ಡಾ. ನಾಗಭೂಷಣ ಮೂಲ್ಕಿ ಅವರ ಗಣ ಗಣ ಗಣಪತಿ ಕವನ |
ಪ್ರಕಟಿಸಿದ ದಿನಾಂಕ : 2010-09-09
ಗಲ್ಫ್ ಕನ್ನಡಿಗ.ಕಾ೦ ವತಿಯಿ೦ದ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು
ಗಣ ಗಣ ಗಣಪತಿ
ಗಣ ಗಣ ಗಣಪತಿ
ನೀ ಗಣಗಳ ಪತಿ ||ಗಣ||
ಶುಭಮತಿ ನೀಡಿ
ವಿಘ್ನವ ನಶಿಸಿ
ಸಂತಸ ಕ್ಷಣಗಳ
ಅನುದಿನ ಕರುಣಿಸು ||ಗಣ||
ಜ್ಞಾನವೆ ಮೂಲ
ಎಲ್ಲಾ ಕಾಲ
ಚಾಲನೆ ನೀಡು
ಪಾಲನೆ ಮಾಡು ||ಗಣ||
ಮನೋಗಣನೆಯ
ಗುಣಗಳ ಗಣಗಳ
ಅಧಿಪತಿ ನೀನೆ
ಸುಗುಣ ಸುಂದರ ||ಗಣ||
ಮೂಲಾಧರಾ
ಸಹಸ್ರಕಾರ
ಸೇರೆ ನೀನೆ
ಶಕ್ತಿಯ ಆಗಾರ ||ಗಣ||
ವರದಿಯ ವಿವರಗಳು |
 |
ಕೃಪೆ : ಡಾ. ನಾಗಭೂಷಣ ಮೂಲ್ಕಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|