ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್. |
ಪ್ರಕಟಿಸಿದ ದಿನಾಂಕ : 2010-09-09
(ಗಲ್ಫ್ ಕನ್ನಡಿಗ ವಿಶೇಷ ಪ್ರತಿನಿಧಿ ವರದಿ / ಚಿತ್ರ : ಸತೀಶ್ ಕಾಪಿಕಾಡ್)
ಮಂಗಳೂರು,ಸೆ.09: ಸೆ.11ರ ಶನಿವಾರದಂದು ನಾಡಿನಾದ್ಯಂತ ಗಣೇಶ ಚತುರ್ಥೀ ಸಂಭ್ರಮ. ಈ ಪ್ರಯುಕ್ತ ನಗರದಲ್ಲಿ ಗಣೇಶ (ಮೂರ್ತಿ)ವಿಗ್ರಹ ರಚನಾ ಕೆಲಸಗಳು ಭರದಿಂದ ಸಾಗುತ್ತಿದೆ. ಈಗಾಲೇ ಗಣೇಶನ ಮೂರ್ತಿ ತಯಾರಿಸು ವುದರಲ್ಲಿ ಪ್ರಸಿದ್ಧಿ ಹೋದಿರುವ ಮಣ್ಣಗುಡ್ಡೆಯ ದಿ.ಎಂಮೋಹನ್ ರಾವ್ ಅವರ ಮನೆಯಲ್ಲಿ ಸುಮಾರು 190 ಗಣಪತಿ ವಿಗ್ರಹಗಳ ರಚನಾ ಕಾರ್ಯವು ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ.
ದಿ.ಎಂ ಮೋಹನ್ ರಾಯರು 73 ವರ್ಷಗ ಹಿಂದೆ ಈ ಗಣೇಶ ವಿಗ್ರಹ ನಿರ್ಮಾಣ ಕಾರ್ಯ ವನ್ನು ಆರಂಭಿಸಿದ್ದರು.ಇದೀಗ ಅವರ ಕಾಲಾ ನಂತರ ಅವರ ಪುತ್ರ ಎಂ ಪ್ರಭಾಕರ್ ರಾವ್ ಅವರು ತಮ್ಮ ಸಹೋದರರೊಂದಿಗೆ ಸೇರಿ ಈ ಕಾರ್ಯವನ್ನು ಮುಂದುವರಿಸಿ ಕೊಂಡು ಬಂದಿದ್ದಾರೆ.
ಈ ಸಂದರ್ಭದಲ್ಲಿ ಗಲ್ಫ್ ಕನ್ನಡಿಗದ ವಿಶೇಷ ಪ್ರತಿನಿಧಿಯೊಂದಿಗೆ ಮಾತನಾಡಿದ ಪ್ರಭಾಕರ್ ರಾವ್ ಅವರು, ಪ್ರತಿ ವರ್ಷ ಪೂಜಾ ವಿಧಿ ವಿಧಾನಗಳೊಂದಿಗೆ ಚಿತ್ರ ನಕ್ಷತ್ರದಲ್ಲಿ ಗಣೇಶ ವಿಗ್ರಹ ರಚನೆಯನ್ನು ಆರಂಭಿಸಲಾಗುತ್ತದೆ. ಬಳಿಕ ಪಂಚಮಿಯ ದಿನದಂದು ಬಣ್ಣ ಹಚ್ಚಲು ಆರಂಭಿಸಲಾಗುವುದು, ಉಳಿದಂತೆ ದಿನಾ ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕೆಲಸ ಆರಂಭಿಸುತ್ತೇವೆ.
ಈ ವಿಗ್ರಹ ರಚನೆಗೆ ಸುಮಾರು 2ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಇಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿಯಂದು ಸಂಘನಿಕೇತನ, ಫರಂಗೀ ಪೇಟೆ, ಪೊಲೀಸ್ ಲೈನ್, ಕೆ.ಎಸ್.ಆರ್.ಟಿಸಿ, ಮುಂತಾದ ಬೇರೆ ಬೇರೆ ಕಡೆಗಳ ಸುಮಾರು 16 ಸಾರ್ವಜನಿಕ ಗಣೇಶ ವಿಗ್ರಹ ಹಾಗೂ ಇತರರ ಪೂಜೆಯ ಗಣಪತಿ ವಿಗ್ರಹ ಸೇರಿದಂತೆ ಒಟ್ಟು 190 ವಿಗ್ರಹಗಳನ್ನು ನಿರ್ಮಿಸಿಕೋಡಲಾಗುವುದು ಎಂದು ತಿಳಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|