ಮೂಡುಬಿದಿರೆ: ತುಳು ಸ೦ಸ್ಕ್ರತಿ ಬಿ೦ಬಿಸುವ ದೇಗುಲಕ್ಕೆ ಜರ್ಮನ್ ತಾಮ್ರದ ಸಿಂಗಾರ : ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾಗಿ ಬೆಳೆಯಲಿದೆ ಭೂತನಾಥೇಶ್ವರ ದೇವಸ್ಥಾನ |
ಪ್ರಕಟಿಸಿದ ದಿನಾಂಕ : 2010-09-09
ತುಳು ಸಂಸ್ಕೃತಿ ಬಿಂಬಿಸುವ ದೇವಸ್ಥಾನವನ್ನು ಜರ್ಮನ್‌ನಿಂದ ಆಮದು ಮಾಡಿಕೊಂಡ ತಾಮ್ರ ದ ತಗಡುಗಳಿಂದ ಸಿಂಗರಿಸಲಾಗಿದೆ. ಭೂತನಾಥೇಶ್ವರ ದೇವಸ್ಥಾನ ಜರ್ಮನಿಯ ತಾಮ್ರದ ತಗಡುಗಳನ್ನು ಹೊದ್ದು ವಿಶಿಷ್ಟವಾಗಿ ಕಂಗೊಳಿಸುತ್ತ ಭಕ್ತರನ್ನು ಆಕರ್ಷಿಸುತ್ತಿದೆ.
ಮಂಗಳೂರಿನಿಂದ ಮೂಡುಬಿದಿರೆ ಮಾರ್ಗದಲ್ಲಿ ಎಡಪದವಿನಿಂದ 2 ಕಿಮೀ ಸಾಗಿದರೆ ಅಡಿಕೆ, ತೆಂಗಿನ ದಟ್ಟ ಹಸಿರಿನ ನಡುವೆ ಭೂತನಾಥೇಶ್ವರ ದೇವಸ್ಥಾನವಿದೆ. ಅದರ ವಾಸ್ತು, ಆಕಾರ ಎಲ್ಲವೂ ತುಳು ಸಂಸ್ಕೃತಿಯನ್ನು ಬಿಂಬಿಸುತ್ತದೆ. ಆದರೆ ಗರ್ಭಗುಡಿಯ ಛಾವಣಿಗೆ ಜರ್ಮನ್ ದೇಶದ ‘ಪಟೀನಾ ಕಾಪರ್’ ಅಳವಡಿಸಲಾಗಿದೆ. ಅದು ಛಾವಣಿಗೆ ವಿಶೇಷ ಮೆರುಗು ತಂದಿದೆ.
ಈ ದೇವಸ್ಥಾನಕ್ಕೆ ಹೊದಿಸಿರುವ ಜರ್ಮನ್ ತಾಮ್ರ ಹಸಿರು ಬಣ್ಣದ್ದು. ಭಾರತದಲ್ಲಿ ಸಿಕ್ಕುವ ತಾಮ್ರ ಮಳೆ,ಗಾಳಿ ಮತ್ತು ಬಿಸಿಲಿಗೆ ಕ್ರಮೇಣ ಬಣ್ಣ ಮತ್ತು ಅದರ ಹೊಳಪು ಕಳೆದುಕೊಳ್ಳುತ್ತದೆ. ಆದರೆ ಜರ್ಮನ್ ತಾಮ್ರ ನೂರಾರು ವರ್ಷಗಳಾದರೂ ಬಣ್ಣ ಮಸುಕಾಗುವುದಿಲ್ಲ. ಹೊಳಪು ಮಾಸುವು ದಿಲ್ಲ!
ಭೂತನಾಥೇಶ್ವರ ದೇಗುಲಕ್ಕೆ ಅಳವಡಿಸಲಾದ ಈ ‘ಪಟೀನಾ ಕಾಪರ್’ ಜಗತ್ತಿನ 3ನೇ ಅತಿ ದುಬಾರಿ ಲೋಹ ಎಂಬುದು ಗಮನಾರ್ಹ. ಚಿನ್ನ, ಬೆಳ್ಳಿಯ ನಂತರದ ದುಬಾರಿ ಲೋಹ ಇದು. ದೇವಸ್ಥಾನಕ್ಕೆ ಅಳವಡಿಸಿದ ತಾಮ್ರದ ಪ್ಲೇಟ್‌ಗಳಿಗೆ 70 ರಿಂದ 80 ಲಕ್ಷ ರೂ ವೆಚ್ಚವಾಗಿದೆ.
