ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ |
ಪ್ರಕಟಿಸಿದ ದಿನಾಂಕ : 2010-09-09
ಮಂಗಳೂರು,ಸೆ.09: ಮಂಗಳೂರು ಗುತ್ತಿಗೆದಾರರ ಬಾಕಿ ಇರುವ ಬಿಲ್ಲು ಪಾವತಿಸುವಂತೆ ಅಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗುತ್ತಿದಾರರ ಸಂಘದ ಸದಸ್ಯರು ದ.ಕ.ಜಿಲ್ಲಾ ಪಂಚಾಯತ್ ಕಛೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಸದಸ್ಯರ, ರಾಜ್ಯಸಭಾ ಸದಸ್ಯರ, ಶಾಸಕರ, ವಿಧಾನ ಪರಿಷತ್ ಸದಸ್ಯರ ಅನುದಾನ ಹಾಗೂ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನೀರು ಸರಬರಾಜು ಯೋಜನೆ ಲೆಕ್ಕ ಶಿರ್ಷಿಕೆ 5054, 3054 ರಸ್ತೆ ಮತ್ತು ಸೇತುವೆ 12ನೇ ಹಣಕಾಸು, ಪ್ರಕೃತಿ ವಿಕೋಪ ಪರಿಹಾರಿ ನಿಧಿಯು ಸೇರಿದಂತೆ ಸರಕಾರ ಅನುಷ್ಠಾನಗೊಳಿಸುವ ಹಲವಾರು ಯೋಜನೆಗಳು ಕಾಮಗಾರಿಗಳನ್ನು ಗುತ್ತಿಗೆದಾರರಾದ ನಾವು ಹಲವಾರು ವರ್ಷಗಳಿಂದ ನಿರ್ವಹಿಸಿಕೊಂಡು ಬರುತ್ತಿದ್ದೇವೆ.
ಆದರೆ 2 ವರ್ಷಗಳಿಂದ ನಾವು ನಿರ್ವಹಿಸುವ ಕಾಮಗಾರಿಗಳು ಪೂರ್ಣಗೊಂಡು ಸಂಬಂಧ ಪಟ್ಟವರಿಗೆ ಬಿಲ್ಲು ಹಾಜರು ಪಡಿಸಿ 2 ವರ್ಷ ಕಳೆದರೂ ನಮಗೆ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಾ ಇದ್ದಾರೆ. ಅಧಿಕಾರಿಗಳ ಈ ವಿಳಂಬ ನೀತಿಯನ್ನು ಖಂಡಿಸಿ ಜಿಲ್ಲಾದ್ಯಂತ ಕೆಲಸ ಸ್ಥಗಿತಗೊಳಿಸಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಕಾರರ ಮುಖಂಡರು ಈ ಸಂದರ್ಭದಲ್ಲಿ ತಿಳಿಸಿದರು.
ಸಂಘದ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ಕಾರ್ಯದರ್ಶಿ ಕಬೀರ್, ಸಹಕಾರ್ಯದರ್ಶಿ ಇಬ್ರಾಹಿಂ ಮಂಚಿ, ಸಂಚಾಲಕ ಶ್ರೀನಿವಾಸ್ ಶೆಟ್ಟಿ, ಹೇಮಂತ್ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|