ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ |
ಪ್ರಕಟಿಸಿದ ದಿನಾಂಕ : 2010-09-09
ಬ್ರಿಟೀಷರು ಭಾರತಕ್ಕೆ ನೀಡಿದ ಕೊಡುಗೆಗಳಲ್ಲಿ ಶಿಕ್ಷಣವೂ ಒಂದಾಗಿದೆ. ಆದರೆ ಅದನ್ನು ನಾವು ಇಂದಿಗೂ ಅನ್ನುಸರಿಸುತ್ತಿರುವುದು ವಿಷಾದನೀಯ. ಅವರು ಒಂದರ್ಥದಲ್ಲಿ ಅವರು ಭಾರತವನ್ನು ಒಂದಾಗಿಸಿದ್ರು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ನಿವ್ರತ್ತ ಪ್ರಾಂಶು ಪಾಲ ಪ್ರೊ.ಎಸ್.ಪ್ರಭಾಕರ್ ಹೇಳಿದರು.

ಅವರು ಆಳ್ವಾಸ್ ಎಜುಕೇಶನ್ ಪೌಂಡೇಶನ್ ಬುಧವಾರ ವಿದ್ಯಾಗಿರಿಯಲ್ಲಿ ಆಯೋಜಿಸಿದ್ದ ಶಿಕ್ಷಣ ದಿನಾಚರಣೆಯಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.
ಉತ್ತಮ ಶಿಕ್ಷಕರ ಅಗತ್ಯ ಇಂದಿನ ಅಗತ್ಯವಿದೆ ಎಂದ ಮಣಿಪಾಲ ವಿಶ್ವವಿದ್ಯಾಲಯದ ಕುಲಾಧಿ ಪತಿ ಎಚ್.ಎಸ್.ಬಲ್ಲಾಳ್ ಅವರು ಆಧುನಿಕ ಯುಗದ ಶಿಕ್ಷಣ ಕ್ರಾಂತಿಯ ಹರಿಕಾರ ಎಂದು ಬಣ್ಣಿಸಿ ದರು.

ನಿವ್ರತ್ತ ಪ್ರಾಂಶುಪಾಲರಾದ ಡಾ.ಎಂ.ಪ್ರಭಾಕರ ಜೋಶಿ, ಡಾ.ಲೀಲಾ ಉಪಾಧ್ಯಾಯ, ರೆ.ಲಾರೆನ್ಸ್ ಆರ್.ಡಿಸೋಜಾ ಮತ್ತು ನಿವ್ರತ್ತ ಮುಖ್ಯೋಪಾಧ್ಯಾಯ ಕೂರಾಡಿ ಸದಾಶಿವ ಕಲ್ಕೂರ ಅವರು ಸೇರಿದಂತೆ ಆರು ಮಂದಿಗೆ 5000 ರೂಪಾಯಿ ಸಹಿತ ಶಿಕ್ಷಕ ಪ್ರಶಸ್ತಿಯನ್ನು ನೀಡಲಾ ಯಿತು.

ಶಾಸಕ ಅಭಯಚಂದ್ರ ಅವರು ಮುಖ್ಯ ಅತಿಥಿಗಳಾಗಿ ಶಿಕ್ಷಕರು ಸಮಾಜದ ಅಭಿವ್ರದ್ದಿಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಡಾ.ಮೋಹನ ಆಳ್ವ ಅವರು ಅಧ್ಯಕ್ಷತೆ ವಹಿಸಿ ನಿವ್ರತ್ತ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಮುಂದಿನ ಸಮಾಜಕ್ಕೆ ಉತ್ತಮ ಶಿಕ್ಷಕರನ್ನು ನೀಡಲು ಪ್ರೇರಣೆ ನೀಡಲಿ ಎಂದು ಹಾರೈಸಿದರು.

ಉಪನ್ಯಾಸಕ ವೇಣುಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.
100 ಶೇಕಡಾ ಪಲಿತಾಂಶ ನೀಡಿದ ಉಪನ್ಯಾಸಕರನ್ನು ಗೌರವಿಸಲಾಯಿತು.
ಸಮಯಕ್ಕೆ ಸರಿಯಾದ ಕಾರ್ಯಾಕ್ರಮವು ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ವರದಿಯ ವಿವರಗಳು |
 |
ಕೃಪೆ : ರಾಜ್ ಶೇಖರ್, ಅಜೆಕಾರ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|