ಭೂತನಾಥೇಶ್ವರ ದೇವಸ್ಥಾನದ ಮತ್ತೊಂದು ವಿಶೇಷ ಎಂದರೆ ‘ಪಟೀನಾ ಕಾಪರ್’ ಬಳಸಿದ ಏಷಿಯಾದ ಮೊದಲ ದೇವಸ್ಥಾನವಾಗಿದೆ. ತುಳು ನಾಡಿನ ದೇವಸ್ಥಾನಗಳ ಗರ್ಭಗುಡಿಯಲ್ಲಿ ಮೂರು ಲಿಂಗಗಳು ಒಂದೇ ಕಡೆ ಇರುವುದು ಸಹ ಅಪರೂಪ. ಅಂತಹ ಅಪರೂಪವನ್ನು ಇಲ್ಲಿದೆ.
ಈ ದೇವಸ್ಥಾನಕ್ಕೆ ಜರ್ಮನಿ ತಾಮ್ರದ ಹೊಳಪು ಮಾತ್ರವಲ್ಲ, ಥಾಯ್‌ಲ್ಯಾಂಡಿನ ಸುಂದರ ಹೆಂಚುಗಳನ್ನು ಪೌಳಿಯ ಗೋಪುರಕ್ಕೆ ಜೋಡಿಸಲಾಗಿದೆ. ಹೀಗಾಗಿ ದೇವಸ್ಥಾನದ ಕಳೆ ಹೆಚ್ಚಾಗಿ ದೆ. 52 ಕೆಜಿ ಭಾರದ ಮಿಶ್ರಲೋಹದ ಗಂಟೆಯೂ ಇಲ್ಲಿದೆ.
ಮಾದರಿ: ಸುಮಾರು ಎರಡು ಕೋಟಿ ರೂ ವೆಚ್ಚದಲ್ಲಿ ನವೀಕೃತಗೊಂಡು ಬ್ರಹ್ಮಕಲಾಶಾಭಿಷೇಕ ನಡೆದಿದೆ. ನವೀಕರಣದ ರೂವಾರಿ ಮುಂಬೈನ ಉದ್ಯಮಿ ವಿಜಯನಾಥ ಶೆಟ್ಟಿ. ಬಡಗ ಎಡಪದವು ಮಿಜಾರಿನ ಮುಂಡಬೆಟ್ಟು ಮನೆತನಕ್ಕೆ ಸೇರಿದ ಈ ದೇಗುಲವನ್ನು ಜೀರ್ಣೋದ್ಧಾರಗೊಳಿಸಿ ಮುಂ ದಿನ ಪೀಳಿಗೆಯ ಭಕ್ತಸಮೂಹಕ್ಕೆ ಮಾದರಿ ದೇವಸ್ಥಾನವನ್ನಾಗಿ ಮಾಡುವುದು ನನ್ನ ಸಂಕಲ್ಪ ವಾಗಿತ್ತು.
ಅದಕ್ಕಾಗಿ ನನ್ನ ಕೆಲಸಗಳನ್ನು ಒಂದು ತಿಂಗಳು ಬದಿಗೊತ್ತಿ ದೇವಸ್ಥಾನದ ನವೀಕರಣ ಕಾರ್ಯ ನಡೆಯುವ ಸಂದರ್ಭದಲ್ಲಿ ಗ್ರಾಮದಲ್ಲೇ ಇದ್ದೇನೆ. ಸಾಂಪ್ರದಾಯಿಕ ವಾಸ್ತುವಿಗೆ ಧಕ್ಕೆ ಬಾರದಂತೆ ಆಧುನಿಕತೆಯ ಸ್ಪರ್ಶ ನೀಡಲಾಗಿದೆ. ಈ ದೇವಸ್ಥಾನ ಧಾರ್ಮಿಕ ಕೇಂದ್ರವಾಗದೆ ಶೈಕ್ಷಣಿಕ, ಸಾಂಸ್ಕೃತಿಕ ಕೇಂದ್ರವಾಗಿಯೂ ಬೆಳೆಯಬೇಕು ಎಂಬುದು ನಮ್ಮ ಮನೆತನದವರ ಅಪೇಕ್ಷೆ. ಇಲ್ಲಿ ವಸ್ತುಸಂಗ್ರಹಾಲಯ, ಶಾಲೆ, ಔಷಧಿ ವನ ನಿರ್ಮಾಣ ಮಾಡುವ ಯೋಜನೆ ಇದೆ ಇದೆ ಎನ್ನುತ್ತಾರೆ ಶೆಟ್ಟರು.
ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯದಲ್ಲಿ ಶೆಟ್ಟರಿಗೆ ಬಡಗ ಎಡಪದವು ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ತಮ್ಮೂರಿನ ಪಾಳುಬಿದ್ದ ದೇವಸ್ಥಾನ ಜೀರ್ಣೋದ್ಧಾರಗೊಂಡು ಪ್ರಸಿದ್ಧಿಗೆ ಬರುವಂತಾಗಿದೆ ಎಂಬ ಸಂತೋಷ ಗ್ರಾಮದ ಜನರಿಗೆ ಇದೆ. ಭೂತನಾಥೇಶ್ವರ ದೇವಸ್ಥಾನ ಕರಾವಳಿಗೆ ಬರುವ ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾಗಿ ಬೆಳೆಯಲಿದೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|