್ಷ ರೂ.ಪರಿಹಾರ; ಕಾರ್ಕಳದ ಐಜಿಪಿ- ಎಎನ್‌ಎಫ್ ಹೆಗಲಿಗೆ ನಕ್ಸಲ್ ನಿಗ್ರಹ ಜವಾಬ್ದಾರಿ; 500 ಪೊಲೀಸರಿಗೆ ವಿಶೇಷ ತರಬೇತಿ
»ಮತ್ತೆ ಸಿಡಿದ ಗಣಿ ವರದಿ: ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ
»ಹೊಸ ಸರಕಾರಿ ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ: ಶೀಘ್ರದಲ್ಲೇ ಕಾಯ್ದೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri