ಬೆ೦ಗಳೂರು : 11ರಿಂದ ಸಿಎಂ ಯಡಿಯೂರಪ್ಪ ಚೀನಾ ಪ್ರವಾಸ |
ಪ್ರಕಟಿಸಿದ ದಿನಾಂಕ : 2010-09-09
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಉನ್ನತ ಮಟ್ಟದ ನಿಯೋಗ ಈ ತಿಂಗಳ ೧೧ ರಿಂದ ೧೫ ರವರೆಗೆ ಚೀನಾ ಪ್ರವಾಸ ಕೈಗೊಳ್ಳಲಿದೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ನಿಯೋಗದಲ್ಲಿ ತಾವೂ ಸೇರಿದಂತೆ ರಾಜ್ಯದ ೧೧ ಕಂಪನಿಗಳ ಪ್ರತಿನಿಧಿಗಳು ಇರುತ್ತಾರೆ ಎಂದರು. ಶಾಂಘೈನಲ್ಲಿ ನಡೆಯಲಿರುವ ಉದ್ಯಮಿಗಳ ಸಮಾವೇಶ, ವಿಶ್ವ ಉದ್ಯಮಿಗಳ ವೇದಿಕೆ ಆಯೋಜಿಸಿರುವ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲಿರುವ ಯಡಿಯೂರಪ್ಪ ವಿಶ್ವದ ಖ್ಯಾತ ಕಂಪನಿ ಗಳ ಪ್ರತಿನಿಧಿಗಳ ಜತೆ ಸಮಾಲೋಚನೆಯನ್ನೂ ನಡೆಸಲಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|